ದಿನ ಭವಿಷ್ಯ: ಈ ರಾಶಿಯವರಿಗೆ ಗೌರವಯುತ ಸ್ಥಾನಮಾನಗಳು ಸಿಗಲಿವೆ
Published 19 ಮೇ 2026, 0:15 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲವು ವಿಚಾರಗಳನ್ನು ತೀರ್ಮಾನಿಸುವ ಸಂದರ್ಭದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಪದವಿ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆತು ಆನಂದವಿರುವುದು. ಹಣ್ಣು ಹೂ ವ್ಯಾಪಾರಸ್ಥರಿಗೆ ಲಾಭ ಇರುವುದು.
ವೃಷಭ
ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ನೂತನ ವಾಹನ ಖರೀದಿಸಬೇಕೆಂಬ ಕನಸು ನನಸಾಗುವುದು. ಮನರಂಜನೆಗಿಂತ ಕೆಲಸದ ಬಗ್ಗೆ ಗಮನವಿರಲಿ.
ಮಿಥುನ
ಕೌಟುಂಬಿಕ ವಿಷಯಗಳತ್ತ, ಅದರಲ್ಲೂ ಮಡದಿಯ ಆರೋಗ್ಯದ ವಿಚಾರದಲ್ಲಿ ಗಮನಹರಿಸಬೇಕಾಗುವುದು. ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದಲ್ಲಿ ಹೊಸ ಬದಲಾವಣೆಯ ಸೂಚನೆಯು ಸಿಗಲಿದೆ.
ಕರ್ಕಾಟಕ
ಧಾರ್ಮಿಕ ಮಾರ್ಗದರ್ಶಕರ ಸಹಾಯದಿಂದ ಬದುಕನ್ನು ಅರ್ಥಪೂರ್ಣವಾಗಿಸುವ ಬಗ್ಗೆ ತಿಳಿದುಕೊಳ್ಳುವಿರಿ. ಸಂಬಂಧ ಮತ್ತು ಒಪ್ಪಂದಗಳತ್ತ ಗಮನ ನಿಶ್ಚಿತವಾಗಿ ತೆಗೆದುಕೊಳ್ಳಬೇಕಾಗಲಿದೆ.
ಸಿಂಹ
ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿರುವವರಿಗೆ ಅವಕಾಶಗಳ ಜತೆಗೆ ಸ್ವಂತ ಉದ್ಯಮ ಸ್ಥಾಪಿಸುವ ಚೈತನ್ಯವು ಮತ್ತು ಯೋಚನೆಗಳು ಮೂಡಿ ಬರಲಿವೆ. ವಿದ್ಯಾ ಕ್ಷೇತ್ರದವರಿಗೆ ಹೆಚ್ಚಿನ ಮನ್ನಣೆ, ಗೌರವ ದೊರಕಲಿದೆ.
ಕನ್ಯಾ
ಪರಿಶ್ರಮವಿಲ್ಲದೇ ಕೆಲಸ ದೊರೆತಿದ್ದಕ್ಕೆ ಸಂತಸವಿದ್ದು, ಹೊಸ ಸಂಸ್ಥೆಯಲ್ಲಿನ ಕೆಲಸಗಳು ಸುಲಭ ಮತ್ತು ಸಂತೋಷಮಯ ಎನಿಸುವುದು. ವ್ಯಾಪಾರ ವ್ಯವಹಾರಗಳಲ್ಲಿ ಆರೋಗ್ಯಕರ ಪೈಪೋಟಿ ನಡೆಸಲು ತೀರ್ಮಾನಿಸಿ.
ತುಲಾ
ಆಸ್ತಿಗೆ ಸಂಬಂಧಪಟ್ಟ ನಿರ್ಧಾರಗಳನ್ನು ಮನೆಯವರೊಂದಿಗೆ ಚರ್ಚಿಸಿ ಕೈಗೊಳ್ಳುವುದು ಉತ್ತಮ. ಲೆಕ್ಕಪತ್ರಗಳ ವ್ಯವಹಾರ ನೋಡುವವರಿಗೆ ಸಂದಿಗ್ಧ ಪರಿಸ್ಥಿತಿಗಳು ಎದುರಾಗಲಿವೆ. ಸಾಲ ಮಾಡಬೇಡಿ.
ವೃಶ್ಚಿಕ
ಹಣಕಾಸು ಪರಿಸ್ಥಿತಿ ಉತ್ತಮವಿರುವುದರಿಂದ ಆಸ್ತಿಕೊಳ್ಳುವ ಬಗ್ಗೆ ಹಿರಿಯರೊಂದಿಗೆ ಚರ್ಚಿಸುವಿರಿ. ಧೈರ್ಯಮಾಡಿ ಕಾರ್ಯೋನ್ಮುಖರಾದರೆ ಅಭಿವೃದ್ಧಿ ಹೊಂದುವಿರಿ. ಗೌರವಯುತ ಸ್ಥಾನಮಾನಗಳು ಸಿಗಲಿವೆ.
ಧನು
ಗುರು-ಹಿರಿಯರ ಮಾತುಗಳನ್ನು ಅಲ್ಲಗಳೆಯುವುದು ಅಥವಾ ಅವರಲ್ಲಿ ವಾದ-ವಿವಾದವನ್ನು ಬೆಳೆಸುವುದು ಸರಿಯಲ್ಲ. ಕಬ್ಬಿಣದ ವ್ಯವಹಾರದ ನಿರ್ವಹಣೆಗೆ ಸಾಲ ಮಾಡಬೇಕಾಗುವುದು. ಆರೋಗ್ಯವನ್ನು ನಿರ್ಲಕ್ಷಿಸದಿರಿ.
ಮಕರ
ಮಿತ್ರರೊಂದಿಗಿನ ಕಲಹ ಸಹನೆಯ ಪರೀಕ್ಷೆಯಾಗಿರುತ್ತದೆ. ವೃತ್ತಿಗೆ ಹೊರತಾದ ಕೆಲಸ ಮಾಡುವುದರಲ್ಲಿ ಆಸಕ್ತಿ ಹೆಚ್ಚಲಿದೆ. ಜವಾಬ್ದಾರಿ ಸ್ವೀಕರಿಸುವ ಮೊದಲು ನಿಭಾಯಿಸುವ ಬಗ್ಗೆ ಯೋಚಿಸಿಕೊಳ್ಳುವುದು ಉತ್ತಮ.
ಕುಂಭ
ಯೋಜನೆಯ ಬೆಳವಣಿಗೆಗೆ ಸಂಬಂಧಿಸಿದವರ ಜತೆ ಚರ್ಚೆ ನಡೆಸಿ ಬಾಕಿ ಇದ್ದ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ಗಮನಹರಿಸಿ. ಬಿಡುವಿಲ್ಲದ ಕೆಲಸದಲ್ಲೂ ಮನಸ್ಸಿಗೆ ನೆಮ್ಮದಿ ಇರುವುದು ಆಶ್ಚರ್ಯವೆನಿಸಲಿದೆ.
ಮೀನ
ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳ ಲಕ್ಷಣಗಳು ಗಮನಕ್ಕೆ ಬಂದರೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ. ಧಾರ್ಮಿಕತೆಯ ಫಲವಾಗಿ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರ ಬರಲಿದೆ.