ಜಾಮೀನು ನಿಬಂಧನೆ ಉಲ್ಲಂಘನೆ ಅಸಾಂಜ್‌ ದೋಷಿ: ಕೋರ್ಟ್

ಭಾನುವಾರ, ಏಪ್ರಿಲ್ 21, 2019
32 °C

ಜಾಮೀನು ನಿಬಂಧನೆ ಉಲ್ಲಂಘನೆ ಅಸಾಂಜ್‌ ದೋಷಿ: ಕೋರ್ಟ್

Published:
Updated:

ಲಂಡನ್‌/ಕ್ವಿಟೊ: ವಿಕಿಲೀಕ್ಸ್‌ ಸಹ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ಜಾಮೀನು ನಿಬಂಧನೆಗಳನ್ನು ಉಲ್ಲಂಘಿಸಿ ತಪ್ಪೆಸಗಿದ್ದಾರೆ ಎಂದು ಇಲ್ಲಿನ ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಅಸಾಂಜ್‌ ಅವರನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದ್ದು ಶಿಕ್ಷೆ ವಿಧಿಸುವುದು ಬಾಕಿ ಇದೆ. ಇವರಿಗೆ ಒಂದು ವರ್ಷದವರೆಗೆ ಶಿಕ್ಷೆ ವಿಧಿಸಬಹುದು.

ಅಸಾಂಜ್‌ ಗಡಿಪಾರಿಗೆ ಅಮೆರಿಕ ಮನವಿ ಮಾಡಿರುವ ಕಾರಣ ಮೇ 2ರಂದು ಅವರು ಮತ್ತೊಮ್ಮೆ ಕೋರ್ಟ್‌ ವಿಚಾರಣೆ ಎದುರಿಸಲಿದ್ದಾರೆ.

‘ಬ್ರಿಟನ್‌ನಲ್ಲಿ ನೀಡಿದ್ದ ಜಾಮೀನು ನಿಬಂಧನೆಗಳನ್ನು ಉಲ್ಲಂಘನೆ ಮಾಡಿದ ಆರೋಪವಲ್ಲದೇ ಅಮೆರಿಕ ಸಲ್ಲಿಸಿದ ಗಡಿಪಾರು ಮನವಿಯಂತೆಯೂ ಜೂಲಿಯನ್‌ ಅಸಾಂಜ್‌ನನ್ನು ಬಂಧಿಸಲಾಗಿದೆ’ ಎಂದು ಬ್ರಿಟನ್‌ನ ಪೊಲೀಸರು ತಿಳಿಸಿದ್ದಾರೆ. 2010ರಲ್ಲಿ ಅಮೆರಿಕದ ಮಿಲಿಟರಿ ಮತ್ತು ರಾಜತಾಂತ್ರಿಕ ದಾಖಲೆಗಳ ಸೋರಿಕೆಯಾಗಿದ್ದು ಕಂಪ್ಯೂಟರ್‌ಗಳಿಗೆ ಕನ್ನ ಹಾಕಿದ ಪಿತೂರಿಯಲ್ಲಿ ಅಸಾಂಜ್‌ ಪಾತ್ರವಿದೆ ಎಂದು ಅಮೆರಿಕ ಆರೋಪಿಸಿತ್ತು. 

ಕರಾಳ ದಿನ:  ‘ವಿಕಿಲೀಕ್ಸ್‌ನ ಸಹ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ಬಂಧನ ಪತ್ರಿಕಾ ಸ್ವಾತಂತ್ರ್ಯದ ಕರಾಳ ಕ್ಷಣ’ ಎಂದು ತಲೆಮರೆಸಿಕೊಂಡಿದ್ದ ಅಮೆರಿಕದ ಮಾಜಿ ಗುತ್ತಿಗೆದಾರ ಎಡ್ವರ್ಡ್‌ ಸ್ನೋಡೆನ್‌ ಪ್ರತಿಪಾದಿಸಿದ್ದಾರೆ.

‘ಅಸಾಂಜ್‌ ಟೀಕಾಕಾರರು ಸಂಭ್ರಮಿಸಬಹುದು. ಆದರೆ ಇದು ಮಾತ್ರ ಕರಾಳ ಕ್ಷಣವೇ ಆಗಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಅತ್ಯಾಚಾರ ಆರೋಪಕ್ಕೂ ಮರುಜೀವ: ಇಲ್ಲಿನ ಈಕ್ವೆಡಾರ್‌ನ ರಾಯಭಾರ ಕಚೇರಿಯಲ್ಲಿ ಅಸಾಂಜ್‌ ಬಂಧನಕ್ಕೊಳಗಾದ ಬೆನ್ನಲ್ಲೇ ಅವರ ವಿರುದ್ಧ ಇದ್ದ ಅತ್ಯಾಚಾರ ಆರೋಪಕ್ಕೂ ಈಗ ಮರುಜೀವ ಬಂದಿದೆ.

 ಸ್ವೀಡನ್‌ನಲ್ಲಿ 2010ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಅಸಾಂಜ್‌ ಮೇಲಿತ್ತು. ಆದರೆ, ಈ ಪ್ರಕರಣದ ವಿಚಾರಣೆಯನ್ನು 2017ರಲ್ಲಿ ಕೈಬಿಡಲಾಗಿತ್ತು.

ಮರುವಿಚಾರಣೆಗೆ ಕೋರುವುದಾಗಿ ಸಂತ್ರಸ್ತೆ ಪರ ವಕೀಲೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !