ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಂಚ್ ಅವ್ಯವಸ್ಥೆ: ಶೀಘ್ರ ಪರಿಹಾರ’

Last Updated 8 ಜನವರಿ 2014, 6:24 IST
ಅಕ್ಷರ ಗಾತ್ರ

ತುಮರಿ: ಕರೂರು ಹೋಬಳಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಲಾಂಚ್‌ ಸಂಪರ್ಕ ಅವ್ಯವಸ್ಥೆಯನ್ನು ಸರಿಪಡಿಸುವ ಭಾಗವಾಗಿ  ಸಾಗರ ಉಪ ವಿಭಾಗಾಧಿಕಾರಿ ಉದಯಕುಮಾರ ಶೆಟ್ಟಿ ಲಾಂಚ್‌ ನಿಲ್ದಾಣಗಳಿಗೆ ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.

ದ್ವೀಪದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಳೆದ ತಿಂಗಳು ತುಮರಿಯಲ್ಲಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಭೆ ನಡೆದಿತ್ತು. ಲಾಂಚ್ ನಿಲುಗಡೆ ಮತ್ತು ದೇವಸ್ಥಾನದ ಸಹಭಾಗಿತ್ವದಲ್ಲಿ ಹೈಮಾಸ್ಟ್‌ ದೀಪ ಅಳವಡಿಕೆ ಮುಂತಾದ ಪ್ರಮುಖ ನಿರ್ಧಾರ ಅಂಗೀಕರಿಸಲಾಗಿತ್ತಾದರೂ ಜಾರಿಗೆ ಬಂದಿರಲಿಲ್ಲ.

ಈ ಹಿನ್ನೆಲೆಯಲ್ಲಿ ನಿಲ್ದಾಣಗಳಿಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹರೀಶ್ ಗಂಟೆ
ದ್ವೀಪದ ಮುಖಂಡರ ಜತೆ  ಲಾಂಚ್‌ ನಿಲ್ದಾಣಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಜತೆ ಚರ್ಚಿಸಿದರು.

ನಿಲ್ದಾಣಗಳಲ್ಲಿ ನೂಕುನುಗ್ಗಲು ತಪ್ಪಿಸಲು ಪ್ರಯಾಣಿಕರಿಗೆ ಲಾಂಚ್‌ ಏರಲು ಅನುಕೂಲ ವಾಗುವಂತೆ ಪ್ರತ್ಯೇಕ  ಪ್ಲಾಟ್‌ಫಾರಂಗಳನ್ನು ನಿರ್ಮಿಸಲು ಒಳನಾಡು ಮತ್ತು ಬಂದರು ಇಲಾಖೆ ಮುಂದಾಗಿರುವುದರಿಂದ ಬ್ಯಾರಿಕೇಡ್ ಅಳವಡಿಕೆ ಅಗತ್ಯವಿಲ್ಲ ಎಂದು ಶೆಟ್ಟಿ ಅಭಿಪ್ರಾಯಪಟ್ಟರು.

ನದಿಯ ಎರಡು ದಡಗಳಲ್ಲಿ ನಿಲ್ದಾಣಗಳಿಗೆ ಹೊಂದಿಕೊಂಡಂತೆ ಇರುವ  ಲೊಕೋಪಯೋಗಿ ಕಟ್ಟಡವನ್ನು ಬಳಸಿಕೊಂಡು ಸಿ.ಸಿ ಕ್ಯಾಮೆರಾ ಅಳವಡಿಸಲು ಅವರು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಗೆ ಸೂಚಿಸಿದರು.

ಹೈಮಾಸ್ಟ್‌ ದೀಪಗಳನ್ನು ನದಿಯ ಭಾಗಕ್ಕೆ ಪೂರ್ಣ ಬೆಳಕು ಬೀಳುವಂತೆ ಜೋಡಿಸುವಂತೆ ಸಲಹೆ ನೀಡಿದ ಅವರು ಅಂಬಾರಗೋಡ್ಲು ಭಾಗದಲ್ಲಿ ಕೋಳೂರು ಗ್ರಾಮ ಪಂಚಾಯ್ತಿ ನಿರ್ಮಿಸಿರುವ ಗೇಟ್‌ಗಳನ್ನು ಸ್ಥಳಾಂತರಿಸಲು ಸೂಚಿಸಿದರು.

ತುಮರಿ ಭಾಗದ ಲಾಂಚ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ವಾಹನ ನಿಲುಗಡೆಗೆ 5 ಎಕರೆ ಜಾಗವನ್ನು ಪಡೆಯಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದರು.

ಸಿಗಂದೂರು ದೇವಾಲಯದ ಧರ್ಮದರ್ಶಿ ರಾಮಪ್ಪ ಮಾತನಾಡಿ, ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮತ್ತು ಸ್ಥಳೀಯರು ಒಂದೇ ಲಾಂಚ್‌ನಲ್ಲಿ ಪ್ರಯಾಣಿಸುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ ದೇವಾಲಯದಿಂದ ಲಾಂಚ್‌ ನಿಲ್ದಾಣದ ಸುಧಾರಣೆಗೆ ಅಗತ್ಯ ಹಣಕಾಸು ನೆರವು ನೀಡುವುದಾಗಿ ತಿಳಿಸಿದರು.

ತಹಶೀಲ್ದಾರ್‌ ಸಾಜಿದ್‌ ಮುಲ್ಲಾ ಅಹಮದ್‌, ತಾಲ್ಲೂಕು ಪಂಚಾಯ್ತಿ ಇಒ ಸಿದ್ದಪ್ಪ, ಕೋಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಯರಾಮಶೆಟ್ಟಿ, ಮುಖಂಡರಾದ ಹುರುಳಿ ಹೂವಣ್ಣ, ನಾಗರಾಜ್‌ ಗುಮ್ಮನಬೈಲು, ಶ್ರೀಧರಮೂರ್ತಿ ಕಳಸವಳ್ಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT