ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಕಕಲ್ಯಾಣದ ಸಂದೇಶ ನೀಡಿದ ಗೀತೆ’

Last Updated 16 ಡಿಸೆಂಬರ್ 2013, 6:35 IST
ಅಕ್ಷರ ಗಾತ್ರ

ಉಡುಪಿ: ‘ನಿಷ್ಕಾಮ ಕರ್ಮ, ಲೋಕ ಕಲ್ಯಾಣದ ಶ್ರೇಷ್ಠ ಸಂದೇಶವನ್ನು ಶ್ರೀ ಕೃಷ್ಣ ಭಗವದ್ಗೀತೆಯ ಮೂಲಕ
ವಿಶ್ವಕ್ಕೆ ನೀಡಿದ್ದಾನೆ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಶ್ರೀ ಮದ್ಭಗವದ್ಗೀತಾ ಪ್ರವಚನ ಮಾಲಿಕೆ ಸಮಾರೋಪದಲ್ಲಿ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತ­ನಾಡಿದ ಅವರು, ಭಗವದ್ಗೀತೆ ಮಾನವ ಕುಲದ ಸಂವಿಧಾನ. ಸಮಗ್ರ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಗ್ರಂಥ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರತ್ನಾ ಆಚಾರ್ಯ, ಅಂಬಾ­ತನಯ ಮುದ್ರಾಡಿ, ಕಬಿಯಾಡಿ ಜಯರಾಮ ಆಚಾರ್ಯ, ಚೇಂಪಿ ರಾಮಚಂದ್ರ ಭಟ್, ಜಯ ಸಿ.­ಸುವರ್ಣ, ಲೋಕೇಶ್ ಪುತ್ರನ್ ದುಬೈ, ಡಾ. ಗುರುರಾಜ್ ಭಾಗವತ್ ಕಿದಿ­ಯೂ­ರು ಪ್ರಾಂಕ್ ಫರ್ನಾಂಡಿಸ್ ದುಬೈ, ಬಳ್ಕೂರು ಗೋಪಾಲ ಆಚಾ­ರ್ಯ, ಅರುಣಕಲಾ ಎಸ್.­ರಾವ್, ಸುನಿಲ್ ಜಾನ್ ಡಿ ಸೋಜ, ಆನಂದ ಸಿ.ಸುವರ್ಣ, ಕುದಿ ವಸಂತ ಶೆಟ್ಟಿ, ಪೆರ್ಡೂರು ರತ್ನಾಕರ ಕಲ್ಯಾಣಿ, ಆಸ್ಟ್ರೋ ಮೋಹನ್, ಗೋಪಾಲ್ ಕುಂದರ್, ಭೋಜರಾಜ್ ಆರ್.­ಕಿದಿ­ಯೂರು ಅವರನ್ನು ಸನ್ಮಾನಿಸಲಾಯಿತು.

ಪರ್ಯಾಯ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ, ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ  ಇದ್ದರು.

ಹೋಟೆಲ್‌ ಉದ್ಯಮಿ ಭುವನೇಂದ್ರ ಕಿದಿಯೂರು ಸ್ವಾಗತಿಸಿದರು. ನಾರಾ­ಯಣ ಎಂ.ಹೆಗಡೆ ಸಾಧಕರನ್ನು ಪರಿಚ­ಯಿಸಿದರು. ಹೀರಾ ಭುವನೇಂದ್ರ ಕಿದಿ­ಯೂರು ವಂದಿಸಿದರು. ಮುರಲಿ ಕಡೆಕಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT