ಭಾನುವಾರ, 14 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವ್ಯಾಪಾರ ವ್ಯವಹಾರಗಳು ಅಧಿಕ ವರಮಾನ ತರಲಿವೆ
Published 11 ಮೇ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅದೃಷ್ಟ ದೇವತೆ ಕೈ ಹಿಡಿದಿದ್ದಾಳೆ. ನಿಮ್ಮ ವ್ಯಾಪಾರ ವ್ಯವಹಾರಗಳು ಅಧಿಕ ವರಮಾನ ತರಲಿವೆ. ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ಸಾಮರ್ಥ್ಯ ತೋರಿಬರಲಿದೆ.
ವೃಷಭ
ಮಗನ ಮುಂದಿನ ಭವಿಷ್ಯಕ್ಕಾಗಿ ಸೈಟು ಕೊಳ್ಳುವ ಬಗ್ಗೆ ಮನೆಯವರ ಜತೆ ಮಾತುಕತೆ ಅಗತ್ಯ ಎನಿಸುವುದು. ಸಾರ್ವಜನಿಕ ಸಂಘ-ಸಂಸ್ಥೆಗಳ ಸಂಬಂಧಿಸಿದ ವ್ಯವಹಾರ ಬುದ್ಧಿವಂತಿಕೆಯಿಂದ ಪ್ರಾಪ್ತಿಯಾಗಲಿದೆ.
ಮಿಥುನ
ರಾಜಕೀಯ ವಲಯದಲ್ಲಿ ಪ್ರಮುಖ ಸ್ಥಾನ ಪಡೆಯಲು ತಯಾರಿ ನಡೆಸಬೇಕಾಗುವುದು. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಾಣಲಿದೆ. ವ್ಯವಹಾರದಲ್ಲಿ ಸೋದರನನ್ನು ಸೇರಿಸಿಕೊಳ್ಳುವ ಬಗ್ಗೆ ಮೊದಲೇ ಯೋಚಿಸಿ.
ಕರ್ಕಾಟಕ
ಯಂತ್ರಗಳ ತಯಾರಿಕೆ ಮಾಡುವ ಕಂಪನಿಯ ಅಧಿಕಾರಿಗಳು ನೂತನ ಘಟಕಗಳನ್ನು ಆರಂಭಿಸುವ ಲಕ್ಷಣಗಳಿವೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅಧ್ಯಯನಕ್ಕೆ ಆಸ್ಪದ ಸಿಗುತ್ತದೆ.
ಸಿಂಹ
ಕಾರ್ಯದೊತ್ತಡ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳ. ಹಿರಿಯ ಅಧಿಕಾರಿಗಳೊಬ್ಬರ ಭೇಟಿಯಿಂದ ಕಾರ್ಯಗಳು ಸರಾಗವಾಗಿ ನಡೆಯುವುದು. ಶ್ರೀಕ್ಷೇತ್ರಕ್ಕೆ ಹೋಗುವ ಯೋಜನೆ ಕಾರ್ಯರೂಪಕ್ಕೆ ತನ್ನಿರಿ.
ಕನ್ಯಾ
ವೃತ್ತಿಯಲ್ಲಿನ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಸಿಕ್ಕ ಗೆಲುವಿನಿಂದ ಹೆಚ್ಚಿನ ತೃಪ್ತಿ ಉಂಟಾಗಲಿದೆ. ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ ಬಹಳ ಸುಲಭವಾಗಿ ಅಧ್ಯಾಪಕ ವೃತ್ತಿ ದೊರೆಯುವ ಸಂಭವವಿದೆ.
ತುಲಾ
ಎಲ್ಲಾ ಕೆಲಸಗಳೂ ಉತ್ತಮ ಉದ್ದೇಶವನ್ನೇ ಹೊಂದಿರುವುದು. ಉದ್ಯಮಗಳಲ್ಲಿ ಹೆಚ್ಚಿನ ಶ್ರಮ ಅಗತ್ಯವೆನಿಸಲಿದೆ. ತೋಟದ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಮುಂದುವರಿಯುವುದು.
ವೃಶ್ಚಿಕ
ಈ ದಿನದ ಆರಂಭದಿಂದಲೂ ಯೋಚನೆಯಂತೆಯೇ ಕೆಲಸ ಕಾರ್ಯಗಳು ನಡೆಯುವುದು. ಸ್ವಯಂ ಸಾಮರ್ಥ್ಯದ ಬಗ್ಗೆ ಹೆಚ್ಚಿನ ವಿಶ್ವಾಸವಿರಲಿ. ಮಾನಸಿಕ ವ್ಯಥೆಗಳು ನಿವಾರಣೆಯಾಗುತ್ತವೆ.
ಧನು
ಸತತ ಪ್ರಯತ್ನದಿಂದ ಪರಸ್ಥಳದಲ್ಲಿ ವೃತ್ತಿಪರವಾಗಿ ಹೆಸರು, ಕೀರ್ತಿ ಸಂಪಾದಿಸಬಹುದು. ಸ್ವಯಂ ತೀರ್ಮಾನದಿಂದ ತೆಗೆದುಕೊಳ್ಳುವ ಔಷಧದಿಂದಲೇ ಆರೋಗ್ಯದಲ್ಲಿ ಏರುಪೇರುಗಳಾಗುವ ಸಾಧ್ಯತೆ ಇದೆ.
ಮಕರ
ರಾಸಾಯನಿಕ ವಸ್ತುಗಳನ್ನು ಬಳಸುವವರತ್ತ ಗಮನವಿರಲಿ. ಆತ್ಮೀಯರೊಂದಿಗಿನ ದೀರ್ಘಕಾಲದ ವಿವಾದಗಳು ಸಂಬಂಧವನ್ನು ಹಾಳುಮಾಡಬಹುದು. ದಲ್ಲಾಳಿಗಳಾಗುವ ಯೋಚನೆ ಸರಿಯಲ್ಲ.
ಕುಂಭ
ಸಕಾಲದಲ್ಲಿ ಕೆಲಸವನ್ನು ಮುಗಿಸುವತ್ತ ಮುತುವರ್ಜಿ ವಹಿಸಿ. ಅರ್ಧಕ್ಕೆ ನಿಂತಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಶ್ರಮಿಸುವುದರಿಂದ ಒತ್ತಡ ಕಡಿಮೆಯಾಗುವುದು. ದೂರ ಪ್ರಯಾಣ ಮುಂದೂಡಿ.
ಮೀನ
ಸಂಗಾತಿಯೊಂದಿಗಿನ ಸಂಬಂಧವನ್ನು ಗಟ್ಟಿಮಾಡಿಕೊಳ್ಳಲು ಬಿಡುವಿಲ್ಲದ ಸಮಯದಲ್ಲಿ ಸಮಯ ನೀಡುವ ಪ್ರಯತ್ನ ಮಾಡಿ. ಬಂಧುಗಳಿಂದ ಉಡುಗೊರೆಯ ರೂಪದಲ್ಲಿ ದ್ರವ್ಯಲಾಭ.
ADVERTISEMENT
ADVERTISEMENT