ಭಾನುವಾರ, 14 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ರಕ್ತದೊತ್ತಡ ವ್ಯತ್ಯಾಸವಾಗುವ ಸಾಧ್ಯತೆ ಇರುವುದರಿಂದ ಜಾಗ್ರತರಾಗಿರಿ
Published 31 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉದ್ಯೋಗಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕೆಲಸಗಳನ್ನು ಪೂರ್ತಿಗೊಳಿಸುವ ಪ್ರಯತ್ನ ಮಾಡಿ. ಕೃಷಿಗೆ ಸಂಬಂಧಿಸಿದ ಹಣಕಾಸಿನ ಯೋಜನೆಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ವೃಷಭ
ವ್ಯಾಪಾರ ಆರಂಭಿಸುವವರಿಗೆ ಮಧ್ಯವರ್ತಿಗಳಿಂದ ಸಹಾಯ ಸಿಗುವುದು. ಸಾಲಬಾಧೆಯಂತಹ ಪರಿಸ್ಥಿತಿಯಲ್ಲಿ ಸಹೋದರರು ಸಹಕರಿಸುವರು. ಕಾರ್ಮಿಕರ ಬೇಡಿಕೆಗಳು ಇತ್ಯರ್ಥವಾಗಲಿವೆ.
ಮಿಥುನ
ಆಪ್ತರಿಂದ ಬರುವ ಸಲಹೆ ಸೂಚನೆಗಳಿಗೆ ಗಮನ ನೀಡಿ ಸ್ವ ಪ್ರಯತ್ನದಿಂದ ಮುನ್ನುಗ್ಗಿ. ಕೆಲಸಗಳನ್ನು ಮುಂದುಹಾಕದೆ ಪೂರ್ಣಗೊಳಿಸಲು ಪ್ರಯತ್ನಿಸಿ. ಭವಿಷ್ಯದ ಕುರಿತು ಚರ್ಚೆ ನಡೆಸಿ.
ಕರ್ಕಾಟಕ
ಮಕ್ಕಳ ವಿಷಯದಲ್ಲಿ ಕಾಳಜಿ ತೋರಿ ವ್ಯವಸ್ಥಿತ ತೀರ್ಮಾನವನ್ನು ತೆಗೆದುಕೊಂಡಲ್ಲಿ ಭವಿಷ್ಯ ಉತ್ತಮ. ಪ್ರೀತಿ ಮತ್ತು ಆನಂದ ತುಂಬಿದ ಹರ್ಷದಾಯಕ ದಿನ ಇದಾಗಿದೆ.
ಸಿಂಹ
ಹಲವು ದಿನಗಳಿಂದ ಮನೆಯವರಲ್ಲಿ ಕಾಣಿಸಿಕೊಂಡಿದ್ದ ಇರಿಸು ಮುರಿಸುಗಳು ಕ್ರಮೇಣ ಸರಿಹೋಗಲಿವೆ. ಯೋಗ್ಯ ವಯಸ್ಕರರಿಗೆ ವಿವಾಹ ಭಾಗ್ಯ ಒದಗಿ ಬರುವುದು. ಪರೋಪಕಾರ ಮನೋಭಾವದಿಂದ ಯಶ ಲಭ್ಯ.
ಕನ್ಯಾ
ಆಲಸ್ಯಕರ ದೇಹ ಸ್ಥಿತಿಯಿಂದ ಕೆಲಸ ಕಾರ್ಯ ವಿಳಂಬಗತಿಯಲ್ಲಿ ಸಾಗಲಿದೆ. ವಿದ್ಯಾರ್ಥಿಗಳಿಗೆ ಗಣಿತದ ವಿಚಾರದಲ್ಲಿ ಕಠಿಣ ಸಾಧನೆ ಅಗತ್ಯ. ಸಗಟು ಧಾನ್ಯ ವ್ಯಾಪಾರಿಗಳು ಲಾಭ ಪಡೆಯುವಿರಿ.
ತುಲಾ
ಇನ್ನೊಬ್ಬರ ಕಷ್ಟಗಳಿಗೆ ನೆರವಾಗಿ ಸಮಯ ವ್ಯರ್ಥವಾಗಲಿದೆ. ರಕ್ತದೊತ್ತಡ ವ್ಯತ್ಯಾಸವಾಗುವ ಸಾಧ್ಯತೆ ಇರುವುದರಿಂದ ಜಾಗ್ರತರಾಗಿರಿ. ನಿಕಟ ವ್ಯಕ್ತಿಗಳೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ.
ವೃಶ್ಚಿಕ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ಮಡದಿಯ ಭಾವನೆಗಳಿಗೆ ಬೆಲೆ ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಧನು
ಸಾಧು–ಸಂತರ ದರ್ಶನ ಭಾಗ್ಯದಿಂದ ಎಲ್ಲಾ ಕೆಲಸಗಳು ಗುರಿ ತಲುಪಲಿವೆ. ಮಾತೃ ಸಹಕಾರ ನಿಮಗೆ ದೊರೆಯಲಿದೆ. ಮಗಳಿಂದ ಅತ್ಯಂತ ಸಂತೋಷದ ಸುದ್ದಿ ಕೇಳಲಿರುವಿರಿ.
ಮಕರ
ಷರತ್ತುಗಳನ್ನು ಹೊಂದಿದ ವ್ಯವಹಾರಕ್ಕೆ ಕೈಹಾಕಬೇಡಿ. ವೃತ್ತಿಪರವಾಗಿ ಬಹಳ ದಿನಗಳ ನಿರೀಕ್ಷಿತ ಕಾರ್ಯಕ್ಕೆ ಸಲಹೆ ಸಿಗಲಿದೆ. ಅಕ್ಕಪಕ್ಕದವರೊಂದಿಗೆ ಸಿಡುಕುತನ ಬೇಡ.
ಕುಂಭ
ವೃತ್ತಿಯ ಏಳಿಗೆ ಸಂಕಲ್ಪದಿಂದ ಈ ದಿನವನ್ನು ಪ್ರಾರಂಭಿಸಿ, ದೇವತಾನುಗ್ರಹದಿಂದ ಅಭಿವೃದ್ಧಿಯಾಗುವುದು. ಬಂಧುಗಳಿಂದ ಯಾವುದೇ ಸಹಾಯ ನಿರೀಕ್ಷಿಸಬೇಡಿ.
ಮೀನ
ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಸಿಗುವ ಸುಸಂದರ್ಭವನ್ನು ಬಳಸಿಕೊಳ್ಳಿ. ರೇಷ್ಮೆ ವ್ಯಾಪಾರಿಗಳಿಗೆ ಸಗಟು ಮಾರಾಟದಿಂದ ಅಧಿಕ ಲಾಭ ಉಂಟಾಗಲಿದೆ. ಮನೆಯಲ್ಲಿ ಹಿತಕರ ವಾತಾವರಣ ಇರುತ್ತದೆ.
ADVERTISEMENT
ADVERTISEMENT