ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿರೋಧಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ’

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್‌ಎಸ್‌):  ವಿರೋ­ಧಿಗಳ ಶಕ್ತಿಯನ್ನು ಕಾಂಗ್ರೆಸ್‌ ಪಕ್ಷ ಕೀಳಾಗಿ ಕಾಣುವುದಿಲ್ಲ ಎಂದು ಪ್ರಧಾನ­ಮಂತ್ರಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ. ಶುಕ್ರವಾರ ಇಲ್ಲಿ ನಡೆದ ಸಂವಾದ­ದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಕಿದ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ವಿರೋಧಿ­ಗಳನ್ನು ಗಂಭೀರವಾಗಿ ಪರಿಗಣಿಸು­ವವರಲ್ಲಿ ನಾನೂ ಒಬ್ಬ. ಇಲ್ಲಿ ಅತೃಪ್ತಿಗೆ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. 

ಕಾಂಗ್ರೆಸ್‌ ಪಕ್ಷ ಮುಂಬರುವ ಲೋಕ­ಸಭಾ ಚುನಾವಣೆಯನ್ನು ಆತ್ಮ­ಸ್ಥೈರ್ಯ­ದಿಂದ ಎದುರಿಸಲಿದೆ. ಚುನಾ­ವಣಾ ಮುಗಿಯುವುದರೊಂದಿಗೆ  ಎಲ್ಲವೂ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ. ಮತ ಬೇಟೆಯ ಗಿಮಿಕ್‌ ಅಲ್ಲ: ಪ್ರಸ್ತಾವಿತ ಕೋಮು ಹಿಂಸಾಚಾರ ತಡೆ ಮಸೂದೆ-ಯು ಚುನಾವಣೆಯಲ್ಲಿ ‘ಮತಗಳಿಸುವ    ಗಿಮಿಕ್‌’ ಎಂಬ ಕಾಂಗ್ರೆಸ್ಸೇ­ತರ ಪಕ್ಷಗಳ ಆರೋಪಗಳನ್ನು ಮನ­ಮೋಹನ್‌ ಸಿಂಗ್  ತಳ್ಳಿ ಹಾಕಿದ್ದಾರೆ.

ಉತ್ತರ ಪ್ರದೇಶದ ಮುಜಫ್ಫರ್‌ ನಗರದಲ್ಲಿ ನಡೆದಂತಹ ಸಮಾಜದ ಶಾಂತಿ ಭಂಗ ಮಾಡುವ ಹಿಂಸಾಚಾರ­ಗಳನ್ನು ನಿಯಂತ್ರಿಸಲು ಈಗ ಸಮಯ ಬಂದಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT