ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರಳ ಜೀವನದಿಂದ ಉತ್ತಮ

ಕಲ್ಯಾಣಶೆಟ್ಟಿಯವರಿಗೆ ಅಭಿನಂದನೆ ಮಹಾಪೂರ: ದೇಹದಾನದ ಇಂಗಿತ
Last Updated 16 ಸೆಪ್ಟೆಂಬರ್ 2013, 7:46 IST
ಅಕ್ಷರ ಗಾತ್ರ

ನರಗುಂದ: ಪ್ರತಿಯೊಬ್ಬರು ತಮ್ಮ ತತ್ವ ಆದರ್ಶಗಳಿಗೆ ಬದ್ಧರಾಗಿ ಬದುಕಬೇಕು.  ಸರಳ ಜೀವನ ನಡೆಸಬೇಕು. ಅದುವೇ ಉತ್ತಮ ವ್ಯಕ್ತಿತ್ವಕ್ಕೆ ರಹದಾರಿಯಾಗು ತ್ತದೆ ಎಂದು ಹುಬ್ಬಳ್ಳಿಯ ನಿವೃತ್ತ ಮುಖ್ಯ ಶಿಕ್ಷಕ, ಲೇಖಕ ಎ.ಎಸ್‌. ಹೂಗಾರ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಭಾನುವಾರ ಸಾಹಿತಿ ರುದ್ರನಾಥ ಕಲ್ಯಾಣಶೆಟ್ಟಿಯವರ 80ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಸಹಸ್ರ  ಚಂದ್ರದರ್ಶನ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇಂಥಹ ಸರಳ ಜೀವನ ನಡೆಸಿ, ಆದರ್ಶ ಶಿಕ್ಷಕರಾಗಿ  ಬಾಳಿದವರು ರುದ್ರನಾಥ ಕಲ್ಯಾಣಶೆಟ್ಟಿಯವರು. ಅವರ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಅವರ ಬದುಕು ಕಲ್ಲು ಮುಳ್ಳುಗಳಿಂದ ಕೂಡಿ  ಅದನ್ನು ದಾಟಿ, ಸಾಹಿತಿಯಾಗಿ  ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆಯುವ ಮೂಲಕ ನರಗುಂದದ ಕೀರ್ತಿಯನ್ನು  ಹೆಚ್ಚಿಸಿದ್ದಾರೆ.  ಇವರ ಸರಳ ಜೀವನ ಎಲ್ಲರಿಗೂ ಮಾದರಿ ಎಂದರು.

ಅಭಿನಂದನೆ, ಸನ್ಮಾನ ಸ್ವೀಕರಿಸಿ ಮಾತ ನಾಡಿದ ಸಾಹಿತಿ ರುದ್ರನಾಥ ಕಲ್ಯಾಣ ಶೆಟ್ಟಿ, ಬಡತನದ ಬೇಗೆಯಲ್ಲಿ ಬೆಳೆದ ನನಗೆ ಕಷ್ಟಗಳೇ  ಈ ಮಟ್ಟಕ್ಕೆ ಬೆಳೆ ಯಲು ಹಚ್ಚಿದವು.  ನನ್ನ ಬದುಕೇ ನನ್ನ ಕಾವ್ಯಕ್ಕೆ ಪ್ರೇರಣೆ ನೀಡಿತು. ದಿ.ಡಿ.ಎಸ್. ಕಕಿರ್ಯವರ ಪ್ರಭಾವ ಹೆಚ್ಚಾಗಿ ನಾ ಒಬ್ಬ  ಕವಿಯಾಗಿ ಬೆಳೆದೆ.  ಕಷ್ಟ ಸುಖ ಗಳನ್ನು ಸಮಾನವಾಗಿ ಸ್ವೀಕರಿಸಿದಾಗ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು. 

ನಾನು ಕೊನೆ ಉಸಿರೆಳೆದಾಗ ನನ್ನ ದೇಹದಾನ ಮಾಡುವಂತೆ ಇಂಗಿತ ವ್ಯಕ್ತಪಡಿಸಿದ ರುದ್ರನಾಥ ಇದನ್ನು ನೆರವೇರಿಸುವಂತೆ ತಮ್ಮ ಕುಟುಂಬದ ಸದಸ್ಯರಲ್ಲಿ ಮನವಿ ಮಾಡಿದರು.  ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಆಶೀವರ್ಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಎಫ್‌. ಬಿಜಾಪುರ,  ಅತಿಥಿಗಳಾಗಿ ನಿವೃತ್ತ ಡಿಡಿ ಪಿಐ ಆರ್‌.ಸಿ. ಹಲಗತ್ತಿ, ಸಂಗಣ್ಣ ಲಿಂಬಿ ಕಾಯಿ ಮಾತನಾಡಿದರು.

  ನೀಲಾ ಕಲ್ಯಾಣಶೆಟ್ಟಿ, ಬಸವ ರಾಜ ಕಲ್ಯಾಣ ಶೆಟ್ಟಿ, ಬಸೆಟ್ಟೆಪ್ಪ ನಾಶಿ, ಗೋವೇಶ್ವರ, ಸಿ.ಎಚ್‌.ಕೋರಿ, ಬಿ.ಎಸ್‌.ಹಣಜಿ  ಉಪಸ್ಥಿತರಿದ್ದರು. ಸಮೃದ್ಧಿ ತಂಶಿ, ಮಹಾಂತೇಶ ಪೂಜಾರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬಿ.ವೈ.ಕಲ್ಲನಗೌಡ್ರ ಪ್ರಾಥಿರ್ಸಿದರು. ಚನ್ನಬಸಪ್ಪ ಕಂಠಿ ಸ್ವಾಗತಿಸಿದರು. ಎಂ.ಎಸ್‌ಯಾವಗಲ್‌ ನಿರೂಪಿಸಿದರು. ವಿ.ಎಸ್‌.ಢಾಣೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT