ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೌಚಾಲಯ ಇಲ್ಲದಿದ್ದರೆ ಸೌಲಭ್ಯ ಇಲ್ಲ’

Last Updated 2 ಜನವರಿ 2014, 6:53 IST
ಅಕ್ಷರ ಗಾತ್ರ

ಕನಕಗಿರಿ: ಮಾರ್ಚ್‌ ತಿಂಗಳೊಳಗೆ ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಗ್ರಾಮದ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾ­ಗುವುದಿಲ್ಲ ಎಂದು ಗ್ರಾಮ ಪಂಚಾ­ಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿ­ಕಾರ್ಜುನ ಕಡಿವಾಳರ ತಿಳಿಸಿದರು.

ಸ್ಥಳೀಯ ಜಾಮೀಯ ಮಸೀದಿ ಪರಿಸರದಲ್ಲಿ ಬುಧವಾರ ಶೌಚಾ­ಲಯ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ಪ್ರತಿಯೊಂದು ಕುಟುಂಬವು ಶೌಚಾ­ಲಯ ಹೊಂದುವುದು ಕಡ್ಡಾಯವಾ­ಗಿದೆ, ಈ ನಿಟ್ಟಿನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗಿದೆ, ಜಾಬ್‌ ಕಾರ್ಡ್‌ ಇಲ್ಲವರಿಗೆ ತಕ್ಷಣವೆ ಮಾಡಿಕೊಡಲಾಗುವದು, ಪರಿಶಿಷ್ಟ ಜಾತಿ, ಪಂಗಡದವರಿಗೆ ₨ 15, ಇತರೆ ಜನಾಂಗದವರಿಗೆ ₨ 9200 ಪ್ರೋತ್ಸಾಹ ಧನ ನೀಡಲಾಗುವುದು, ಶೌಚಾಲಯ ನಿರ್ಮಿಸಲು ಪ್ರೇರಣೆ ನೀಡಿದವರಿಗೂ ಸಹ ತಲಾ ಒಂದು ಶೌಚಾಲಯಕ್ಕೆ  ₨ 150 ನೀಡಲಾಗು­ವುದು ಎಂದರು.

ಸ್ವಯಂ ಸೇವರಕು ಮನೆ, ಮನೆಗೆ ಭೇಟಿ ನೀಡಿದಾಗ ಗ್ರಾಮಸ್ಥರು ಸರಿಯಾದ ಮಾಹಿತಿ ನೀಡಬೇಕೆಂದು ಅವರು ತಿಳಿಸಿದರು. 
ಭಾವಚಿತ್ರ, ಬ್ಯಾಂಕ್‌ ಖಾತೆ, ಪಡಿ­ತರ ಚೀಟಿ,  ಇತರೆ ಮಾಹಿತಿ­ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಂಗನ­ವಾಡಿ ಕಾರ್ಯಕರ್ತೆ ಗೌಸಿಯಾ ಬೇಗಂ, ಆಶಾ ಕಾರ್ಯ­ಕರ್ತೆ ಶ್ರೀದೇವಿ ಮಾದಿನಾಳ ಹೇಳಿದರು.  

ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಮಾಬೀ ಬೇಲ್ದಾರ, ರಾಜಾಸಾಬ ನಂದಾಪುರ, ಪ್ರಮುಖರಾದ ಕಾಶಿಪತಿ ಕಮ್ಮಾರ, ವಿಶ್ವಾರಾಧ್ಯ ಸ್ವಾಮಿ ಚಿಂತಕುಂಟಿಮಠ,  ನಟರಾಜ ಮಡಿವಾಳರ, ಹೊನ್ನೂರುಸಾಬ ಅಗರಬತ್ತಿ, ಹುಸೇನಬೀ, ಮೈಬೂಬಿ ಗೋಡೆಕಾರ ಇತರರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT