ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಂಚಿಕೊಳ್ಳುವ ಮುನ್ನ ಯೋಚಿಸಿ’

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಹಂಚಿಕೊಳ್ಳುವ ಮುನ್ನ ಯೋಚಿಸಿ’ ಎಂಬ ಸಂದೇಶವನ್ನು ಸಾಮಾ­ಜಿಕ ಜಾಲತಾಣ ಫೇಸ್‌ಬುಕ್‌, ತನ್ನ ಯುವ ಬಳಕೆದಾರರಿಗೆ ನೀಡುತ್ತಿದೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳನ್ನು ಹಂಚುವ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಈ ಸಂದೇಶವು ಮಾಹಿತಿ ನೀಡುತ್ತದೆ.
ಈ ಸಲುವಾಗಿ ಫೇಸ್‌ಬುಕ್ ರೂಪಿಸಿರುವ www.facebook.com/safety ಲಿಂಕ್‌ನಲ್ಲಿ ಕನ್ನಡ, ಹಿಂದಿ, ಗುಜರಾತಿ, ಮಲಯಾಳ, ಬಂಗಾಳಿ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ.

ಯುವಜನತೆ ತಮ್ಮ ಚಿಂತನೆ, ಚಿತ್ರ­ಗಳು ಮತ್ತು ಮಾಹಿತಿಯನ್ನು ಹಂಚಿ­ಕೊಳ್ಳುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ವಹಿಸಲಿ ಎಂಬ ಉದ್ದೇಶದಿಂದ ಫೇಸ್‌ಬುಕ್ ಮತ್ತು ಮೀಡಿಯಾ­ಸ್ಮಾರ್ಟ್ ಜಂಟಿಯಾಗಿ ಈ ಸಂದೇಶ, ಮಾರ್ಗದರ್ಶಿಯನ್ನು ರೂಪಿಸಿವೆ.

ಯಾವುದೇ ಪೋಸ್ಟ್‌ಗಳನ್ನು ಹಂಚುವ ಮುನ್ನ ಈ ಮಾರ್ಗ­ದರ್ಶಿಯು, ಪೋಸ್ಟ್ ಹಂಚಿಕೆ­ಯಿಂದಾ­ಗಬಹುದಾದ ದುಷ್ಪರಿಣಾಮಗಳ ಬಗ್ಗೆ ಬಳಕೆದಾರರಿಗೆ ಸೂಚನೆ  ನೀಡಲಿದೆ. ನಿರ್ದಿಷ್ಟ ವಿಷಯ­ಗಳ ಕುರಿತಾದ ಹೇಳಿಕೆಗಳು, ಅಭಿಪ್ರಾಯ­ಗಳು ಮತ್ತು ಚಿತ್ರಗಳ ಹಂಚಿಕೆಯಿಂದ ಮತ್ತೊಬ್ಬರಿಗೆ ಕಿರಿಕಿರಿ ಮತ್ತು ನೋವು ಉಂಟಾಗಬಹುದಾದ ಸಾಧ್ಯತೆಯ ಬಗ್ಗೆ ಅದು ಎಚ್ಚರಿಕೆ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT