ಭಾರತ ಹಲವು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳ ನೆಲೆಬೀಡಾಗಿದೆ. ಇವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಿಂತನೆಗಳ ಮೂಲಕ ಜನರಲ್ಲಿ ಪ್ರಭಾವ ಬೀರಿವೆ.

ಇಂತಹ ಧಾರ್ಮಿಕ ಸಂಸ್ಥೆಗಳಲ್ಲಿ ಮುಖ್ಯವಾದದ್ದು ಡೇರಾ ಸಚ್ಚಾ ಸೌದಾ. ಇದು ಹರಿಯಾಣ ರಾಜ್ಯದ ಸಿರ್ಸಾದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಈ ಸಂಸ್ಥೆ ದೇಶದಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವುದು ವಿಶೇಷ.
.ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ಗೆ 40 ದಿನಗಳ ಪೆರೋಲ್.20 ದಿನಗಳ ಪೆರೋಲ್ ಮೇಲೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಬಿಡುಗಡೆ.
ಹಿನ್ನೆಲೆ...

ಸಿಖ್ ಧರ್ಮದ ಗುರುಗಳಾದ ಶಾ ಮಸ್ತಾನ್ ಜೀ ಮಹಾರಾಜ್ 1948ರಲ್ಲಿ ಡೇರಾ ಸಚ್ಚಾ ಸೌದಾವನ್ನು ಸ್ಥಾಪನೆ ಮಾಡಿದರು. ಡೇರಾ ಎಂಬ ಪದ ಸಂತನ ನಿವಾಸ ಅಥವಾ ಆಶ್ರಮ ಎಂಬ ಅರ್ಥವನ್ನು ಸೂಚಿಸುತ್ತದೆ. ಸಚ್ಚಾ ಸೌದಾ ಎಂದರೆ 'ಸತ್ಯದ ಮಾರ್ಗ' ಎಂಬ ಅರ್ಥವಿದೆ. ಡೇರಾ ಸಚ್ಚಾ ಸೌದಾ ಎಂದರೆ ಸತ್ಯದ ದಾರಿ ತೋರುವ ಆಶ್ರಮ ಎಂಬ ಅರ್ಥವನ್ನು ಕೊಡುತ್ತದೆ.

ಡೇರಾ ಇಲ್ಲಿಯವರೆಗೂ ಮೂವರು ಗುರುಗಳನ್ನು ಕಂಡಿದೆ. ಸದ್ಯ ಗುರ್ಮಿತ್ ರಾಮ್ ರಹಿಮ್ ಸಿಂಗ್ ಮುಖ್ಯಸ್ಥರಾಗಿದ್ದಾರೆ. ಸಿಖ್ ಧರ್ಮದವರೇ ಡೇರಾದ ಗುರುಗಳಾಗುವುದು ವಾಡಿಕೆ.

ಸಚ್ಚಾ ಸೌದಾ ಉತ್ತರ ಭಾರತದಲ್ಲಿ ವ್ಯಾಪಕವಾಗಿ ವಿಸ್ತರಿಸಿದ್ದು ವಿಶೇಷವಾಗಿ ಹರಿಯಾಣ, ಪಂಜಾಬ್, ಉತ್ತರಪ್ರದೇಶ ಮತ್ತು ರಾಜಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿ ಇದರ ಪ್ರಭಾವ ಹೆಚ್ಚಾಗಿದೆ.

ಸಂಸ್ಥೆಯ ಗುರುಗಳು ಸಿಖ್ ಧರ್ಮದ ಹಿನ್ನೆಲೆಯಿಂದ ಬಂದವರಾಗಿದ್ದರೂ ಇದರ ಅನುಯಾಯಿಗಳಲ್ಲಿ ಹೆಚ್ಚಿನವರು ಹಿಂದೂ ಸಮುದಾಯದ ಕಾರ್ಮಿಕ ಮತ್ತು ಮಧ್ಯಮ ವರ್ಗದ ಜನರೇ ಇದ್ದಾರೆ. ಸುಮಾರು 20 ಲಕ್ಷಕ್ಕೂ ಹೆಚ್ಚು ಭಕ್ತರನ್ನು ಹೊಂದಿರುವುದಾಗಿ ಸಂಸ್ಥೆಯು 2020ರಲ್ಲಿ ಹೇಳಿಕೊಂಡಿತ್ತು. ದೇಶದ ವಿವಿಧ ಭಾಗಗಳಲ್ಲಿ 38 ಡೇರಾಗಳು ಕಾರ್ಯನಿರ್ವಹಿಸುತ್ತಿವೆ.

ಸಂಸ್ಕೃತಿ ಮತ್ತು ಜೀವನ ಶೈಲಿ...

ಡೇರಾ ಸಚ್ಚಾ ಸೌದಾ ತನ್ನ ಅನುಯಾಯಿಗಳಿಗೆ ನಿಯಮಿತ ಜೀವನ ಶೈಲಿ ಅನುಸರಿಸಲು ಸಲಹೆ ನೀಡುತ್ತದೆ. ಸಂಸ್ಥೆಯ ಉಪದೇಶಗಳ ಪ್ರಕಾರ...

* ಮದ್ಯಪಾನ ಮತ್ತು ತಂಬಾಕು ಸೇವನೆ ಮಾಡಬಾರದು

* ಮಾಂಸ ಹಾಗೂ ಮೊಟ್ಟೆ ಸೇವನೆ ತ್ಯಜಿಸಲು ಪ್ರೋತ್ಸಾಹ

* ಮಾನವೀಯತೆ, ಸೇವಾಭಾವ ಮತ್ತು ನೈತಿಕ ಜೀವನವನ್ನು ಉತ್ತೇಜಿಸುವುದು

* ಜಾತಿ, ಮತ, ಧರ್ಮ ಅಥವಾ ರಾಷ್ಟ್ರೀಯತೆ ಭೇದವಿಲ್ಲದೆ ಎಲ್ಲರನ್ನು ಗೌರವಿಸುವ ಸಂದೇಶ

ಈ ತತ್ವಗಳ ಮೂಲಕ ಸಂಸ್ಥೆಯು ಜನರ ಸೇವೆ ಮಾಡುವುದರ ಜೊತೆಗೆ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಪ್ರಯತ್ನ ಮಾಡುತ್ತಿದೆ.

ಆರ್ಥಿಕ ಮತ್ತು ರಾಜಕೀಯ ಚಟುವಟಿಕೆ...

ಸಂಸ್ಥೆಯು ಭಕ್ತರಿಂದ ಹಣಕಾಸು ಅಥವಾ ಉಡುಗೊರೆಗಳನ್ನು ಸ್ವೀಕರಿಸುವುದಿಲ್ಲ. ಬದಲಾಗಿ ತನ್ನ ಆಶ್ರಮಗಳಲ್ಲಿ ಹಣಕಾಸು ಕ್ರೂಢೀಕರಣಕ್ಕೆ ಆರ್ಥಿಕ ವ್ಯವಹಾರ ನಡೆಸುತ್ತದೆ. ಇವುಗಳಲ್ಲಿ ಸೂಪರ್ ಮಾರ್ಕೆಟ್ಗಳು, ಕ್ಯಾಂಟೀನ್ಗಳು, ಸಣ್ಣ ಕಾರ್ಖಾನೆಗಳು, ರೆಸ್ಟೋರೆಂಟ್ ಮತ್ತು ಹೋಟೆಲ್ಗಳು ಸೇರಿವೆ. ಈ ಘಟಕಗಳನ್ನು ಸಂಸ್ಥೆಯ ಸಾಧುಗಳು ಮತ್ತು ಸ್ವಯಂ ಸೇವಕರು ನಿರ್ವಹಿಸುತ್ತಾರೆ.

ಡೇರಾ ಸಚ್ಚಾ ಸೌದಾ ಕೆಲವು ಸಂದರ್ಭಗಳಲ್ಲಿ ತನ್ನ ಅನುಯಾಯಿಗಳಿಗೆ ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಮತ ಚಲಾಯಿಸಲು ಸೂಚಿಸುತ್ತದೆ.

ಕಲ್ಯಾಣ ಚಟುವಟಿಕೆಗಳು...

ಡೇರಾ ಸಚ್ಚಾ ಸೌದಾ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಕಲ್ಯಾಣ ಮತ್ತು ವಿಪತ್ತು ನಿರ್ವಹಣಾ ಸಂಘಟನೆ ಘಟಕ ಸ್ಥಾಪಿಸಿದ್ದು ಇದರಲ್ಲಿ ಸಾವಿರಾರು ಜನ ವೈದ್ಯರು, ಎಂಜಿನಿಯರ್ಗಳು ಮತ್ತು ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಹಿಮಾಚಲ, ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಸಂಸ್ಥೆಯ ಸ್ವಯಂಸೇವಕರು ವೈದ್ಯಕೀಯ ನೆರವು, ಆಹಾರ ವಿತರಣೆ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು.

ಡೇರಾ ಸಚ್ಚಾ ಸೌದಾವು ಸಿರ್ಸಾದಲ್ಲಿ 400 ಹಾಸಿಗೆಗಳ ಮಲ್ಟಿ–ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿದೆ. ಹಲವಾರು ಸಾಮಾಜಿಕ ಅಭಿಯಾನಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಸ್ವಚ್ಛತಾ ಅಭಿಯಾನ, ಪರಿಸರ ಸಂರಕ್ಷಣೆ, ವೇಶ್ಯಾವಾಟಿಕೆ ವಿರೋಧಿ ಉಪಕ್ರಮಗಳು ಮತ್ತು ತೃತೀಯ ಲಿಂಗಿಗಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುತ್ತಿದೆ.

ಡೇರಾವು ದೊಡ್ಡ ಪ್ರಮಾಣದ ರಕ್ತದಾನ ಶಿಬಿರಗಳನ್ನು ಆಯೋಜಿಸುವುದಕ್ಕೂ ಪ್ರಸಿದ್ಧವಾಗಿದೆ. ಶಿಬಿರಗಳಲ್ಲಿ ಲಕ್ಷಾಂತರ ಜನರು ರಕ್ತದಾನ ಮಾಡಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸಿದ ದಾಖಲೆಯನ್ನು ಡೇರಾ ಸಚ್ಚಾ ಸೌದಾ ಮಾಡಿದೆ.

ವಿವಾದ...

ಡೇರಾದ ಮುಖ್ಯಸ್ಥರಾದ ಗುರ್ಮಿತ್ ರಾಮ್ ರಹಿಮ್ ಸಿಂಗ್ ಕೊಲೆ ಆರೋಪ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಸೇರಿದ್ದಾರೆ. ಈ ಘಟನೆ ಸಂಸ್ಥೆಯ ಮೇಲೆ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ.

ಭಾರತದಲ್ಲಿ ವ್ಯಾಪಕ ಅನುಯಾಯಿಗಳನ್ನು ಹೊಂದಿರುವ ಪ್ರಮುಖ ಸಾಮಾಜಿಕ–ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಒಂದಾಗಿರುವ ಡೇರಾ ಸಚ್ಚಾ ಸೌದಾ ಜನ ಸೇವೆ, ಕಲ್ಯಾಣ ಮತ್ತು ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಜೀವನದ ಮೇಲೆ ಪ್ರಭಾವ ಬೀರಿದೆ. ಡೇರಾದ ನಾಯಕತ್ವದ ಮೇಲೆ ಬಂದ ವಿವಾದಗಳ ನಡುವೆಯೂ ಡೇರಾ ಸಚ್ಚಾ ಸೌದಾ ಸಮಾಜ ಸೇವೆ ಮತ್ತು ಆಧ್ಯಾತ್ಮಿಕ ಸಂದೇಶಗಳ ಮೂಲಕ ತನ್ನ ಚಟುವಟಿಕೆಗಳನ್ನು ಮುಂದುವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.