ಯಾವುದೇ ಹರಳುಗಳನ್ನು ಯಾರು ಬೇಕಾದರೂ, ಮನಸ್ಸಿಗೆ ಬಂದಂತೆ ಧರಿಸುವುದು ಸೂಕ್ತವಲ್ಲ. ಶುಭ ಗ್ರಹಗಳಾದ ಚಂದ್ರ, ಬುಧ, ಗುರು, ಶುಕ್ರರೇ ಈ ಗ್ರಹಗಳ ಜೀವ ಸೌರಭಕ್ಕೆ ಪುಷ್ಟಿಕೊಡುವ ಹರಳುಗಳ ಮೂಲಕ ಮಾತ್ರ ತಮ್ಮ ಶಕ್ತಿ ಸಂವರ್ಧಿಸಿಕೊಳ್ಳುತ್ತವೆಯೇ ವಿನಃ ಯಾವುದೋ ಒಂದು ಹರಳು ಆಯ್ದು ಧರಿಸಿದ ಮಾತ್ರಕ್ಕೆ ಗುರಿ ತಲುಪಿಸುವ ಮಾರ್ಗ ತೋರಿಸಲಾರವು.

ಶುಭ ಗ್ರಹದ ವಿಚಾರವೇ ಹೀಗಿದ್ದ ಮೇಲೆ, ಕ್ರೂರ ಗ್ರಹಗಳಾದ ಸೂರ್ಯ, ಕುಜ, ಶನಿ, ರಾಹು ಮತ್ತು ಕೇತು ಗ್ರಹಗಳು ಬೇಕಿರದ ಹರಳುಗಳನ್ನು ಮನಸ್ಸಿಗೆ ಬಂದಂತೆ ಧಾರಣ ಮಾಡಿಕೊಂಡರೆ ತಮ್ಮ ಸುಸಂಬದ್ಧ ಲಯವನ್ನು ಕಳೆದುಕೊಂಡು ಎಡವಟ್ಟುಗಳಿಗೆ ಕಾರಣ ಮಾಡುತ್ತವೆ. ಇನ್ನು ಜಾತಕ ಕುಂಡಲಿಯಲ್ಲಿ ಈ ಕ್ರೂರ ಗ್ರಹಗಳು ಅಶುಭವನ್ನೇ ತರುವ ಗ್ರಹಗಳಾದರೆ, ಬಹಳಷ್ಟು ರೀತಿಯಲ್ಲಿ ದಿಕ್ಕನ್ನೇ ತಪ್ಪಿಸುವ ಪರದಾಟ ತರುತ್ತವೆ. ರಾಹು ಹಾಗೂ ಕೇತು ಗ್ರಹಗಳೂ ಹರಳುಗಳ ದೃಷ್ಟಿಯಿಂದ ನಿರ್ದಿಷ್ಟ ಕಾಲ ಘಟ್ಟಗಳಲ್ಲಿ ಮಾತ್ರವೇ ಹರಳುಗಳನ್ನು ಧರಿಸಲು ಭಾರತೀಯ ಜ್ಯೋತಿಷ ವಿಜ್ಞಾನ ರೀತ್ಯಾ ಅವಕಾಶ ಕಲ್ಪಿಸುತ್ತವೆ.

ನವರತ್ನ ಧಾರಣೆ

ಪ್ರತಿ ವ್ಯಕ್ತಿಯ ವಿಚಾರದಲ್ಲಿ ಆಯಾ ವ್ಯಕ್ತಿಯು ಧರಿಸಬೇಕಾದ ಹರಳು ಇದೇ ಆಗಿರಬೇಕು ಎಂಬ ವಿವರವನ್ನು ಜ್ಯೋತಿಷ ಸೂಕ್ತ ಮಾಹಿತಿಯನ್ನು ಕೊಡುತ್ತದೆ. ಹವಳ ಧರಿಸಬೇಕಾದ ವ್ಯಕ್ತಿ ವೈಢೂರ್ಯ ಧರಿಸಿದರೆ, ಪರಿಣಾಮಕಾರಿಯಾಗಿ ಇರಲು ಅಡ್ಡಿ ಇರುತ್ತದೆ. ಈ ಹರಳುಗಳು ಅಯಾ ವ್ಯಕ್ತಿಯ ಸಾವಯವ ಅಂಶದ ಕುರಿತು ಬಹು ವಿಧವಾದ ಭಿನ್ನತೆಗಳನ್ನು ಅದರ ಪ್ರಾಕೃತಿಕ ರಚನೆಯ ಮೂಲಕ ಪಡೆದಿರುತ್ತವೆ. ಕೆಲವರು ಹೆಬ್ಬೆಟ್ಟುಗಳ ಹೊರತಾಗಿ ಮತ್ತೆ ಎಂಟೂ ಬೆರಳುಗಳು ಹಾಗೂ ಕುತ್ತಿಗೆಗೆ ಒಂದು ಎಂದು ನವರತ್ನ ಧಾರಣೆ ಮಾಡಿಕೊಳ್ಳುತ್ತಾರೆ. ಆದರೆ ಇದು ಅಪಾಯಕಾರಿಯಾದ ವಿಧಾನ ಎಂದು ಜ್ಯೋತಿಷ ವಿಜ್ಞಾನವು ಸಾಕಷ್ಟು ವಿವರಗಳನ್ನು ಮಂಡಿಸುತ್ತದೆ.

ಸನ್ಯಾಸಕ್ಕೆ ತನ್ನದೇ ಸ್ವರೂಪದ ನೆಲೆಯಲ್ಲಿ ಸಾಧ್ಯ ಆಗುವ ಹಲವು ಅನುಷ್ಠಾನಗಳನ್ನು ರಾಜ ಪಟ್ಟ ಸಮಾನ ಮಂಡಲಾಧೀಶ್ವರ ಸನ್ಯಾಸಿಗಳು ಮಾಡಿಕೊಳ್ಳುವ (ವೇದ, ವಿದ್ವತ್ತು, ಮೀಮಾಂಸೆ, ಶ್ರುತಿ, ತರ್ಕ, ಸ್ಮೃತಿ ಹಾಗೂ ತತ್ವ ಶಾಸ್ತ್ರ ಇತ್ಯಾದಿಗಳಲ್ಲಿ ಸಂಪೂರ್ಣವಾಗಿ ಹಿಡಿತ ಹೊಂದಿ ಸಾಧಕ ಶಕ್ತಿ ಹೊಂದಿದ್ದಲ್ಲಿ) ಸಮತೋಲನ ಹೊಂದಿರುವುದರಿಂದ ನವರತ್ನ ಧಾರಣೆಗೆ ಅವಕಾಶ ಕಲ್ಪಿಸಿಕೊಳ್ಳಬಹುದಾಗಿದೆ. ಬ್ರಹ್ಮಚರ್ಯದ ಮೂಲಕವಾದ ಎಲ್ಲದರ ನಿರಾಕರಣೆ, ಧ್ಯಾನ ಹಾಗೂ ಅನುಷ್ಠಾನಕ್ಕೆ ಬೇಕಾದ ಏಕಾಗ್ರತೆಯನ್ನು ಸನ್ಯಾಸ ಮುಖೇ, ಪೀಠಾಧಿಪತಿಗಳಿಗೆ ಧಾರಣಾ ಶಕ್ತಿಯನ್ನು ಪಂಚಭೂತಗಳು ಸಂಪ್ರಾಪ್ತ ಮಾಡುತ್ತವೆ ಎಂಬುದನ್ನು ಜ್ಯೋತಿಷ ವಿಜ್ಞಾನ ದಾಖಲಿಸುತ್ತದೆ. ಹೊರತೂ ಎಲ್ಲ ಗೃಹಸ್ಥಾಶ್ರಮ ವ್ಯಕ್ತಿಗಳು ನವರತ್ನ ಧಾರಣ ಮಾಡಿದರೆ, ಅವಶ್ಯಕ ಪರಿಣಾಮವು ವ್ಯತಿರಿಕ್ತವಾದ ಫಲ ನೀಡುತ್ತವೆ ಎಂಬುದು ನಂಬಿಕೆಯಾಗಿದೆ.

ಕೊಹಿನೂರು ವಜ್ರದ ಸುತ್ತ ಮುತ್ತಲ ಕತೆಗಳು ಅನೇಕ ರಾಜ, ಮಹಾ ರಾಜ ಆಳ್ವಿಕೆಗಳನ್ನೇ ಕೊನೆಗೊಳಿಸಿದ, ಪ್ರಕ್ಷುಬ್ಧತೆಗಳನ್ನು ಎದುರಿಸುವಂತೆ ಕಾಲಕೊಂಡಿ ಕೂಡಿಸಿಕೊಳ್ಳುವ ಉಪದ್ವ್ಯಾಪಗಳನ್ನು ವಿವರವಾಗಿ ತಿಳಿಸುತ್ತವೆ. ಇದು ರತ್ನಗಳು, ಅದೃಷ್ಟದ ಹರಳುಗಳ ಬಗ್ಗೆ ತಿಳಿದವರ ಕಟ್ಟು ಕತೆಗಳಾಗಿರದೆ, ಪ್ರತ್ಯಕ್ಷ ಕಂಡು ದಾಖಲೆಯಾಗಿ ಅಡಕಗೊಂಡ ಇತಿಹಾಸದ ಪುಟಗಳ ಮೂಲಕವಾಗಿ ಗಮನಿಸಬಹುದಾಗಿದೆ. ನಂಬಿಕೆಗಳು ಮೌಢ್ಯವಾಗುವ, ಇತಿಹಾಸಗಳು ಒಮ್ಮೆಗೇ ‘ಹಾಂ! ಹೌದೇ?’ ಎಂದು ಉದ್ಗರಿಸುವಂತೆ ಮಾಡುವ ವಿಸ್ಮಯಗಳು ನೂರಾರು.

ಅವಶ್ಯಕ ಲೋಹಗಳು

ಮಾಣಿಕ್ಯ, ವಜ್ರ, ಕನಕ ಪುಷ್ಯರಾಗ, ಪಚ್ಚೆ ಕಲ್ಲುಗಳನ್ನು ಬಂಗಾರದಲ್ಲಿ ಧಾರಣ ಮಾಡಿಕೊಳ್ಳಬೇಕು. ಮುತ್ತಿಗೆ ಬೆಳ್ಳಿಯೇ ಆಗಬೇಕು. ಹವಳಕ್ಕೆ ತಾಮ್ರದ ಲೋಹ ಆಗಬೇಕು. ನೀಲ, ವೈಢೂರ್ಯ, ಗೋಮೇಧಕಗಳಿಗೆ ಪಂಚ ಲೋಹ ಇರಬೇಕು. ನೀಲಕ್ಕೆ ಕಬ್ಬಿಣದ ತುಸು ಅಂಶ ಸೇರಿದ ಪಂಚ ಲೋಹ ತೀರಾ ಅಗತ್ಯ. ಕಬ್ಬಿಣದ ವಿಚಾರ ಕ್ಲಿಷ್ಟ ಯಾಕೆಂದರೆ ಕಬ್ಬಿಣದ ಲೋಹ ಸಾಮಾನ್ಯವಾದ ಉಷ್ಣತೆಯಲ್ಲಿ ಸರಳವಾಗಿ ಕರಗದು. ಹೀಗಾಗಿ ಪಂಚ ಲೋಹದಲ್ಲಿ ಕಬ್ಬಿಣದ ಅಂಶ ನೀಲದ ಹರಳಿಗೆ ಅನಿವಾರ್ಯವಾಗಿ ಬೇಕೇಬೇಕು. ಜತೆಗೆ ಇದು ಶನೈಶ್ಚರ ಸಂಕೇತವಾಗಿ ಅದರದೇ ಆದ ಸೂಕ್ತ ಪರಿಕ್ರಮದಲ್ಲಿ ಧಾರಣೆಯ ವೇಳೆ, ಧಾರಣೆಯ ನಂತರದ ಅವಧಿಯಲ್ಲಿ ಸೂಕ್ತ ನಿಯಮಗಳು ಅನಿವಾರ್ಯ ಎಂಬುದಾಗಿ ಜ್ಯೋತಿಷದ ವಿಚಾರಗಳು ಪ್ರತಿಪಾದನೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.