ಭಾನುವಾರ, ಸೆಪ್ಟೆಂಬರ್ 22, 2019
23 °C

ಪಾಕ್ ತೊರೆದ ಆಸಿಯಾ ಬೀಬಿ

Published:
Updated:
Prajavani

ಇಸ್ಲಾಮಾಬಾದ್: ಧರ್ಮನಿಂದನೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿ ಬಳಿಕ ಶಿಕ್ಷೆಯಿಂದ ಮುಕ್ತವಾಗಿದ್ದ ಆಸಿಯಾ ಬೀಬಿ, ಪಾಕಿಸ್ತಾನ ತೊರೆದಿದ್ದಾರೆ. 

‘ಆಸಿಯಾ ಸ್ವಇಚ್ಛೆಯಿಂದಲೇ ಪಾಕಿಸ್ತಾನದಿಂದ ಹೊರಹೋಗಿದ್ದಾರೆ’ ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿವೆ.  ಆದರೆ ಅವರು ಎಲ್ಲಿಗೆ ತೆರಳಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. 

‘ಆಸಿಯಾ ಜತೆ ನೇರ ಮಾತನಾಡಿಲ್ಲ. ಆದರೆ ಅವರು ಕೆನಡಾಗೆ ತೆರಳಿದ್ದಾರೆ ಎಂದು ಮೂಲಗಳಿಂದ ತಿಳಿಯಿತು. ಈಗಾಗಲೇ ಅವರ ಪುತ್ರಿಯರು ಅಲ್ಲಿದ್ದಾರೆ’ ಎಂದು ಆಸಿಯಾ ಪರ ವಕೀಲ ಸೈಫ್ ಉಲ್ ಮುಲೂಕ್ ಹೇಳಿದ್ದಾರೆ. 

 

Post Comments (+)