ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಸಜ್ಜಿತ ಗ್ರಂಥಾಲಯ ಆರಂಭಕ್ಕೆ ಕ್ರಮ’

Last Updated 21 ಸೆಪ್ಟೆಂಬರ್ 2013, 10:06 IST
ಅಕ್ಷರ ಗಾತ್ರ

ರಾಮನಗರ: ‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಪೂರಕವಾಗುವಂತೆ ಸುಸಜ್ಜಿತ ಗ್ರಂಥಾಲಯವನ್ನು ಜಿಲ್ಲಾ ಕೇಂದ್ರವಾದ ರಾಮ ನಗರದಲ್ಲಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾ ಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಂ.ವಿ.ವೆಂಕಟೇಶ್‌ ಅವರು ತಿಳಿಸಿದರು. 

  ಕಂದಾಯ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಭಾಂಗಣದಲ್ಲಿ ’ಸ್ಟಡಿ ಸರ್ಕಲ್’ ಯೋಜನೆಯಲ್ಲಿ ಐಬಿಪಿಎಸ್ ಬ್ಯಾಂಕ್ ಕ್ಲರ್ಕ್‌ ಹುದ್ದೆಗಳ ನೇಮಕಾತಿಯ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾ ಗಾರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವವರ ಸಂಖ್ಯೆ ವಿರಳ ವಾಗಿದೆ. ಅವರಿಗೆ ಸುಸಜ್ಜಿತ ಗ್ರಂಥಾಲಯ, ಅಗತ್ಯ ಮೂಲ ಸೌಕರ್ಯ, ಸೂಕ್ತ ಮಾರ್ಗದರ್ಶನ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದು, ಅದಕ್ಕಾಗಿಯೇ ಜಿ.ಪಂ ವತಿಯಿಂದ ಸುಸಜ್ಜಿತ ಗ್ರಂಥಾಲಯ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

‘ಉದ್ಯೋಗ ವಿನಿಮಯ ಕಚೇರಿಯ ಆವರಣದಲ್ಲಿ ಸ್ಥಾಪಿಸಲಾಗಿರುವ ಗ್ರಂಥಾ ಲಯದ ಸೌಲಭ್ಯವನ್ನು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.

‘ಸತತ ಏಕಾಗ್ರತೆಯಿಂದ ಬ್ಯಾಂಕಿಂಗ್, ಯುಪಿಎಸ್ಸಿ, ಡಿಫೆನ್ಸ್‌ ಸರ್ವೀಸ್‌ ಇತರ ಪರೀಕ್ಷೆಗಳಲ್ಲಿ ಗೆಲುವು ಸಾಧಿಸಬಹುದು. ಇಂತಹ ಪರೀಕ್ಷೆಗಲ್ಲಿ ಪ್ರಥಮ ಪ್ರಯ ತ್ನದಲ್ಲಿ ಯಶಸ್ಸು ಸಿಗದಿದ್ದರೂ ನ್ಯೂನ್ಯತೆ ಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕು. ಇದರಿಂದ ಜೀವನದ ಲ್ಲಿಯೂ ಯಶಸ್ಸು ಗಳಿಸಬಹುದು’ ಎಂದು ಅವರು ಕಿವಿಮಾತು ಹೇಳಿದರು.

ಬಿಹಾರದ ಮೈಥಿಲಿ ಎಂಬ ಕುಗ್ರಾಮ ದಲ್ಲಿ ಹತ್ತು ಮಂದಿ ಐಎಎಸ್, ಹತ್ತು ಮಂದಿ ಐಐಟಿ ತೇರ್ಗಡೆ ಹೊಂದಿರು ವರು ಇದ್ದಾರೆ. ಗ್ರಾಮದ ಹಲವರು ’ನಾಸಾ’ದಲ್ಲಿ ಸಮಾಲೋಚಕರಾಗಿ ಕಾರ್ಯ ನಿರ್ವಹಿಸುತ್ತಿರುವರು. ಆ ಗ್ರಾಮವನ್ನು ನೀವು ಮಾದರಿ ಯಾಗಿಟ್ಟುಕೊಂಡು ಪ್ರಯತ್ನ ಪಟ್ಟಲ್ಲಿ ಖಂಡಿತ ಯಶಸು್ಸ ದೊರೆಯುತ್ತದೆ ಎಂದು ಸಿಇಒ ವೆಂಕಟೇಶ್‌ ತಿಳಿಸಿದರು.

ಕಾರ್ಪೊರೇಷನ್‌ ಬ್ಯಾಂಕಿನ (ಲೀಡ್‌ ಬ್ಯಾಂಕ್‌) ಜಿಲ್ಲಾ ವ್ಯವಸ್ಥಾಪಕ ನಾರಾಯಣಮೂರ್ತಿ ಮಾತ ನಾಡಿ, ‘ಈ ಕಾಲದಲ್ಲಿ ಪ್ರತಿಯೊಂದಕ್ಕೆ ಸ್ಪರ್ಧೆಯಿದೆ. ಬ್ಯಾಂಕಿಂಗ್ ಸ್ಪರ್ಧೆಯಲ್ಲಿ ಉತ್ತೀರ್ಣ ರಾಗಲು ತರಬೇತಿ ಅತ್ಯವಶ್ಯಕ. ಬ್ಯಾಂಕಿಂ ಗ್ ಕ್ಷೇತ್ರವು ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆ ನೀಡುತ್ತದೆ.

ಮುಂದಿನ ಎರಡು ವರ್ಷಗಳಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಶೇ40-ರಿಂದ 50ರಷ್ಟು ಉದ್ಯೋಗಿಗಳು ನಿವೃತ್ತರಾ ಗಲಿದ್ದು ಇದರಿಂದ ಬ್ಯಾಂಕ್‌ಗಳಲ್ಲಿ ಹೇರಳ ಉದ್ಯೋಗವಕಾಶ ಲಭ್ಯವಾ ಗಲಿದೆ. ಇದರ ಸದುಪಯೋಗ ಪಡೆದು ಕೊಳ್ಳಬೇಕು’ ಎಂದು ಅವರು ಹೇಳಿದರು.

ಜಿಲ್ಲಾ ಉದ್ಯೋಗ ಅಧಿಕಾರಿ ಎಸ್.ಜೆ.ಹೇಮಚಂದ್ರ ಮಾತನಾಡಿ, ‘ಸರ್ಕಾರದ ಆರ್ಥಿಕ ಚೌಕಟ್ಟಿನಲ್ಲಿ ಜಿಲ್ಲೆಯ ಉದ್ಯೋಗಕಾಂಕ್ಷಿಗಳಿಗೆ ಸಾಧ್ಯವಾದಷ್ಟು ನೆರವು ನೀಡಲಾ ಗುತ್ತಿದೆ. ಜಿಲ್ಲೆಯ 200 ಖಾಸಗಿ ಸಂಸ್ಥೆಗಳಲ್ಲಿ ಸುಮಾರು 15 ಸಾವಿರ ಉದ್ಯೋಗವಾಕಾಶ ಲಭ್ಯವಿದೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವು ನೀಡಲು ‘ಸ್ಟಡಿ ಸರ್ಕಲ್’ ಯೋಜನೆ ಯನ್ನು ಉದ್ಯೋಗ ವಿನಿಮಯ ಕಚೇರಿ ಯಿಂದ ಪ್ರಾರಂಭಿಸಿದೆ. ಈ ಯೋಜನೆ ಯಡಿ ಗ್ರಂಥಾಲಯ ಸೇವೆಯನ್ನು ಶುಕ್ರ ವಾರದಿಂದ ಪ್ರಾರಂ ಭಿಸಿದ್ದು ಇದನ್ನು ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಯಶಸ್ಸುಗಳಿಸಬೇಕೆಂದು’ ಕರೆ ನೀಡಿದರು.

‘ತಮಿಳುನಾಡಿನವರು ಎಲ್ಲೆಡೆ ಉದ್ಯೋಗ ದಲ್ಲಿರುವುದಕ್ಕೆ ಆ ರಾಜ್ಯದಲ್ಲಿ ಸ್ವರ್ಧಾತ್ಮಕ ಪರೀಕ್ಷಾರ್ಥಿ ಗಳಿಗೆ ಸರ್ಕಾರ ನೀಡುತ್ತರುವ ಪ್ರೋತ್ಸಾ ಹವೇ ಕಾರಣ ವಾಗಿದೆ. ನಮ್ಮ ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಕಾರ್ಯೋನು್ಮಖವಾಗಿ ’ಸ್ಟಡಿ ಸರ್ಕಲ್’ ಯೋಜನೆ ಪ್ರಾರಂಭಿಸಿದೆ’ ಎಂದು ಅವರು ಮಾಹಿತಿ ನೀಡಿದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತಿಮ್ಮಪ್ಪ, ಮುಖ್ಯ ಗ್ರಂಥಾಲಯ ಅಧಿಕಾರಿ ಕೃಷ್ಣಮೂರ್ತಿ, ಎಸ್.ಬಿ.ಎಂ. ಬ್ಯಾಂಕಿನ ವ್ಯವಸ್ಥಾಪಕ ಪ್ರದೀಪ್, ಎನ್.ಐ.ಐ.ಟಿ ಕೇಂದ್ರದ ವ್ಯವಸ್ಥಾಪಕ ರವಿಕಿರಣ್, ಸಂಪನ್ಮೂಲ ವ್ಯಕ್ತಿಗಳಾದ ಚತ್ವೀರ್ ಸಿಂಗ್ ಚೌಹಾನ್, ಭವ್ಯ, ಲೋಕೇಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT