ವಿಶ್ವಕ್ಕೆ ಸಂಬಂಧಿಸಿದಂತೆ ಇದರ ಶಕ್ತಿಯ ಮೂಲ ಯಾವುದು ಎಂಬುದನ್ನು ಸೂಕ್ತವಾಗಿ ತಿಳಿಯಲು ಮಾನವನ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ. ಇದೇ ಅಂತಿಮ ಸತ್ಯ ಎಂದು ನಿರ್ದಿಷ್ಟವಾಗಿ ಹೇಳಲು ಆಧುನಿಕ ವಿಜ್ಞಾನವು ಪರದಾಡುತ್ತಿದೆ. ಇದೇ ಅಂತಿಮವಾದ ಸತ್ಯ ಎಂದು ಹೇಳಲಾರದು ವಿಜ್ಞಾನ. ಇಂದಿನ ವಿಜ್ಞಾನ ಮನಗಂಡ ಅನೇಕ ಅಂತಿಮ ಸತ್ಯದಲ್ಲಿ ಶೇ 90 ಭಾಗಗಳಾದರೂ ಭಾರತೀಯ ಪರಂಪರೆಯಲ್ಲಿ ನಂಬಿಕೊಂಡು ಬಂದ ವಿಚಾರಗಳಿಗೆ ತಾಳೆಯಾಗುತ್ತಿದ್ದವು ಎಂಬುದನ್ನು ನಾವೆಲ್ಲ ಗಮನಿಸುತ್ತಲೇ ಇದ್ದೇವೆ.

ಭಾರತೀಯರ ನಂಬಿಕೆಗಳನ್ನು ಕಂದಾಚಾರ, ಕುರುಡು ನಂಬಿಗೆ ಎಂದು ಆಧುನಿಕರು ಸಾರಾ ಸಗಟಾಗಿ ತಳ್ಳಿ ಹಾಕುತ್ತಾರೆ. ತಾಳ್ಮೆಯಿಂದ ಯೋಚಿಸುವವರ ಗುಂಪೊಂದು, ತೀರಾ ಅವಸರದ ತೀರ್ಮಾನಕ್ಕೆ ತಲುಪುವವರದ್ದೇ ಒಂದು ಗುಂಪು. ಈ ಭಿನ್ನ ಯೋಚನೆಗಳ ಎರಡೂ ಗುಂಪುಗಳನ್ನು ಬಿಡದೆಯೇ ಸದಾ ಆಲಿಸುತ್ತಲೇ ಇರುವ ಇನ್ನೂ ಒಂದು ಗುಂಪು ಇದೆ. ಹೀಗೆ ಮೂರು ವರ್ಗಗಳು ತಮಗೆ ಅನ್ನಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
.ಜ್ಯೋತಿಷ, ವಿಜ್ಞಾನದ ಪ್ರಕಾರ ಮಕರ ಸಂಕ್ರಮಣ ಎಂದರೇನು? ಇಲ್ಲಿದೆ ಮಾಹಿತಿ .ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಗವಾನ್ ಶನಿಗೆ ಈ ರಾಶಿಗಳೆಂದರೆ ಬಹಳ ಪ್ರಿಯವಂತೆ...
ಭಾರತೀಯರದ್ದು ಮೂರ್ತಿ ಪೂಜೆ

ಭಾರತೀಯರ ನಂಬಿಕೆ ಸಂಕಲ್ಪಿತ ಕಾರ್ಯಕ್ಕಾಗಿ, ಕಾರ್ಯ ಸಿದ್ಧಿಗಾಗಿ ಆಯಾ ಮೂರ್ತಿಗಳಿಗೆ ಪೂಜೆ ಮಾಡುತ್ತಾರೆ. ಸೂರ್ಯನಿಗಾಗಿ ಸೂರ್ಯ ಶಾಂತಿ, ಚಂದ್ರಗ್ರಹ ಶಾಂತಿಗಾಗಿ ಗಣಪತಿಯನ್ನೋ, ಮಹಾ ವಿಷ್ಣುವನ್ನೋ, ಶಿವನನ್ನೋ, ಇಲ್ಲಾ ಸಾಕ್ಷಾತ್ ಪಾರವತಿಯನ್ನೋ ಆರಾಧಿಸುವುದು. ಕ್ಷೀಣ ಚಂದ್ರ ದೋಷವನ್ನು ನಿವಾರಿಸಲು, ಶನಿ ಕಾಟದ ಸಂದರ್ಭಗಳಲ್ಲಿ ಇತ್ಯಾದಿ ಆಯಾ ಸಂದರ್ಭದ ದೋಷಕ್ಕೆ ಪೂರಕವಾಗಿ ಇದೇ ರೀತಿಯ ಶಕ್ತಿಗಾಗಿಯೇ, ಖಚಿತ ರೀತಿಯಲ್ಲಿ ಮೊರೆ ಹೋಗುವುದು ಎಂಬುದನ್ನು ಶಾಸ್ತ್ರ ನಿರ್ದಿಷ್ಟಪಡಿಸಿದೆ.

ಇದೇ ಪ್ರಕಾರವಾಗಿ ಕುಜ, ಬುಧ, ಗುರು, ಶುಕ್ರ, ಶನಿ, ರಾಹು ಹಾಗೂ ಕೇತು ಗ್ರಹಗಳಿಗೇ ನಿರ್ದೇಶಿತ ಮಾದರಿಯಲ್ಲಿ ಆರಾಧನೆ ಹಾಗೂ ಪ್ರಾರ್ಥನೆ ಪೂರೈಸುವುದನ್ನು ನಮ್ಮ ಪರಂಪರೆಯಲ್ಲಿ ಗಮನಿಸಬಹುದು.

ಮೂರ್ತಿ ಪೂಜೆಯ ಸಮಯದಲ್ಲಿ ಪ್ರಕೃತಿ ಪೂಜೆಯನ್ನು ಮಂತ್ರ, ತಂತ್ರಗಳ ಮುಖೇನ ನಡೆಸುವುದು ನಮ್ಮ ಸಂಪ್ರದಾಯ. ಹೀಗಾಗಿ ಹೂವು, ಹಣ್ಣು, ಎಲೆ, ಹುಲ್ಲು ಮತ್ತು ಧಾನ್ಯ, ಭಾರತೀಯ ಪರಂಪರೆಯಲ್ಲಿ ಮಾತೃ ಸಮಾನವಾದ ಭಕ್ತಿ ಭಾವವನ್ನು ನಾವು ಹಂಚಿಕೊಂಡ ಗೋವಿಗೆ ವಿಶೇಷ ಸ್ಥನಮಾನವಿದೆ. ಹಸುವಿನ ಮೂಲಕವೇ ಹಾಲು, ತುಪ್ಪ, ಮೊಸರು, ಬೆಣ್ಣೆ ಉಪಯೋಗಿಸಿ ದೇವರ ಆರಾಧನೆ ಮಾಡುತ್ತೇವೆ.

ಪ್ರಕೃತಿ ಪೂಜೆಯೇ ವಿಶೇಷವಾದುದು.ಅಗ್ನಿ, ನೀರು, ಮೃತ್ತಿಕೆ(ಮಣ್ಣು) ಹಾಗೆಯೇ ಆಕಾಶ ಹಾಗೂ ನಿರಾಕರ, ನಿರಾನಂದ, ನಿರ್ಗುಣಗಳ ಶಕ್ತಿ ಪೂಜೆಯೇ ಪ್ರಧಾನ. ಆದಾಗ್ಯೂ ಮೂರ್ತಿ ಪೂಜೆಯು ಚಾಲ್ತಿಗೊಂಡದ್ದು ಏಕಾಗ್ರತೆಯೊಡನೆಯೇ ಬೆಸೆದ ಸಾಧನೆಯಿಂದ, ಪೂರ್ತಿ ಶರಣಾಗತಿಯಿಂದ. ನಿಚ್ಚಳ ಪಾರದರ್ಶಕ ಮನದಾಳದಿಂದ.

ಪ್ರಾರ್ಥನೆ ಕೈ ಕೊಡುವುದಿಲ್ಲ

ನಮ್ಮ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಯಾವಾಗಲೂ ತನ್ನ ಹೆಚ್ಚಿನ ನಂಬಿಕೆ ಮತ್ತು ಪ್ರಾರ್ಥನೆಯ ಸಿದ್ಧಿಗಾಗಿನ ದಾರಿ ಎಂಬುದನ್ನು ಆಗಾಗ ಹೇಳುತ್ತಿರುತ್ತಾರೆ. ಪ್ರಾರ್ಥನೆ ಕೈ ಹಿಡಿಯೊದು ಎಂಬುದನ್ನು ನಂಬುತ್ತಾರೆ. ನಮ್ಮ ಪೂಜೆ ಹಾಗೂ ಹೋಮಗಳು ಧನಾತ್ಮಕ ಶಕ್ತಿಯನ್ನೇ ಹೊಂದಿರುತ್ತವೆ. ನನಗೆ ಅನ್ಯ ದಾರಿ ಇರದೇ ನಿನಗೆ ಶರಣಾಗಿದ್ದೇನೆ, ನನ್ನ ರಕ್ಷಣೆ ನಿನ್ನದು ಎಂದು ಮಹೇಶ್ವರ ಅಥವಾ ಮಹೇಶ್ವರಿಯನ್ನು ಪ್ರಾರ್ಥಿಸುತ್ತಾರೆ.

ದೇವತೆಗಳಿಗೆ ಹವಿಸ್ಸನ್ನು ತಲುಪಿಸುವ ಹವ್ಯ ವಾಹನನನ್ನು, ಅಂದರೆ ಅಗ್ನಿಯನ್ನ ಪ್ರಾರ್ಥಿಸುತ್ತಾರೆ. ಶ್ರದ್ಧೆ, ಮೇಧಾ ಶಕ್ತಿ, ಯಶಸ್ಸು, ಸೂಕ್ತ ಪ್ರಜ್ಞೆ, ಸಿದ್ಧಿ, ಬುದ್ಧಿ, ಯಶ ಹಾಗೂ ಸಂಪತ್ತನ್ನು ಕರುಣಿಸು ಎಂದು ಕೇಳುತ್ತಾರೆ. ವಿಶೇಷ ಬಲ ನೀಡೆಂದು ಬೇಡುತ್ತಾರೆ. ಆಯಸ್ಸು, ತೇಜಸ್ಸು ಹಾಗೂ ಆರೋಗ್ಯವನ್ನು ಒದಗಿಸು ಎಂದು ಮೊರೆ ಇಡುತ್ತಾರೆ.

ಈ ಚ್ಯುತಿ ಇರದ, ಅನಂತ ವ್ಯಾಪ್ತಿಯ ಬ್ರಹ್ಮಾಂಡವು ಗ್ರಹಿಕೆಗೆ ಸಿಗದ ವಿಚಾರವಾಗಿದ್ದು, ಪ್ರತಿ ಬಾರಿ ಇದು ಇಷ್ಟೇ ಎಂಬ ನಿರ್ಣಯಕ್ಕೆ ನಿಧಾನ ಬರುತ್ತಿರುವಾಗಲೇ ಇನ್ನೂ ಹೆಚ್ಚೇ ರೀತಿ, ಇದು ತನ್ನದಾದ ವಿಸ್ತಾರವನ್ನು ವಿಸ್ತರಿಸುತ್ತ ಹೋಗುತ್ತದೆ ಎಂದು ನಮ್ಮ ಪರಂಪರೆಯ ಶಾಂತಿ ಮಂತ್ರವಾದ 'ಪುರುಷ ಸೂಕ್ತ' ಕಾವ್ಯಾತ್ಮಕವಾಗಿ ಹೇಳುತ್ತದೆ.

ಸಮಸ್ತ ಜಗದಾಧಾರ ಮೂರ್ತಿ ಪರಬ್ರಹ್ಮ

ಒಂದು ಶಿಲೆಯ ಒಳಗಡೆ ದೇವರ ಮೂರ್ತಿ ಇದ್ದಿರುವ ಹಾಗೆ, ಈ ಜಗತ್ತು ಅಂತರ್ಜಲದಂತೆ ಅಡಕಗೊಂಡಿದೆ ಎಂದು ನಮ್ಮ ಚಿಂತನ ಪೂರ್ಣವಾದ ಮೀಮಾಂಸೆ, ವೇದ, ವೇದಾಂತಗಳು ವಿಸ್ತರಿಸಿ ಹೇಳುತ್ತವೆ. ಇದೇ ಚಿಂತನದ ವಿಸ್ತಾರ, ಭೂಮಿಯನ್ನು ಸಂವೇದಿಸುವ ಸೂರ್ಯ, ಚಂದ್ರ, ಗ್ರಹ ಹಾಗೂ ತಾರೆ ಮುಂತಾದವನ್ನು ನಮ್ಮ ಚೈತನ್ಯದ ಅಸ್ತಿಭಾರ ಎನ್ನುವುದಾಗಿ ನಂಬುತ್ತವೆ. ಈ ರೀತಿಯ ನಂಬಿಕೆಯ ಕಾರಣದಿಂದಲೇ ಎಂದೂ ಕಾದಿದ್ದರೂ ಅವನನ್ನು ಕಂಡೆ ಎಂಬ ಧನ್ಯತೆಯಿಂದಲೇ ಪ್ರಾರ್ಥಿಸುತ್ತಾರೆ.

ಜನ್ಮ ಕುಂಡಲಿಯಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ನಿವಾರಿಸಿಕೊಳ್ಳಲು ಧ್ಯಾನ ಹಾಗೂ ತಪಸ್ಸಿಗೆ ಮಗ್ನರಾಗುತ್ತಾರೆ. ಬ್ರಹ್ಮಾಂಡದ ಭಾರ ಹೊತ್ತ ಶಕ್ತಿಯನ್ನೂ ಹೊತ್ತ ಶಕ್ತಿಗೆ ಸದಾ ಈ ಭಾರವನ್ನು ಹೊರುವ ಶಕ್ತಿಯನ್ನು ದಯಪಾಲಿಸಿದ ಕರ್ತಾರನನ್ನು ಗೌರವಿಸುತ್ತಾರೆ. ನಮ್ಮ ಅಪೌರುಷೇಯ ಸಾಹಿತ್ಯ ಶ್ರುತಿ ಹಾಗೂ ಕೈಂಕರ್ಯಗಳು ಎಂದೂ ಬೆಲೆಯನ್ನು ಕಟ್ಟಲು ಸಾಧ್ಯವಿರದ ಅಪಾರ ಮೌಲ್ಯದ ಉಗ್ರಾಣ ಕೋಶಿಕೆಗಳಾಗಿವೆ. ಗ್ರಹಗಳ ಪೀಡೆ, ಗ್ರಹಚಾರಗಳನ್ನು ನಿವಾರಿಸುವ ಸಂಜೀವಿನಿಯಾಗಿವೆ ಎಂಬುದು ನಂಬಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.