ಮೈತ್ರಿ ಬಲವಂತದ ಮಾಘ ಸ್ನಾನ; ಅರುಣ

ಗುರುವಾರ , ಏಪ್ರಿಲ್ 25, 2019
31 °C
ಜೆಡಿಎಸ್‌ ವಿರುದ್ಧ ಹರಿಹಾಯ್ದ ವಿಧಾನ ಪರಿಷತ್ ಸದಸ್ಯ

ಮೈತ್ರಿ ಬಲವಂತದ ಮಾಘ ಸ್ನಾನ; ಅರುಣ

Published:
Updated:

ವಿಜಯಪುರ: ‘ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಬಲವಂತದ ಮಾಘ ಸ್ನಾನದಂತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ರಾಜ್ಯದಲ್ಲಿನ ದೋಸ್ತಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಮೆಚ್ಚಿಸಲಿಕ್ಕಾಗಿಯೇ ದಳಪತಿಗಳು ಜೆಡಿಎಸ್‌ ಅಧ್ಯಕ್ಷ ಎಚ್.ವಿಶ್ವನಾಥ್‌ ದೂರವಿಡುತ್ತಿದ್ದಾರೆ. ಜೆಡಿಎಸ್‌ನ ಇಬ್ಬರು ಸಚಿವರು, ಮೈಸೂರು ಮೈತ್ರಿಯ ಯಾವೊಂದು ಸಭೆಯಲ್ಲಿ ಇದೂವರೆಗೂ ಭಾಗಿಯಾಗುತ್ತಿಲ್ಲ. ಇದು ಏನನ್ನು ಸೂಚಿಸುತ್ತದೆ’ ಎಂದು ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೈತ್ರಿ ಮುಖಂಡರಿಗೆ ಪ್ರಶ್ನಿಸಿದರು.

‘ಜೆಡಿಎಸ್ ಲಿಂಗಾಯತ ವಿರೋಧಿ, ಉತ್ತರ ಕರ್ನಾಟಕದ ವಿರೋಧಿ ಎಂಬ ಕಾರಣಕ್ಕೆ ಈ ಭಾಗದ ಕಾಂಗ್ರೆಸ್‌ ಮುಖಂಡರು, ಸಚಿವರು, ಅಪ್ಪ–ಮಗ ಯಾವ ಕಾರಣಕ್ಕೂ ನಮ್ಮ ಭಾಗಕ್ಕೆ ಪ್ರಚಾರಕ್ಕೆ ಬರುವುದೇ ಬೇಡ ಎಂದು ಹೇಳುತ್ತಿದ್ದಾರೆ.

ಇಂಥಹ ಸನ್ನಿವೇಶದಲ್ಲಿ ವಿಜಯಪುರದಿಂದ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿಸಿದೆ. ಈಗಲೇ ಅಭ್ಯರ್ಥಿ ಕುಟುಂಬ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವುದು ಒಳ್ಳೆಯ ಬೆಳವಣಿಗೆ. ಟೀಕಿಸಬೇಕು ಎಂಬ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿದೆ. ಇದ್ಯಾವುದು ಕ್ಷೇತ್ರದ ಮತದಾರರ ಮೇಲೆ ಪರಿಣಾಮ ಬೀರಲ್ಲ’ ಎಂದು ಹೇಳಿದರು.

‘ನರೇಂದ್ರ ಮೋದಿ ನಮ್ಮ ನಾಯಕ. ನಮೋ ನಾಮಬಲವೇ ನಮಗೆ ಶ್ರೀರಕ್ಷೆ. ಎಡಗೈಯಲ್ಲಿ ಜಿಗಜಿಣಗಿ ಸಾಧನೆಯ ಹೊತ್ತಿಗೆ ಹಿಡಿದಿದ್ದರೆ, ಬಲಗೈನಲ್ಲಿ ಮೋದಿಯ ಸಾಧನೆಯಿದೆ’ ಎಂದು ಜೆಡಿಎಸ್‌ ಮುಖಂಡರಿಗೆ ತಿರುಗೇಟು ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !