ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಕರಿಗೆ ಬಿಸಿಯೂಟದ ಜವಾಬ್ದಾರಿ ಬೇಡ’

Last Updated 20 ಸೆಪ್ಟೆಂಬರ್ 2013, 8:56 IST
ಅಕ್ಷರ ಗಾತ್ರ

ಚಿಂತಾಮಣಿ:  ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳ ಜವಾಬ್ದಾರಿಯಿಂದ ಶಿಕ್ಷಕ­ರಿಗೆ ಬಿಡುಗಡೆ ನೀಡಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಸಚಿವ ಕೆ.ಎಚ್‌.­ಮುನಿಯಪ್ಪ ಸಲಹೆ ನೀಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತ­ನಾಡಿ, ಶಿಕ್ಷಕರಿಗೆ ಅನಗತ್ಯ ಹೊರೆ ನೀಡಿ­ರುವು­ದರಿಂದ  ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ದರೆಯಾಗುತ್ತದೆ. ಪಾಠಕ್ಕೂ ಊಟಕ್ಕೂ ಸಂಬಂಧವಿರ­ಬಾರದು ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿ­ರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ.  ತಮ್ಮ ಕರ್ತವ್ಯದಲ್ಲಿ ವಂಚನೆ, ದ್ರೋಹ ಮಾಡಬಾರದು  ಎಂದು ಹೇಳಿದರು. ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡು­ವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು.  ನಗರ­ದಲ್ಲಿ ನಿಮಾರ್ಣವಾಗಲಿರುವ ಸರ್ಕಾರಿ ನೌಕರರ ಭವನಕ್ಕೆ ಸಂಸದರ ಅನು­ದಾನ­ದಿಂದ ರೂ. 10 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಶಿಡ್ಲಘಟ್ಟ ಶಾಸಕ ಎಂ.ರಾಜಣ್ಣ ಮಾತ­ನಾಡಿ, ಡಾ.ಎಸ್‌.ರಾಧಾಕೃಷ್ಣನ್‌ ಅವರ ತತ್ವ, ನೀತಿ, ಆದರ್ಶಗಳನ್ನು ಅಳವಡಿಸಿ­ಕೊಳ್ಳಬೇಕು. ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ  ಜವಾಬ್ದಾರಿ, ಪ್ರೀತಿ, ವಾತ್ಸಲ್ಯ, ಸಹೋದರತ್ವ ಬೆಳೆಸ­ಬೇಕು ಎಂದರು. ಸರ್ಕಾರಿ ನೌಕರರ ಭವನಕ್ಕೆ ಶಾಸಕರ ಅನುದಾನದಿಂದ ರೂ. 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಶಾಸಕ ಎಂ.ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಎನ್‌.ಚಿನ್ನಪ್ಪ ಡಾ.ಎಸ್‌.­ರಾಧಾ­ಕೃಷ್ಣನ್‌ ಭಾವಚಿತ್ರ ಅನಾವರಣ ಮಾಡಿ­ದರು. ವಿಧಾನ ಪರಿಷತ್‌ ಸದಸ್ಯರಾದ ವೈ.­ಎ.ನಾರಾಯಣಸ್ವಾಮಿ, ಡಿ.­ಎಸ್‌.­ವೀರಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಮೀನಾ, ಜಿ.ಪಂ. ಸದಸ್ಯ­ರಾದ ಎನ್‌.ವಿ.ಶ್ರೀರಾಮರೆಡ್ಡಿ, ವೀಣಾ ಗಂಗುಲಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಚೌಡರೆಡ್ಡಿ,

ನಗರಸಭೆ ಸದಸ್ಯ ಪ್ರಕಾಶ್‌, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜನಾರ್ಧನರೆಡ್ಡಿ, ತಹಶೀಲ್ದಾರ್‌ ಎಂ.ಎನ್‌.­ಮಂಜು­ನಾಥ್‌, ತಾ.ಪಂ. ಕಾರ್ಯ ನಿರ್ವಣಾ­ಧಿ­ಕಾರಿ ಬಿ.ಸಿ.­ವಸಂತ­ಕುಮಾರ್‌, ನಿವೃತ್ತ ಡಿಡಿಪಿಐ ಸಿ.ಬಿ.ಹನುಮಂತಪ್ಪ, ಮುಖಂಡ­ರಾದ ಗ್ಯಾಸ್‌ ಶ್ರೀನಿವಾಸ್‌, ರಾಯಲ್‌ ರಾಮಕೃಷ್ಣಾರೆಡ್ಡಿ, ವಸಂತ­ರೆಡ್ಡಿ, ಕೆ.ವಿ.ಚೌಡಪ್ಪ, ಕೆ.­ಆರ್‌.­ಗೋಪಾಲ­ರೆಡ್ಡಿ, ಆರ್‌.­ವೆಂಕಟ­ರಾಮರೆಡ್ಡಿ, ಜಗದೀಶ್ವರೆಡ್ಡಿ ಮತ್ತಿತರರು ಭಾಗವಹಿಸಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ಸ್ವಾಗತಿಸಿದರು. ಶಿವಾ ರೆಡ್ಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT