ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿರಿಯಾ ರಾಸಾಯನಿಕ ಅಸ್ತ್ರ ಬಳಸಿದ್ದು ನಿಜ’

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಪ್ರತಿಭಟನಾ­ನಿರತ ಬಂಡು­ಕೋರರ  ಮೇಲೆ ಸಿರಿಯಾ ಸರ್ಕಾರ ರಾಸಾಯನಿಕ ಅಸ್ತ್ರ­ಗಳನ್ನು ಪ್ರಯೋಗ ಮಾಡಿರುವುದು ನಿಜ ಎಂದು ವಿಶ್ವ­ಸಂಸ್ಥೆಯ ಜಂಟಿ ತನಿಖಾ ತಂಡ ದೃಢಪಡಿಸಿದೆ.

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯ­ದರ್ಶಿ ಬಾನ್‌ ಕಿ ಮೂನ್‌ ಅವ­ರಿಗೆ ತನಿಖಾ ತಂಡದ ಮುಖ್ಯಸ್ಥ ಅಕೆ ಸೆಲ್‌­­ಸ್ಟ್ರಾಮ್‌  ಶುಕ್ರವಾರ ಸಲ್ಲಿಸಿದ 82 ಪುಟ­ಗಳ ಅಂತಿಮ ವರದಿಯಲ್ಲಿ ಈ ವಿಷಯ­ವನ್ನು ಬಹಿರಂಗ ಪಡಿಸಲಾಗಿದೆ.

ಮಾರ್ಚ್‌ನಲ್ಲಿ ಸಿರಿಯಾ ಸರ್ಕಾರ ಹಾಗೂ ನಾಗ­ರಿಕ­ರ ನಡುವೆ ನಡೆದ ಘರ್ಷಣೆಯಲ್ಲಿ ರಾಸಾಯನಿಕ ಅಸ್ತ್ರ ಪ್ರಯೋಗ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ತನಿಖೆ ಕೈಗೊಳ್ಳಲಾಗಿತ್ತು.

‘ರಾಸಾಯನಿಕ ಅಸ್ತ್ರ ಬಳಸಿರುವುದು ಖಚಿತವಾಗಿದೆ. ಇದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮತ್ತು ಮಾನ­ವೀ­ಯತೆಗೆ ಮಾಡಿದ ಅವಮಾನ. ಸಿರಿ­ಯಾದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇನ್ನು ಇಂತಹ ಮಾರಕ ಅಸ್ತ್ರಗಳ ಬಳಕೆ­ಯಾಗುವುದಿಲ್ಲ ಎಂದು ನಾವು ಭರವಸೆ ನಿಡಬೇಕಾಗಿದೆ’ ಎಂದು ಮೂನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT