ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರಮದಾನ ಶಿಬಿರ ಶಿಸ್ತು ಮೂಡಿಸುತ್ತದೆ’

Last Updated 10 ಜನವರಿ 2014, 5:55 IST
ಅಕ್ಷರ ಗಾತ್ರ

ಹನುಮಸಾಗರ: ಸಮೀಪದ ಕಬ್ಬರಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಚಾರ್ಲ್ಸ್‌­ಡಾರ್ವಿನ್‌ ಇಕೋಕ್ಲಬ್‌ ವತಿಯಿಂದ ವಿದ್ಯಾರ್ಥಿಗಳಿಗೆ  ಶ್ರಮದಾನ ಶಿಬಿರ ಏರ್ಪಡಿಸಲಾಗಿತ್ತು.

ಮುಖ್ಯಶಿಕ್ಷಕಿ ಎಚ್.ಪ್ರಭಾ ಮಾತನಾಡಿ, ಶ್ರಮದಾನ ಮಾಡುವು­ದರಿಂದ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾ­ಗಿಟ್ಟುಕೊಳ್ಳು­ವುದರ ಜತೆಗೆ ಅಕ್ಕಪಕ್ಕದವರಿಗೆ ಮಾದರಿ­ಯಾಗಿ ಬದುಕು ನಡೆಸಬಹುದು, ಶಾಲೆಯಲ್ಲಿ ಅಷ್ಟೆ ಅಲ್ಲ ನಿಮ್ಮ ಗ್ರಾಮದಲ್ಲಿ, ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆಹೊರೆಯವರೊಂದಿಗೆ ಶ್ರಮಧಾನ ನಡೆಸಿ ಎಂದು ವಿದ್ಯಾರ್ಥಿ­ಗಳಿಗೆ ಮಾರ್ಗದರ್ಶನ ಮಾಡಿದರು.
ಶಾಲೆಯಲ್ಲಿ ಶ್ರಮಧಾನದ ನಿಮಿತ್ತ ಮೈದಾನದಲ್ಲಿದ್ದ ಮುಳ್ಳುಕಂಟಿಗಳನ್ನು ಹಾಗೂ ಕಲ್ಲುಗಳನ್ನು ತೆಗೆದು ಹಾಕಿ ಆಟವಾಡಲು ಸುಂದರ ಬಯಲು ನಿರ್ಮಿಸಿಕೊಳ್ಳಲಾಯಿತು.

ಚಾರ್ಲ್ಸ್‌ಡಾರ್ವಿನ್‌ ಇಕೋಕ್ಲಬ್‌ ಸಂಚಾಲಕ ಬಸವರಾಜ, ಎಸ್.ಬಿ.­ಅಂದೇಲಿ, ದೈಹಿಕ ಶಿಕ್ಷಕ ಎಲ್.ಕೆ.­ಗೌಡರ, ಬಿ.ಎಂ.ಹೊಸಮನಿ ಶ್ರಮಧಾನದಲ್ಲಿ ಪಾಲ್ಗೊಂಡಿದ್ದರು.

ವಿಜ್ಞಾನ ಪ್ರಯೋಗ: ಅಗಸ್ಯ್ತ ಅಂತರಾಷ್ಟ್ರೀಯ ಪ್ರತಿಷ್ಠಾನ­ ತಿಯಿಂದ ಈಚೆಗೆ ಇದೇ ಶಾಲೆಯಲ್ಲಿ ವಿಜ್ಞಾನ ಪ್ರಯೋಗಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಷ್ಠಾನದ ಮಾರ್ಗದರ್ಶಕರಾದ ಸಂಗಮೇಶ ಬಳಿಗಾರ ಹಾಗೂ ಎಂ.ಬಿ.ಹೊಸಮನಿ ಸೌರವ್ಯೂಹ­ದಲ್ಲಿ­ರುವ ಗ್ರಹಗಳ ಚಲನವಲನ, ಉಪ­ಗ್ರಹಗಳು, ನಕ್ಷತ್ರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ವಿದ್ಯಾರ್ಥಿಗಳಿಂದಲೇ ವಿವಿಧ ರಾಸಾಯನಿಕಗಳನ್ನು ಬಳಸಿ ಪ್ರಯೋಗ ಮಾಡಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಎಚ್.ಪ್ರಭಾ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ವಿಜ್ಞಾನ ಶಿಕ್ಷಕ ಬಸವರಾಜ ಕೊರ್ತ ಕಾರ್ಯಕ್ರಮ ನಿರೂಪಿಸಿದರು. ಶಂಕರಗುರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT