ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಅವಶ್ಯ
Published 19 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತುಂಬಾ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಅಪರಿಚಿತನೊಬ್ಬನ ಭೇಟಿಯಿಂದ ಉತ್ತರ ಸಿಗುತ್ತದೆ. ಪತ್ನಿ ವರ್ಗದವರಿಂದ ಕಾರ್ಯಗಳಿಗೆ ಸಹಾಯ ದೊರೆಯಲಿದೆ.
ವೃಷಭ
ಆರೋಗ್ಯದ ಬಗ್ಗೆ ಆತಂಕಪಡಬೇಕಾದ ಅವಶ್ಯಕತೆ ಇಲ್ಲ. ಜೀವನಶೈಲಿಯಿಂದಾಗಿ ಖರ್ಚುಗಳಾಗಬಹುದು. ಶ್ರೀರಾಮನಾಮ ಭಜನೆಯಿಂದ ಕಾರ್ಯಗಳು ಈಡೇರಲಿವೆ.
ಮಿಥುನ
ಷೇರು ಮಾರುಕಟ್ಟೆ ಹಾಗೂ ಕಮಿಷನ್ ವ್ಯಾಪಾರಕ್ಕೆ ಸಂಬಂಧಿಸಿದಂತ ವೃತ್ತಿಯಲ್ಲಿರುವವರಿಗೆ ನಷ್ಟ ಸಂಭವಿಸಲಿದೆ. ಅಧಿಕಾರಕ್ಕಾಗಿ ಅಡ್ಡದಾರಿ ಅನುಸರಿಸಬೇಡಿ.
ಕರ್ಕಾಟಕ
ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಿಂದ ತಿಳಿದುಕೊಳ್ಳಿ. ಮಾರ್ಗದರ್ಶಕರ ವಾಕ್ಯವನ್ನು ಅನುಸರಿಸಿದರೆ ಉತ್ತಮ ಜೀವನ ಲಭ್ಯ.
ಸಿಂಹ
ಎತ್ತರದ ಸ್ಥಾನ ತಲುಪಬೇಕೆಂಬ ಮಹತ್ವಾಕಾಂಕ್ಷೆಯು ಸಾಕಾರಗೊ ಳ್ಳಬಹುದು. ಸರಿ ತಪ್ಪುಗಳ ತೀರ್ಮಾನಕ್ಕೆ ಬರುವುದು ಕಷ್ಟ . ಮಹಿಳಾ ಉದ್ಯೋಗಿಗಳಿಗೆ ಜವಾಬ್ದಾರಿ ದೊರೆಯಲಿದೆ.
ಕನ್ಯಾ
ಸಾಮಾಜಿಕ ವಲಯದಲ್ಲಿ ಬರುವ ಅವಕಾಶಗಳ ಸದುಪಯೋಗ ಪಡೆದುಕೊಳ್ಳಿ. ಹಣಕಾಸಿನ ವ್ಯವಹಾರಗಳಲ್ಲಿ ಅತಿ ಜಾಗರೂಕರಾಗಿರುವುದು ಅವಶ್ಯ.
ತುಲಾ
ಸ್ವಾತಂತ್ರ್ಯ ಸಿಗುವ ಕಾರಣದಿಂದ ಗುರಿ ಸಾಧನೆ ಇನ್ನೂ ಹತ್ತಿರವಾಗಲಿದೆ. ನಯ -ವಿನಯ ,ಶಿಷ್ಟಾಚಾರಗಳನ್ನು ನಿಮ್ಮ ಕೆಲಸ ಕಾರ್ಯಗಳಲ್ಲಿ ಕಾಪಾಡಿಕೊಳ್ಳಿ. ಕಹಿ ಘಟನೆಗಳು ಪುನಃ ಮರುಕಳಿಸದಂತೆ ಎಚ್ಚರ ವಹಿಸಿ.
ವೃಶ್ಚಿಕ
ಹಣ ಮಾಡುವ ಪ್ರಯತ್ನಕ್ಕಿಂತ ಮಿಗಿಲಾಗಿ ಹೆಸರು ಮಾಡುವ ಬಗ್ಗೆ ಗಮನವಿರಲಿ. ಧಾರ್ಮಿಕ ವೃತ್ತಿಯನ್ನು ನಡೆಸುವ ವ್ಯಕ್ತಿಗಳಿಗೆ ಸಾಧಿಸಿದ ಖುಷಿ ಸಿಗಲಿದೆ. ಅದೃಷ್ಟದ ಬಾಗಿಲು ತೆರೆಯುವುದು.
ಧನು
ನಿರಪರಾಧಿಯಾದರೂ ಶಿಕ್ಷೆಗೆ ಒಳಗಾಗುವ ಲಕ್ಷಣಗಳಿರುವುದರಿಂದ ಜಾಗ್ರತರಾಗಿರಿ. ಉತ್ತಮ ಉದ್ಯೋಗವನ್ನು ಗಳಿಸಿಕೊಳ್ಳಬಹುದು. ಸರ್ಕಾರಿ ಕೆಲಸಗಳು ಸುಲಭವಾಗಿ ಆಗಲಿವೆ.
ಮಕರ
ನಾಲ್ಕಾರು ಜನರ ಅಭಿಪ್ರಾಯವನ್ನು ತೆಗೆದುಕೊಳ್ಳುವುದು ಏಳಿಗೆಗೆ ದಾರಿಯಾಗಲಿದೆ. ಸಣ್ಣ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯ ಹಸ್ತ ದೊರಕಲಿದೆ. ಕಟ್ಟಡ ಕಾರ್ಮಿಕರಿಗೆ ಅವಕಾಶಗಳು ಸಿಗಲಿವೆ.
ಕುಂಭ
ವಿದೇಶಿ ಸಂಸ್ಥೆಗಳೊಡನೆ ಸಹಭಾಗಿತ್ವ ಒಪ್ಪಂದಗಳನ್ನು ಮಾಡಿಕೊಳ್ಳುವುದು ಬೇಡ. ಈಶ್ವರನ ಸೇವೆ ಮಾಡುವುದರಿಂದ ಹೆಚ್ಚಿನ ಕಾರ್ಯ ಸಾಧನೆಗೆ ಸಹಾಯವಾಗುವುದು. ಸಗಟು ವ್ಯಾಪಾರಿಗಳಿಗೆ ಶುಭ ದಿನ
ಮೀನ
ಸಿವಿಲ್ ಎಂಜಿನಿಯರ್‌ಗಳಿಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಸಿಗಲಿದೆ. ವೃತ್ತಿಯಲ್ಲಿ ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ವೇದಿಕೆ ಸಿಗಲಿದೆ. ಹೂವು ಹಣ್ಣುಗಳ ರಫ್ತು ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವಿದೆ.