ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಟ್ಟೆಪಾಡಿಗೆ ಹಗ್ಗ ಮೇಲಿನ ನಡಿಗೆ’

Last Updated 20 ಡಿಸೆಂಬರ್ 2013, 6:55 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಶಾಲೆ ಮೆಟ್ಟಿಲು ಹತ್ತಿಲ್ಲ, ಭಾಷೆ ಬರುವುದಿಲ್ಲ  ಇಡೀ ಕುಟುಂಬದ ಬದುಕು ಸಾಗುತ್ತಿರುವುದು ಮಾತ್ರ ಹಗ್ಗದ ಮೇಲೆಯೇ! ಹೊಟ್ಟೆ ಪಾಡಿಗಾಗಿ ಕಲಿತ ವಿದ್ಯೆ ಎಂದಿಗೂ ಕೈಕೊಟ್ಟಿಲ್ಲ! ಇದು ಬಡ ಕುಟುಂಬವೊಂದರ ದೈನಂದಿನ ದಾರುಣ ಬದುಕು.

ಮೂಲತಃ ಛತ್ತೀಸ್‌ಗಡದ ಮಂಜನಾವರ್ ಎಂಬ ಹಳ್ಳಿಯೊಂದರ ಲಲಿತ್‌ ಹಾಗೂ ಸಬೀತಾ ದಂಪತಿಗೆ  ಸತ್ಪಾಲ್‌ (7) ಕಲ್ಪನಾ (3) ಎಂಬ ಪುತ್ರಿಯರು. .

ಇಡೀ ಕುಟುಂಬದ ಆಸರೆಯೇ ಹಿರಿಯ ಮಗಳು ಸತ್ಪಾಲ್‌. ತಂದೆ ತಾಯಿಯ ಮಮತೆಯಲ್ಲಿ  ಶಾಲೆಯಲ್ಲಿ ಚಿಣ್ಣರೊಂದಿಗೆ ಆಟವಾಡುವ ವಯಸ್ಸಿಗೆ ವಿರುದ್ಧವಾಗಿ ಈಕೆ ಸಂಸಾರದ ನೊಗ ಹೊತ್ತಿದ್ದಾಳೆ.

ನಮ್ಮನಾಳುವ ಸರ್ಕಾರಗಳು ಅಧಿಕಾರದ ಲಾಲಸೆಗೆ  ಕಡು ಬಡವರಿಗಾಗಿ ಹಲವು ಯೋಜನೆ ಜಾರಿಗೊಳಿಸಿವೆ. ಆದರೆ ದೇಶ ಸುತ್ತುವ ಅಲೆಮಾರಿ ಜನಾಂಗಗಳಿಗೆ ಸರ್ಕಾರದ ಸೌಲಭ್ಯಗಳು ಸಿಕ್ಕಿಲ್ಲ. ಅಲೆಮಾರಿ ಜನಾಂಗದವರಿಗೂ ಸರ್ಕಾರ ಅಗತ್ಯ ಸೌಕರ್ಯ ನೀಡಬೇಕು ಎನ್ನುವುದು ಸ್ಥಳೀಯರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT