ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ದಾರ್ ಪಟೇಲ್ ಪಾತ್ರ ಅವಿಸ್ಮರಣೀಯ’

Last Updated 10 ಡಿಸೆಂಬರ್ 2013, 9:07 IST
ಅಕ್ಷರ ಗಾತ್ರ

ಮಂಗಳೂರು: ಸ್ವಾತಂತ್ರ್ಯ ಹೋರಾಟ­ದಲ್ಲಿ ಹಾಗೂ ಸ್ವಾತಂತ್ರ್ಯಾನಂತರ ದೇಶದ ಅಖಂಡತೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವಿಸ್ಮರಣೀಯ ಕೆಲಸಗಳನ್ನು ಮಾಡಿದ್ದಾರೆ.  ದೇಶದ ಏಕತೆಗಾಗಿ ಯುವಜನತೆ ಒಂದಾಗಿ ಪ್ರಯತ್ನ ಮಾಡಬೇಕಾಗಿದೆ ಎಂದು ಗುಜರಾತ್ ರಾಜ್ಯ ಇಂಧನ ಸಚಿವ ಸೌರಭಭಾಯಿ ಪಟೇಲ್ ಹೇಳಿದರು.

ಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ದೇಶದ 562ಕ್ಕೂ ಮಿಕ್ಕಿ ಸಂಸ್ಥಾನಗಳನ್ನು ಒಗ್ಗೂಡಿಸಿ ಏಕತೆಯನ್ನು ಸಾಧಿಸಿದ ಪಟೇಲರನ್ನು ದೇಶವಿಂದು ನೆನಪಿಸಿ­ಕೊಳ್ಳುವ ಅನಿವಾರ್ಯತೆ ಇದೆ ಎಂದರು.
ರಾಜ್ಯ ಲೋಹ ಸಂಗ್ರಹ ಸಮಿತಿ ಅಧ್ಯಕ್ಷ ಮಾಜಿ ಸಚಿವ ಮುರಗೇಶ ನಿರಾಣಿ, ಗುಜರಾತ್ ರಾಜ್ಯದ ಶಾಸಕರಾದ ವಾಗ್ಜೀಭಾಯಿ ಪಟೇಲ್,

ನಾಗರಾಜ ಠಾಕೂರ್, ಲಾಲ್‌ಜಿ  ಮೆರ್, ವಲ್ಲಭಭಾಯಿ ಕಾಕಡಿಯ, ವರ್ಷಾಬೆನ್, ಭರತ್‌ಭಾಯಿ ಪಟೇಲ್, ದಿಲೀಪ್ ಭಾಯಿ ಪಟೇಲ್, ದಿನೇಶ ಭಾಯಿ ಪಟೇಲ್, ಬಿಜೆಪಿ ರಾಜ್ಯ ಪ್ರಮುಖರಾದ ಸಚ್ಚಿದಾನಂದ ಮೂರ್ತಿ, ಸುಲೋಚನಾ ಜಿ.ಕೆ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್, ಕೆ. ಮೋನಪ್ಪ ಭಂಡಾರಿ, ಕೆ. ಬಾಲಕೃಷ್ಣ ಭಟ್, ಎನ್. ಯೋಗೀಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ತಾರ ಸತೀಶ ಪ್ರಭು ಮತ್ತು ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯುವಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಕ್ಯಾ. ಬೃಜೇಶ್ ಚೌಟ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT