ಮಹಿಳೆಯರು ಸ್ವಾವಲಂಬಿಯಾಗಲು ಸಂಘಟನೆಗಳು ಸಹಕಾರಿಯಾಗಿದ್ದು, ಸಂಘಟನೆಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸುವ ಮೂಲಕ, ಮಹಿಳೆಯರು ಆರ್ಥಿಕ ಅಭಿವೃದ್ಧಿಯತ್ತ ಸಾಗಲು ಸಂಘಟನೆಗಳು ಸಹಕಾರಿಯಾಗಬೇಕು, ಸಂಘಟನೆಗಳಿಗೆ ಯುವ ಸಮೂಹವನ್ನು ಸೇರಿಸಿಕೊಂಡಾಗ ಸಂಘಟನೆ ಇನ್ನಷ್ಟು ಬಲಹೊಂದಲು ಸಹಾಯಕವಾಗುತ್ತದೆ ಜೊತೆಗೆ ಯುವ ಜನತೆಗೆ ಸಂಘಟನೆಯ ಲಾಭ ದೊರಕಿದಂತಾಗಿ ತಮ್ಮ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನಾಗರಿಕ ಬಾಬುರಾವ್ ಮಾತನಾಡಿ, ಮಹಿಳಾ ಸಂಘಟನೆಗಳು ಸಮಾಜದ ಬಲಾಯುತ ಚಕ್ರಗಳಾಗಿದ್ದು, ಸಮಾಜವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಶಕ್ತಿಯನ್ನು ಹೊಂದಿವೆ, ಸಂಘಟನೆಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯ ನಡೆಯಬೇಕಿದೆ ಜೊತೆಗೆ ಮಹಿಳೆಯರು ಸಂಘಟನೆಯ ಮೂಲಕ ಸಮಾಜ ಸೇವೆಗೆ ಮುಂದಾಗಬೇಕು ಎಂದರು.
ಸಂಘದ ಅಧ್ಯಕ್ಷೆ ಐರಿ ಡಿಸೋಜಾ ಮಾತನಾಡಿ, ಒಂದು ಘಟಕದಿಂದ ಸ್ಥಾಪನೆಯಾದ ಸಂಘ, ಇದೀಗ ಪಟ್ಟಣದ ನಾನಾ ವಲಯದಗಳಲ್ಲಿ 20 ಘಟಕಗಳನ್ನು ಹೊಂದಿದ್ದು, ಇನ್ನೂರೈವತ್ತಕ್ಕೂ ಹೆಚ್ಚು ಸದಸ್ಯರಿದ್ದು, ಆರ್ಥಿಕ ಚಟುವಟಿಕೆಗಳು ಲಾಭದತ್ತ ಸಾಗುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರಿಗೆ ಕ್ರೀಡೆ, ಛದ್ಮವೇಶ ಸ್ಪರ್ಧೆ ಏರ್ಪಡಿಸಲಾಗಿತ್ತು, ಕಾರ್ಯಕ್ರಮದಲ್ಲಿ ಕರವೇ ಯ ಶಾರದ, ಪ.ಪಂ. ಮಾಜಿ ಅಧ್ಯಕ್ಷೆ ಜಯಮ್ಮ ಮುಂತಾದವರಿದ್ದರು.