ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೇ 80ರಷ್ಟು ತ್ಯಾಜ್ಯ ಪುನರ್‌ಬಳಕೆ’

Last Updated 2 ಡಿಸೆಂಬರ್ 2013, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಶೇಕಡಾ 80ರಷ್ಟು ತ್ಯಾಜ್ಯವನ್ನು ಪುನರ್‌ ಬಳಕೆ ಮಾಡುತ್ತೇವೆ. ಇನ್ನು ಕೆಲವೇ ವರ್ಷಗಳಲ್ಲಿ ಶೇಕಡಾ 90ರಷ್ಟು ಪುನರ್‌ ಬಳಕೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ತ್ಯಾಜ್ಯ ನಿರ್ವಹಣೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಜತೆಗೆ ಜನರಲ್ಲಿ ಅರಿವು ಮೂಡಿಸುವುದು ಮುಖ್ಯ’ ಎಂದು ಮೇಯರ್‌ ಎಡ್ವಿನ್‌ ಎಂ. ಲೀ ಹೇಳಿದರು.

ಬಿಬಿಎಂಪಿ ಸೇರಿ ವಿವಿಧ ಇಲಾಖೆಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಸ ವಿಲೇವಾರಿ ಬಗ್ಗೆ ಪ್ರತಿಯೊಂದು ಕುಟುಂಬ­ದಲ್ಲೂ ಚರ್ಚೆಯಾಗ­ಬೇಕು. ಆಗ ಜನರಲ್ಲಿ ಅರಿವು ಮೂಡಿ ಕಸ ವಿಲೇವಾರಿ ಸುಲಭವಾಗುತ್ತದೆ. ನಾವು ಅಳವಡಿಸಿ­ಕೊಂಡಿ­ರುವ ಉತ್ತಮ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳಲು ಸಿದ್ಧ’ ಎಂದರು.

‘ನಮ್ಮ ನಗರದಲ್ಲಿ ನೀರಿನ ಕೊರತೆ ಇಲ್ಲ. ಶುದ್ಧವಾದ ನೀರು ದೊರೆಯುತ್ತದೆ. ಈ ಕಾರಣದಿಂದಾಗಿಯೇ ನಮ್ಮ ನಗರ ಎಲ್ಲರನ್ನು ಆಕರ್ಷಿಸುತ್ತಿದೆ’ ಎಂದು ನುಡಿದರು. ‘ಐದು ವರ್ಷಗಳ ಹಿಂದೆ ಬಿಬಿಎಂಪಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದು ಆಶಾದಾಯಕವಾಗಿತ್ತು. ಈಗ ಮತ್ತೊಮ್ಮೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಸಂತಸ ತಂದಿದೆ. ಮುಂದೆಯೂ ಬೆಂಗಳೂರಿನ ಜತೆ ಒಪ್ಪಂದ ಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ’ ಎಂದು ತಿಳಿಸಿದರು.

‘ಬೆಂಗಳೂರು ಮತ್ತು ಸ್ಯಾನ್‌ಫ್ರಾನ್ಸಿಸ್ಕೊ ಸಹೋದರಿ ನಗರಗಳು. ಈ ಎರಡು ನಗರಗಳ ಜನರ ನಡುವೆ ಸಂಬಂಧ ಬೆಳೆಯಬೇಕು. ಪರಸ್ಪರ ನೆರವು ನೀಡುವ ಮೂಲಕ ಸರ್ಕಾರಗಳು, ಸಂಸ್ಥೆಗಳು ಮತ್ತು  ಕಂಪೆನಿಗಳ ನಡುವೆಯೂ ಸಂಬಂಧಗಳು ವೃದ್ಧಿಯಾಗಬೇಕು’ ಎಂದರು. ‘ವಿಶ್ವದ ಶೇಕಡಾ 50ರಷ್ಟು ಜನ ನಗರ ಪ್ರದೇಶಗಳಲ್ಲೇ ನೆಲೆಸಿದ್ದಾರೆ. 2050ಕ್ಕೆ ಶೇಕಡಾ 80ರಷ್ಟು ಜನಸಂಖ್ಯೆ ನಗರದಲ್ಲಿ ವಾಸಿಸುವ ನಿರೀಕ್ಷೆ ಇದೆ. ಹೆಚ್ಚುತ್ತಿರುವ ಜನಸಂಖ್ಯೆಯೇ ದೊಡ್ಡ ಸವಾಲು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT