ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಚಾರಿ ಆರೋಗ್ಯ ಸೇವೆ ಮುಂದುವರಿಸಿ’

Last Updated 14 ಡಿಸೆಂಬರ್ 2013, 4:10 IST
ಅಕ್ಷರ ಗಾತ್ರ

ನರಗುಂದ: ತಾಲ್ಲೂಕಿನ ಹಲವಾರು ಗ್ರಾಮಗಳಿಗೆ  ದೊರೆಯುತ್ತಿರುವ ಸಂಚಾರಿ ಆರೋಗ್ಯ ಘಟಕದ ಸೇವೆಯನ್ನು ಜನವರಿ ತಿಂಗಳಿನಿಂದ ರಾಜ್ಯ ಸರಕಾರ ಸ್ಥಗಿತಗೊಳಿಸುತ್ತಿರುವುದನ್ನು ವಿರೋ­ಧಿಸಿ ವಾಸನ, ಲಕಮಾಪುರ, ರಡ್ಡೇರನಾಗನೂರು ಗಂಗಾಪುರ ಸೇರಿದಂತೆ ವಿವಿಧ ಗ್ರಾಮಗಳ  ಗ್ರಾಮಸ್ಥರು   ಶುಕ್ರವಾರ ತಹಶಿೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಗ್ರಾಮ­ಸ್ಥರು ನಮ್ಮ ಗ್ರಾಮಗಳಿಗೆ ಸಂಚಾರಿ ಆರೋಗ್ಯ ಸೇವೆ ಘಟಕದಿಂದ ಸಾಕಷ್ಟು ಅನುಕೂಲ­ವಾಗಿದೆ. ಆದರೆ ಅದನ್ನು ಏಕಾಏಕಿ ಬರುವ ಜನವರಿ ತಿಂಗಳಿಂದ ಸ್ಥಗಿತಗೊಳಿಸುತ್ತಿರುವುದು  ಸಲ್ಲದು. ನಮ್ಮ ಗ್ರಾಮಗಳು  ನರಗುಂದ ಪಟ್ಟಣದಿಂದ ದೂರವಿದ್ದು ಇದರಿಂದ ಸಕಾಲಕ್ಕೆ ಆರೋಗ್ಯ  ಸೇವೆ ದೊರೆಯುವುದಿಲ್ಲ. ಅಲ್ಲಿಗ ಹೋದರೂ ಸರಿಯಾದ ವೈದ್ಯರಿಲ್ಲ.

ಪಟ್ಟಣಕ್ಕೆ ಸಕಾಲಕ್ಕೆ ತೆರಳಲು ಬಸ್‌ ಸೌಲಭ್ಯವೂ ಅಷ್ಟಕ್ಕಷ್ಟೇ.  ಆದ್ದರಿಂದ ಸಂಚಾರಿ ಆರೋಗ್ಯ ಸೇವೆಯಿಂದ ಸಾಕಷ್ಟು ಅನುಕೂಲವಾಗಿದೆ. ವಿಶೇಷವಾಗಿ  ಹೆರಿಗೆ ತುರ್ತು ಚಿಕಿತ್ಸೆಯಿಂದ ಸಾಕಷ್ಟು ಜೀವಗಳು ಉಳಿದಿವೆ. ತಾಯಿ ಮಗುವಿನ ಆರೋಗ್ಯ ರಕ್ಷಣೆ ಮಾಡುವಲ್ಲಿ ಸಂಚಾರಿ ಆರೋಗ್ಯ ಸೇವೆ ದೊರೆತಿದೆ. ಜೊತೆಗೆ ಸಂಚಾರಿ ಆರೋಗ್ಯ ಸೇವಾ ಘಟಕದಲ್ಲಿ ನುರಿತ ವೈದ್ಯರೂ  ಹಾಗೂ ಸಿಬ್ಬಂದಿ ಉತ್ತಮ ಸೇವೆ ಒದಗಿಸುತ್ತಿದ್ದಾರೆ. ಮಾರಣಾಂತಿಕ ಕಾಯಲೆ­ಗಳಿಂದ ಪಾರಾಗಿದ್ದೇವೆ. ಆದ್ದರಿಂದ ಸಂಚಾರಿ ಆರೋಗ್ಯ ಸೇವೆಯನ್ನು  ಜನವರಿ ತಿಂಗಳಿನಿಂದ ಸ್ಥಗಿತಗೊಳಿಸದೇ ಯಥಾಸ್ಥಿತಿಯಲ್ಲಿ ಮುಂದುವರಿ­ಸಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಾಸನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಡಿ.ಬಡಿಗೇರ, ರುದ್ರಪ್ಪ ಬಡಿಗೇರ, ವೈ.ಎಸ್‌.ಖಾನಪ್ಪಗೌಡ್ರ, ಕಮಲವ್ವ ಹಡೇನವರ, ಸಾವಿತ್ರಿ ಕೆಂಚನಗೌಡ್ರ, ನೀಲವ್ವ ಗಾಳಪ್ಪನವರ, ವೆಂಕವ್ವ ಮೂಲಿಮನಿ, ಈರವ್ವ ಮಲ್ಲಾಪೂರ, ಗೀತಾ ಹಡಪದ, ಎ.ಎಚ್‌.­ನದಾಫ, ಜಿ.ಆರ್‌.ರಾಮನಗೌಡ್ರ, ಎಸ್‌.ಟಿ.­ತಳವಾರ, ವೈ.ಎಸ್‌.ಪಾಟೀಲ, ಡಿ.ಕೆ.ಕಟಗಿ, ಮಾದೇವ ರಾಮದುರ್ಗ, ಎಸ್‌.ಬಿ. ಮಾಳವಾಡ, ಚಂದ್ರಪ್ಪ ಶಿರೋಳ, ಎಲ್‌.ಕೆ. ಮಾದರ, ಲಿಂಗಬಸಪ್ಪ ಅಸೂಟಿ, ಸುಭಾಸಗೌಡ ಖಾನಪ್ಪಗೌಡ್ರ  ಸೇರಿದಂತೆ  ವಾಸನ, ಲಕಮಾಪೂರ, ಹಿರೇಕೊಪ್ಪ, ಕುರಗೋವಿನ­ಕೊಪ್ಪ, ರಡ್ಡೇರನಾಗನೂರ, ಖಾನಾಪೂರ, ಕಣಕಿಕೊಪ್ಪ, ಗುರ್ಲಕಟ್ಟಿ ಸೇರಿದಂತೆ
ಮೊದ­ಲಾದ  ಗ್ರಾಮಗಳ ನಾಗರಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT