ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಶಾಲೆಗಳ ಕಡೆಗಣನೆ ಬೇಡ’

Last Updated 23 ಡಿಸೆಂಬರ್ 2013, 10:15 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ. ಈ ದಿಸೆಯಲ್ಲಿ ವಿದ್ಯಾರ್ಥಿ ಗಳು ಸರ್ಕಾರಿ ಶಾಲೆಗಳ ಸೌಲಭ್ಯ ಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಡಾ.ಎಚ್.ಜಿ. ವಿಜಯ್ ಕುಮಾರ್ ಹೇಳಿದರು.

ತಾಲ್ಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯ್ತಿಯ ವೀರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಹಾಗೂ ಗ್ರಾಮಗಳಿಗೆ ಸ್ಥಳೀಯ ಕಾರ್ಖಾನೆ ಗಳಿಂದ ಹೆಚ್ಚಿನ ನೆರವು ದೊರೆತರೆ ಗ್ರಾಮಗಳಲ್ಲಿ ಅಭಿವೃದ್ಧಿಗೆ ಪೂರಕ ವಾಗುತ್ತದೆ ಎಂದು ತಿಳಿಸಿದರು.

ಸಮುದಾಯದ ಮತ್ತು ಶಾಲೆಯ  ಅಭಿವೃದ್ಧಿಗಾಗಿ ಶ್ರಮಿಸಿದ ಶಿಕ್ಷಕರನ್ನು, ಗ್ರಾಮದ ಹಿರಿಯರನ್ನು ಮತ್ತು ಕಾರ್ಖಾನೆಗಳಾದ ಬಿರ್ಲಾ ಸೂಪರ್, ರಿಟ್ಟಲ್, ಹಿಮ್ಮತಸಿಂಗ್, ಮ್ಯಾಕ್ ಎರೋದ ಪ್ರತಿನಿಧಿಗಳನ್ನು ಎಸ್‌ಡಿಎಂಸಿ ಸಮಿತಿ, ಶಾಲಾ ಸಿಬ್ಬಂದಿ  ಮತ್ತು ಸಾರ್ವಜನಿಕರ ವತಿಯಿಂದ ಸನ್ಮಾನಿ ಸಲಾಯಿತು.ಶಾಲೆಗಳ ಪ್ರತಿ ಭಾನ್ವಿತ ವಿದ್ಯಾರ್ಥಿಗಳನ್ನೂಸನ್ಮಾನಿಸಲಾಯಿತು.

ಡಯಟ್ ಅಧಿಕಾರಿ ಶಿವಮ್ಮ, ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರಕಲಾ, ಬಿರ್ಲಾ ಸೂಪರ್ ಆಡಳಿತ ವ್ಯವಸ್ಥಾಪಕ ಎಂ.ಎಸ್.ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್‌.ಪಿ. ಸುಬ್ಬೇಗೌಡ, ಮಜರಾಹೊಸಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಲೋಕೇಶ್, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಜೈ ಕುಮಾರ್, ಮಂಜುಳಾ, ಮಂಜು ನಾಥ್, ಶ್ರೀಧರ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬೈಲಾಂಜಿನಪ್ಪ, ಮುಖ್ಯ ಶಿಕ್ಷಕ ನರಸೀದೇವರು, ಶಾಲೆಯ ಹಳೆಯ ವಿದ್ಯಾರ್ಥಿಗಳು,  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT