ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರಕಗಳಿಗೆ ರಕ್ಷಣೆ ಒದಗಿಸಿ’

Last Updated 16 ಡಿಸೆಂಬರ್ 2013, 6:10 IST
ಅಕ್ಷರ ಗಾತ್ರ

ಶಹಾಪುರ: ಆದಿಲ್‌ಶಾಹಿ ರಾಜರಿಗೆ ಗೋಗಿ ಕೇಂದ್ರವು ಹೊಸ ಬೆಳಕಿನ ಸ್ಫೂರ್ತಿಯ ನೆಲೆಯಾಗಿದೆ. ಧಾರ್ಮಿಕ ಗುರು ಸೂಫಿ ಸಂತ ಚಂದಾಹುಸೇನಿ­ಯವರ ಆದರ್ಶ ತತ್ವಗಳನ್ನು ರಾಜ್ಯ­ಭಾರದಲ್ಲಿ ಅಳವಡಿಸಿಕೊಂಡಿ­ದ್ದರು. ಯೂಸೂಫ್‌ ಆದಿಲ್‌ಶಾಹಿ, ಇಸ್ಮಾ­ಯಿಲ್ ಆದಿಲ್‌ಶಾಹಿ, ಇಬ್ರಾಹಿಂ ಆದಿಲ್‌­ಶಾಹಿ ಸಮಾಧಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಭೀಮ­ರಾಯನಗುಡಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಸಂಚಾಲಕ ಭಾಸ್ಕರಾವ ಮುಡಬೂಳ ಹೇಳಿದರು.

ತಾಲ್ಲೂಕಿನ ಗೋಗಿ ಗ್ರಾಮದ ಚಂದಾಹುಸೇನಿ ದರ್ಗಾದಲ್ಲಿ ಶನಿ­ವಾರ ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಹಾಗೂ ಕನ್ನಡ ಸಾಂಸ್ಕೃತಿಕ ಶಕ್ತಿ ಕೇಂದ್ರದ ಆಶ್ರಯದಲ್ಲಿ ಹಮ್ಮಿ­ಕೊಂಡಿದ್ದ ‘ಗೋಗಿ ಆದಲ್‌ಶಾಹಿ ಸ್ಮಾರಕಗಳ ರಕ್ಷಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತಿಹಾಸದ ಮಹತ್ವ ಸಾರುವ ಗೋಗಿ ಸ್ಮಾರಕದ ಮುಂದೆ ವಿವರ­ವಾದ ಮಾಹಿತಿಯ ನಾಮಫಲಕವನ್ನು ಹಾಕ­ಬೇಕು ಎಂದು ಹೇಳಿದರು.

ಪತ್ರಕರ್ತ ದೇವು ಪತ್ತಾರ ವಿಶೇಷ ಉಪನ್ಯಾಸವನ್ನು ನೀಡಿದರು. ಚಂದಾ ಹುಸೇನಿ ದರ್ಗಾದ ಸಯ್ಯದ್‌ ಹುಸೇನಿ ಸಜ್ಜಾದ, ಸಯ್ಯದ್‌ ಹುಸೇನಿ ಆರಿ­ಫುಲ್‌ ಸಜ್ಜಾದ, ಸಯ್ಯದ್‌ ಹುಸೇನಿ ನಶಿನ, ಸಾಹೇಬಗೌಡ ಬಿಳ್ವಾರ, ರೈತ ಮುಖಂಡ ಮಲ್ಲಣ್ಣ ಪರಿವಾಣ, ಮಾನಪ್ಪ, ಕೃಷ್ಣಾ ಸುಬೇದಾರ, ರಾಜ­ಗೋಪಾಲ ವಿಭೂತೆ, ತಿಪ್ಪಣ್ಣ ಕ್ಯಾತನಾಳ, ರಾಘವೇಂದ್ರ ಹಾರಣ­ಗೇರಾ, ಶಶಿಕಾಂತ ಮಾನು, ಅತಿಕುಲ್‌ ಹುಸೇನಿ, ನಾಸಿರುದ್ಧೀನ್ ಷಾ, ವಿಶ್ವನಾಥ ಫಿರಂಗಿ ಅಂಬರೇಶ ಇಟಗಿ, ಉಮೇಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT