ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಗೀತ ಆಲಿಸಿ, ಆಯುಷ್ಯ ವೃದ್ಧಿಸಿ’

Last Updated 23 ಡಿಸೆಂಬರ್ 2013, 7:09 IST
ಅಕ್ಷರ ಗಾತ್ರ

ಹನುಮಸಾಗರ: ‘ಮನುಷ್ಯನ ಆಯುಷ್ಯ ಹೆಚ್ಚಿಸುವ ಶಕ್ತಿ ಸಂಗೀತಕ್ಕೆ ಇದೆ’ ಎಂದು ಹಿರಿಯ ಸಂಗೀತ ಕಲಾವಿದ ಸದಾಶಿವ ಪಾಟೀಲ ಹೇಳಿದರು.

ಇಲ್ಲಿನ ನಿಸರ್ಗ ಸಂಗೀತ ವಿದ್ಯಾಲಯದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಮ್ಮಿಕೊಂಡಿದ್ದ ಚಿಗುರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಗೀತ ಮನಸ್ಸಿಗೆ ಆನಂದ ತುಂಬುವ ಜತೆಗೆ ಮನಸಿಕ ನೆಮ್ಮದಿ ಕಾಪಾಡುತ್ತದೆ. ಸಂಗೀತ ಸಂಸ್ಥೆ ಯವರು ಮಕ್ಕಳಲ್ಲಿ ನೈಜ ಪ್ರತಿಭೆ ವಿಕಾಸವಾಗುವಂತೆ ತರಬೇತಿ ನೀಡಕು. ಅವರನ್ನು ಸ್ಪರ್ಧೆಗೆ ಅಣಿಗೊಳಿಸವುದು ಆರೋಗ್ಯಕರವಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಚಂದಪ್ಪ ಹಕ್ಕಿ, ಡಾ.ಶರಣು ಹವಾಲ್ದಾರ, ಶ್ರೀನಿವಾಸ ಜಹಗೀರದಾರ ಮಾತನಾಡಿದರು. ಕಲಾವಿದ ಸದಾಶಿವ ಪಾಟೀಲ ಅವರನ್ನು ಸಂಸ್ಥೆಯ ಪರವಾಗಿ  ಸನ್ಮಾನಿಸಲಾಯಿತು.

ಗ್ರಾ.ಪಂ ಅಧ್ಯಕ್ಷೆ ಲಲಿತಮ್ಮ ಹುಲ್ಲೂರು ಕಾರ್ಯ ಕ್ರಮ ಉದ್ಘಾಟಿಸಿದರು. ಶರಣಪ್ಪ ಅಗಸಿಮುಂದಿನ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷೆ ರೂಪಾ ಹಡಪದ, ಸದಸ್ಯ ಶಿವಪ್ಪ ಕಂಪ್ಲಿ, ಭಗೀರಥಸಾ ಪಾಟೀಲ, ಚಂದಾಲಿಂಗಪ್ಪ ಬಾಚಲಾಪೂರ, ಸಂಗೀತ ಶಿಕ್ಷಕ ಮಾರುತಿ ಭಿನ್ನಾಳ, ಗದಿಗಯ್ಯ ಬ್ಯಾಳಿ ಇದ್ದರು.

ಹಲವಾರು ಮಕ್ಕಳು ಸಂಗೀತ ಕಾರ್ಯಕ್ರಮ ನೀಡಿದರು. ಸಂಸ್ಥೆಯ ಮುಖ್ಯಸ್ಥ ಮಲ್ಲಯ್ಯ ಕೋಮಾರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT