ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈಕೊ ಕಿಲ್ಲರ್‌’ ಜೈಶಂಕರ್‌ ಜೈಲಿಗೆ

Last Updated 12 ಡಿಸೆಂಬರ್ 2013, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಸೈಕೊ ಕಿಲ್ಲರ್’ ಕುಖ್ಯಾ ತಿಯ ಕೈದಿ ಜೈಶಂಕರ್ ಅಲಿಯಾಸ್ ಶಂಕರ್‌ನನ್ನು (36) ನಗರದ ವಿಕ್ಟೋ ರಿಯಾ ಆಸ್ಪತ್ರೆಯಿಂದ ಗುರುವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾ ಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಆ.31ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತಪ್ಪಿಸಿ ಕೊಂಡು ಪರಾರಿಯಾಗುವ ವೇಳೆ ಗಾಯಗೊಂಡಿದ್ದ ಆತನನ್ನು ಪೊಲೀ ಸರು ಸೆ.6ರಂದು ಬಂಧಿಸಿದ್ದರು. ಆ ದಿನದಿಂದಲೂ ಆತನನ್ನು ಆಸ್ಪತ್ರೆಯಲ್ಲೇ ಇರಿಸಲಾಗಿತ್ತು.
ಜೈಶಂಕರ್‌ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ‘ಆತ ಸಂಪೂರ್ಣ ಗುಣಮು ಖನಾಗಿದ್ದು, ಆಸ್ಪತ್ರೆಯಿಂದ ಕರೆದೊ ಯ್ಯಬಹುದು’ ಎಂದು ನ್ಯಾಯಾಲಯಕ್ಕೆ ಇತ್ತೀಚೆಗೆ ವರದಿ ನೀಡಿದ್ದರು.

ಆ ವರದಿ ಆಧರಿಸಿ ಪೊಲೀಸರು ಗುರುವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಊರುಗೋಲು ಹಿಡಿದುಕೊಂಡು ನ್ಯಾಯಾಲಯಕ್ಕೆ ಬಂದಿದ್ದ ಜೈಶಂಕರ್‌ನ ಆರೋಗ್ಯ ವಿಚಾರಿಸಿದ ನ್ಯಾಯಾಧೀಶರು, ಆತನನ್ನು ಆಸ್ಪತ್ರೆಯಿಂದ ಕಾರಾಗೃಹಕ್ಕೆ ಸ್ಥಳಾಂತ ರಿಸುವಂತೆ ಆದೇಶಿಸಿದರು. ಆ ಆದೇಶ ದನ್ವಯ ಪೊಲೀಸರು ಆತನನ್ನು ಕಾರಾ ಗೃಹಕ್ಕೆ ಕರೆದೊಯ್ದರು.

‘ಜೈಶಂಕರ್‌ನನ್ನು ಹೆಚ್ಚಿನ ವಿಚಾರ ಣೆಗಾಗಿ ಪೊಲೀಸ್‌ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಸದ್ಯ ದಲ್ಲೇ ಮನವಿ ಸಲ್ಲಿಸಲಾಗುವುದು’ ಎಂದು ಪ್ರಕರಣದ ತನಿಖಾಧಿಕಾರಿ ಮಡಿವಾಳ ಉಪ ವಿಭಾಗದ ಎಸಿಪಿ ಬಿ.ಎಸ್‌. ಶಾಂತ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಷ ಸೇವಿಸಿ ಆತ್ಮಹತ್ಯೆ

ಹಳೇ ಗುಡ್ಡದಹಳ್ಳಿ ಸಮೀ ಪದ ಜನತಾ ಕಾಲೊನಿಯಲ್ಲಿ ಸೆಲ್ವಕುಮಾರ್‌ (25) ಎಂಬುವರು ಬುಧವಾರ ರಾತ್ರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂ ಡಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ಜನತಾ ಕಾಲೊನಿಯಲ್ಲಿ ವಾಸವಾಗಿದ್ದ ಅವರು ಬಾರ್‌ಬೆಂಡಿಂಗ್‌ ಕೆಲಸ ಮಾಡುತ್ತಿ ದ್ದರು.

ಅವರ ತಾಯಿ ರಾಣಿಯಮ್ಮ ಅವರು ಹತ್ತು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಇದರಿಂದ ಬೇಸರ ಗೊಂಡಿದ್ದ ಸೆಲ್ವ ಕುಮಾರ್‌, ಜನತಾ ಕಾಲೊನಿ ಸ್ಮಶಾನ ದಲ್ಲಿರುವ ತಾಯಿಯ ಸಮಾಧಿ ಬಳಿ ಹೋಗಿ ವಿಷ ಕುಡಿದು ಆತ್ಮಹತ್ಯೆ ಮಾಡಿ ಕೊಂಡಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗಜೀವನರಾಂನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT