ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂಕೋರ್ಟ್‌ನಿಂದ ಜಿಲ್ಲೆಗೆ ಪ್ರಶಂಸೆ’

Last Updated 10 ಜನವರಿ 2014, 5:59 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ನಡೆಸಲಾಗಿರುವ ಲೋಕ್‌ ಅದಾಲತ್‌ ಯಶಸ್ವಿಯಾಗಿದ್ದು, ಅತಿ ಹೆಚ್ಚು ಪ್ರಕರಣಗಳು ಇತ್ಯರ್ಥ­ಗೊಂಡಿರುವದರಿಂದ ಜಿಲ್ಲಾ ನ್ಯಾಯಾ­ಲಯ ಸುಪ್ರೀಂ ಕೋರ್ಟ್‌ನ ಪ್ರಶಂಸೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀಕಾಂತ ಬಬಲಾದಿ ಗುರುವಾರ ಇಲ್ಲಿ ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಕಳೆದ ಲೋಕ ಅದಾಲತ್‌­ದಲ್ಲಿ 4 ಸಾವಿರ ಪ್ರಕರಣ­ಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 1189 ಪ್ರಕರಣಗಳು ಇತ್ಯರ್ಥ­ಗೊಂಡಿವೆ. ಜ.9ರಿಂದ ಮತ್ತೆ ಲೋಕ ಅದಾಲತ್ ಏರ್ಪಡಿಸಲಾಗಿದೆ. ಮಾರ್ಚ್‌ 29ರವರೆಗೆ ನಡೆಯುತ್ತದೆ. ಪ್ರತಿ ದಿನ ಸಂಜೆ 4.30 ರಿಂದ ಪ್ರಕರಣ ಇತ್ಯಾರ್ಥವಾಗುವವರೆಗೂ ಅದಾಲತ್‌ ಮುಂದುವರೆಯುತ್ತದೆ. ಜಿಲ್ಲೆಯ ಕಕ್ಷಿದಾರರು, ವಕೀಲರು ಇದರ ಪ್ರಯೋಜನ ಪಡೆಯಬೇಕು ಎಂದರು.

ಲೋಕ ಅದಾಲತ್‌ನಿಂದಾಗಿ ನ್ಯಾಯಾ­ಲಯ ವೆಚ್ಚ, ವಕೀಲರ ಶುಲ್ಕ ಮತ್ತ ಸಮಯ ಉಳಿತಾಯ­ವಾಗುತ್ತದೆ, ಸೂಕ್ತ ಹಾಗೂ ಶಾಶ್ವತ ಪರಿಹಾರ ಪಡೆದುಕೊಳ್ಳಲು ಸಾಧ್ಯವಾ­ಗುತ್ತದೆ. ಅಷ್ಟೇ ಅಲ್ಲ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ಧತೆ ನೆಲೆಸಿ ಮುಕ್ತ ನ್ಯಾಯ ದೊರಕಿಸಿಕೊಡುವುದಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.

ಲೋಕ್‌ಅದಾಲತ್‌ನಲ್ಲಿ ಅನೇಕ ಬ್ಯಾಂಕ್‌ , ಭಾರತ್‌ ಸಂಚಾರ ನಿಗಮ ಲಿಮಿಟೆಡ್‌ ಮತ್ತು ವೈವಾಹಿಕ, ಕೌಟುಂಬಿಕ ಪ್ರಕರಣಗಳು ಹೆಚ್ಚಾಗಿ ಪರಿಹಾರ ಕಂಡಿವೆ. ಆದರೆ ವೈವಾಹಿಕ ಮತ್ತ ಕೌಟುಂಬಿಕ ಸಂಬಂಧಗಳಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣ­ಗಳು ಹೆಚ್ಚಾಗಿ ದಾಖಲಾಗುತ್ತಿವೆ. ಅಲ್ಲದೇ ಒತ್ತಾಯದ ಮತ್ತು ಒಪ್ಪಿಗೆ ಇಲ್ಲದಿದ್ದರೂ ಸಾಮೂಹಿಕ ವಿವಾಹದಲ್ಲಿ ಪಾಲಕರು ಮದುವೆ ಮಾಡುವು­ದರಿಂದಲೂ ವಿಚ್ಛೇದನ ಪ್ರಕರಣಗಳು ಹೆಚ್ಚಲು ಕಾರಣ ಎಂದು ನ್ಯಾಯಾ­ಧೀಶರು ಹೇಳಿದರು.
ಹಿರಿಯ ನ್ಯಾಯಾಧೀಶ ಬಸವರಾಜ ಚೇಗರೆಡ್ಡಿ, ಸಂಧ್ಯಾ ಮಾದಿನೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT