ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕೃತಿ’ ಉತ್ಸವಕ್ಕೆ ತೆರೆ

ಅಂತರಕಾಲೇಜು ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆ
Last Updated 23 ಸೆಪ್ಟೆಂಬರ್ 2013, 9:48 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಜೆ.ಕೆ. ಮೈದಾನದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವ ‘ಸಂಸ್ಕೃತಿ’ಗೆ ಭಾನುವಾರ ತೆರೆ ಬಿದ್ದಿತು.

ರಾಜ್ಯದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗವಹಿಸಿದ್ದರು. ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರದಲ್ಲಿ ವಿಜೇತರಾದವರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಪ್ರಾಧ್ಯಾಪಕ ಡಾ.ಎಚ್‌.ಎನ್‌. ದಿನೇಶ್‌ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಆರಂಭಿಸಿದ ಸಾಂಸ್ಕೃತಿಕ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು, ಹಾಸನ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗವಹಿಸಿದ್ದಾರೆ. ರಾಜ್ಯದ ಗಮನ ಸೆಳೆಯುವ ಸ್ಪರ್ಧೆಯನ್ನಾಗಿ ಇದನ್ನು ಬೆಳೆಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಡಾ.ಹೇಮಲತಾ, ಉಪಾಧ್ಯಕ್ಷರಾದ ಡಾ.ಸುಧಾ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸದ್ದಾಂ ಹುಸೇನ್‌, ಕಾರ್ಯದರ್ಶಿ ಎಚ್‌.ವಿ. ಸಿದ್ದೇಶ್‌ ಹಾಜರಿದ್ದರು.

ಸ್ಪರ್ಧಾ ವಿಜೇತರು: ವಾಲಿಬಾಲ್‌: ಬಿಎಂಸಿಎಚ್‌ ವೈದ್ಯಕೀಯ ಕಾಲೇಜು ಚಿತ್ರದುರ್ಗ–1, ಮೈಸೂರು ವೈದ್ಯಕೀಯ ಕಾಲೇಜು–2.
ಥ್ರೋಬಾಲ್‌: ಮೈಸೂರು ವೈದ್ಯಕೀಯ ಕಾಲೇಜು–1, ಭಾರತೀಯ ವಾಕ್‌ ಮತ್ತು ಶ್ರವಣ ಸಂಸ್ಥೆ–2. ಬ್ಯಾಸ್ಕೆಟ್‌ ಬಾಲ್‌: ಮೈಸೂರು ವೈದ್ಯಕೀಯ ಕಾಲೇಜು–1, ಬೆಂಗಳೂರು ವೈದ್ಯಕೀಯ ಕಾಲೇಜು–2. ಷಾಟ್‌ಪಟ್‌: ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು–1, ಬೆಂಗಳೂರು ವೈದ್ಯಕೀಯ ಕಾಲೇಜು–2.

ಕನ್ನಡ ಅಂತ್ಯಾಕ್ಷರಿ: ಡಾ.ಮನು ಮತ್ತು ಡಾ.ದರ್ಶನ್‌–1, ಪ್ರದೀಪ್‌ ಮತ್ತು ದಿಲೀಪ್‌–2. ಮಿಸ್ಟರ್‌ ಆ್ಯಕ್ಟರ್‌: ಅಕ್ಷಯ್‌, ಮಿಸ್‌ ಆ್ಯಕ್ಟರ್‌: ಅನುಷಾ.
ಭಾರತೀಯ ವಾದ್ಯ ಸಂಗೀತ: ಸಂದೀಪ್‌–1, ವೈ. ಶ್ರವಣ್‌–2. ಪಾಶ್ಚಿಮಾತ್ಯ ವಾದ್ಯ ಸಂಗೀತ: ತನಿಯಾ–1, ಶಶಾಂಕ್‌–2. ವಿಶೇಷ ಬಹುಮಾನ– ಅಮ್ರಿತ್‌.
ಪ್ರೇಮಪತ್ರ ಬರಹ (ಕನ್ನಡ): ಹರ್ಷಿತ್–1, (ಇಂಗ್ಲಿಷ್‌) ಅಣ್ಣಾಸಾಬ್‌–1. ಚಲನಚಿತ್ರ ಗೀತೆ: ಡಾ.ಸಂಹಿತ್‌–1, ಸಂಗೀತ: ಡಾ.ವೆಂಕಟೇಶ್‌–1, ಅಂಜಲಿ ಭಟ್‌–2
ಚಿತ್ರಕಲೆ: ವಿಶಾಖ್‌–1. ರಜಿನಿ–2. ಗೋಡೆ ಚಿತ್ರಕಲೆ: ದಿವ್ಯಶ್ರೀ–1, ಸೂರಜ್‌–2.
ಕೋಲಾಜ್: ವಿಕ್ಷಣ್‌ ಶೆಟ್ಟಿ–1, ರೋಸಿನ್‌–2. ಫೋಟೊ ಮ್ಯಾರಥಾನ್‌: ಪ್ರಿಯಾಂಕ್‌–1, ಜಿಮ್‌–2, ರಚಿತಾ–3. ಕಿರುಚಿತ್ರ: ಅನುಷಾ ಮತ್ತು ತಂಡ–1. ಅಮೃತಾ ಮತ್ತು ತಂಡ–2. ಸಮೂಹ ನೃತ್ಯ: ಮೈಸೂರು ವೈದ್ಯಕೀಯ ಕಾಲೇಜು–1, ವಿದ್ಯಾವಿಕಾಸ ಕಾಲೇಜು–2, ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು–3. ನಾಟಕ: ಪಂಕ್‌ ಪೋಲಿ, ಮೈಸೂರು ವೈದ್ಯಕೀಯ ಕಾಲೇಜು–1. ಮ್ಯಾಡ್‌ಆರ್ಟ್‌: ಮೈಸೂರು ವೈದ್ಯಕೀಯ ಕಾಲೇಜು–1. ಮೈಮ್‌: ಮೈಸೂರು ವೈದ್ಯಕೀಯ ಕಾಲೇಜು–1, ಎಸ್‌ಡಿಎಂ ಕಾಲೇಜು –2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT