ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರಿ ಬ್ಯಾಂಕುಗಳಲ್ಲಿ ಕೋರ್‌ ಬ್ಯಾಂಕಿಂಗ್‌ ಅವಶ್ಯ’

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ಪೀಳಿಗೆಯ ಗ್ರಾಹಕರನ್ನು ಸಹಕಾರಿ ಬ್ಯಾಂಕ್‌ ಅಥವಾ ಸಂಘಗಳತ್ತ ಸೆಳೆಯಬೇಕಾ­ದರೆ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆ ಅಳವಡಿಕೆ ಅತ್ಯವಶ್ಯಕ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾ­ಯತ್‌ ರಾಜ್‌ ಸಚಿವರೂ ಆದ, ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಎಚ್‌.ಕೆ. ಪಾಟೀಲ್‌ ಅಭಿಪ್ರಾಯಪಟ್ಟರು.

‘ಪ್ರೊಸೆಸ್‌ವೇರ್ ಸಿಸ್ಟಮ್ಸ್‌’ ಸಂಸ್ಥೆ ಶನಿವಾರ ಆಯೋಜಿಸಿದ್ದ ‘ಮುಂದಿನ ಪೀಳಿಗೆಗೆ ಬ್ಯಾಂಕಿಂಗ್‌’ ವಿಚಾರ­ಗೋಷ್ಠಿಯಲ್ಲಿಮಾತನಾಡಿದರು.
‘ಇಂದಿನ ಪೀಳಿಗೆಯ ಗ್ರಾಹಕರನ್ನು ಆಕರ್ಷಿಸ­ಬೇಕಾದರೆ, ರಿಸರ್ವ್ ಬ್ಯಾಂಕ್‌ ಈ ಸಂಸ್ಥೆಗಳಲ್ಲಿ ಎಟಿಎಂ, ಅಂತರ್ಜಾಲ ಬ್ಯಾಂಕಿಂಗ್‌ ಸೌಲಭ್ಯಗಳನ್ನು ಕಡ್ಡಾಯ­ಗೊಳಿಸಬೇಕು’ ಎಂದು  ಹೇಳಿದರು.

ಸಾಮಾನ್ಯವಾಗಿ ಸಹಕಾರಿ ಸಂಘ­ಗಳ­ಲ್ಲಿನ ಗ್ರಾಹಕರು ಸಂಸ್ಥೆಯೊಡನೆ ಭಾವನಾತ್ಮಕ ಸಂಬಂಧ ಹೊಂದಿರು­ತ್ತಾರೆ. ಈ ಅಭಿಮಾನವನ್ನು ಸಂಸ್ಥೆಯ ಬೆಳವಣಿಗೆಗೆ ಪೂರಕ ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕು ಎಂದರು.

ಪ್ರೊಸೆಸ್‌ವೇರ್‌ ಸಂಸ್ಥೆ ಅಭಿವೃದ್ಧಿ­ಪಡಿ­ಸಿದ ಮೊಬೈಲ್‌ ಬ್ಯಾಂಕಿಂಗ್‌ ಸಾಫ್ಟ್‌ವೇರ್‌ ಅನ್ನು ಸಚಿವರು  ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.
ಪ್ರೊಸೆಸ್‌ವೇರ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಆರ್‌. ಗುರು­ಮೂರ್ತಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತ್ವರಿತ ಸೇವೆ ಒದಗಿಸುವಂತಾಗಬೇಕು’ ಎಂದರು.

ಆರ್‌ಬಿಐನ ಪಟ್ಟಣ ಬ್ಯಾಂಕುಗಳ ವಿಭಾಗದ ಪ್ರಧಾನ ವ್ಯವಸ್ಥಾಪಕ  ಬಿ. ಶಿವನಂಜಪ್ಪ, ರಾಜ್ಯ ಸರ್ಕಾರದ ಸಹಕಾರಿ ಸಂಘಗಳ ಜಂಟಿ ನೋಂದ­ಣಾಧಿಕಾರಿ ಬಿ.ಸಿ. ಸತೀಶ್‌, ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ಆರ್‌.ಪಿ. ರವಿಶಂಕರ್‌, ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ರಮೇಶ್‌ ಬಾಬು ಹಾಗೂ ತೆರಿಗೆ ಸಲಹೆಗಾರ ಡಿ.ಆರ್. ವೆಂಕಟೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT