ಕೃತಕ ಕೈ ಜೋಡಣಾ ಶಿಬಿರ

7

ಕೃತಕ ಕೈ ಜೋಡಣಾ ಶಿಬಿರ

Published:
Updated:
Deccan Herald

ಎಲೆನ್ ಮೆಡೋಸ್ ಪ್ರೋಸ್ಥೆಟಿಕ್ ಹ್ಯಾಂಡ್ ಫೌಂಡೇಷನ್‌ ವತಿಯಿಂದ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ತಯಾರಿಸಿದ ಕೃತಕ ಕೈಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ನೀಡುವ ಶಿಬಿರವನ್ನು ನಗರದ ಫ್ರೆಂಡ್ಸ್ ವೆಲ್ ಫೇರ್ ಸಂಸ್ಥೆ ಇದೇ 16ರಂದು ಹಮ್ಮಿಕೊಂಡಿದೆ.

ಈ ಶಿಬಿರಕ್ಕೆ ರೋಟರಿ ಇಂಟರ್ ನ್ಯಾಷನಲ್ ಸಹಯೋಗವಿದೆ. ಗುಣಮಟ್ಟದ ತೋಳು ಹಾಗೂ ಕೃತಕ ಅಂಗ ಇದಾಗಿದ್ದು, ಇದನ್ನು ಬಳಸುವುದು ಸುಲಭ. 400 ಗ್ರಾಂ ತೂಕದ ಈ ಕೃತಕ ಕೈಗಳ ಬಳಕೆಯಿಂದ ಕೈ ಇಲ್ಲದ ಕೊರತೆ ನೀಗಿಸಬಹುದು. ಕೃತಕ ಕೈ ಬಳಸಿ ಊಟ ಮಾಡುವುದು, ಹಲ್ಲು ಉಜ್ಜುವುದು, ಬರೆಯಬಹುದು ಹಾಗೂ 4 ಕೆ ಜಿ ತೂಕದ ವರೆಗಿನ ಭಾರ ಎತ್ತಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮೊಣಕೈಗಿಂತ ಕೆಳಗಿನ ಕೈ ಇಲ್ಲದವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಇದನ್ನು ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಸುಲಭವಾಗಿ ಜೋಡಿಸಬಹುದು. ಕೇವಲ 2 ಗಂಟೆಯೊಳಗೆ ಕೃತಕ ಕೈ ಜೋಡಿಸಿ ಅದನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಪ್ರಪಂಚ ದಾದ್ಯಂತ 45 ಸಾವಿರಕ್ಕಿಂತಲೂ ಅಧಿಕ ಮಂದಿ, ಭಾರತದಲ್ಲಿ 11 ಸಾವಿರಕ್ಕೂ ಹೆಚ್ಚು ಜನರು ಇಂತಹ ಕೃತಕ ಕೈಗಳನ್ನು ಬಳಸುತ್ತಿದ್ದಾರೆ ಎಂದಿದೆ ಸಂಸ್ಥೆ.

ಫ್ರೇಂಡ್ಸ್ ವೆಲ್ ಫೇರ್ ಸಂಸ್ಥೆಯು 1995ರಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದು, ಸುಟ್ಟಗಾಯಗಳ ಸಂತ್ರಸ್ತರಿಗೆ, ಸೀಳು ತುಳಿ ಹಾಗೂ ಅಂಗಳಿನ ರೋಗಿಗಳಿಗೆ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸುತ್ತಿದೆ. ಅಂಗವಿಕಲತೆಯಿಂದಾಗಿ ಅಥವಾ ಅಪಘಾತಗಳಿಂದಾಗಿ ಮುಂಗೈ ಕಳೆದುಕೊಂಡವರಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದ ಲಾಭ ಪಡೆದ ಲತಾ ದೇಕ್ಲೇ ಮಾತನಾಡಿ, ‘7 ವರ್ಷಗಳ ಹಿಂದೆ ಬೇಲೆ ಮಿಲ್ ಎಂಬ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕೈ ಕಳೆದುಕೊಂಡೆ. ಬಳಿಕ ಆ ನ್ಯೂನತೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದೆ. ಈ ಶಿಬಿರದಿಂದ ಕೃತಕ ಕೈ ಪಡೆದುಕೊಂಡೆ. ಇದರಿಂದ, ಕಳೆದುಕೊಂಡ ಅಂಗವನ್ನು ಮತ್ತೆ ಹಿಂಪಡೆದಿದ್ದೇನೆ ಎಂದು ಅನಿಸುತ್ತಿದೆ’ ಎಂದಿದ್ದಾರೆ.

ಸ್ಥಳ: ಆದರ್ಶ ಕಾಲೇಜು, ಟಿ.ಆರ್.ಮಿಲ್ ಬಳಿ, ಚಾಮರಾಜಪೇಟೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !