ದಿನ ಭವಿಷ್ಯ: ಸಂತಾನದ ಅಪೇಕ್ಷಿಗಳಿಗೆ ಶುಭ ಫಲ ಪ್ರಾಪ್ತಿ
Published 20 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜಾಗತಿಕ ಮಟ್ಟದ ಆಗು-ಹೋಗುಗಳ ಅರಿತು ವ್ಯವಹಾರದಲ್ಲಿ ಮುಂದುವರಿಯುವುದು ಉತ್ತಮ. ತಂದೆಯ ಅಥವಾ ಹಿರಿಯರ ಮಾತಿಗೆ ಎದುರಾಡಬೇಡಿ. ಭೂ ವ್ಯವಹಾರಗಳಿಂದ ಲಾಭ ಗಳಿಸಬಹುದು.
ವೃಷಭ
ಇತರರೂ ಸಂತೋಷವಾಗಿರಬೇಕೆಂಬ ನಿಮ್ಮ ಮನೋಭಾವದಿಂದ ಗೌರವವನ್ನು ಪಡೆದುಕೊಳ್ಳುವಿರಿ. ಮೆಕ್ಯಾನಿಕ್ ಕೆಲಸಗಾರರಿಗೆ ಅಧಿಕ ವರಮಾನ ಇರಲಿದೆ.
ಮಿಥುನ
ಇನ್ನೊಬ್ಬರ ಮಾತುಗಳನ್ನು ಆಲಿಸಿಕೊಂಡು ವಿಚಾರಗಳನ್ನು ತೀರ್ಮಾನಿಸುವುದಕ್ಕಿಂತ ಸ್ವತಃ ಪರೀಕ್ಷೆ ನಡೆಸಿ ತೀರ್ಮಾನಕ್ಕೆ ಬನ್ನಿ. ಎಲೆಕ್ಟ್ರಿಕಲ್ ವಸ್ತುಗಳ ವ್ಯಾಪಾರ ಆರಂಭಿಸುವ ಬಗ್ಗೆ ಯೋಚಿಸಬಹುದು.
ಕರ್ಕಾಟಕ
ಕೆಲವರು ನಿಮ್ಮನ್ನು ಅಪಹಾಸ್ಯ ಮಾಡಬಹುದು. ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿರಿ. ವ್ಯವಹಾರದಲ್ಲಿ ಅಭಿವೃದ್ಧಿ ಆಗಲಿದೆ.
ಸಿಂಹ
ಸಂತೋಷದ ಮನೋಭಾವದಲ್ಲಿರುವ ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ರಾಜಕೀಯ ಪಕ್ಷವೊಂದಕ್ಕೆ ಸೇರಲು ಒತ್ತಾಯ ಬರುವುದು. ಕಮಿಷನ್ ವ್ಯಾಪಾರಸ್ಥರಿಗೆ ಲಾಭ ವೃದ್ಧಿ.
ಕನ್ಯಾ
ಕೋರ್ಟ್ ಕಚೇರಿ ದೂರುಗಳಂಥ ಗೊಡವೆಗಳಿಗೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಜವಳಿ ವ್ಯಾಪಾರಿಗಳು ರಿಯಾಯಿತಿ ಮಾರಾಟಗಳಿಂದ ಲಾಭ ಪಡೆಯಬಹುದು. ಆರಕ್ಷಕ ವರ್ಗದವರಿಗೆ ಕೆಲಸದ ಒತ್ತಡವಿರುತ್ತದೆ.
ತುಲಾ
ಹಣ ಸಂಪಾದಿಸುವ ಬಗ್ಗೆ ಎಷ್ಟು ಗಮನಹರಿಸುವಿರೋ ಗಳಿಸಿದ ಹಣವನ್ನು ಸದ್ಬಳಕೆ ಮಾಡಿ. ಇಲ್ಲದಿದ್ದಲ್ಲಿ ಬಂಧನದ ಭೀತಿ ಅಥವಾ ಮಾನ ಹಾನಿಯಾಗುವ ಲಕ್ಷಣಗಳಿವೆ.
ವೃಶ್ಚಿಕ
ಪ್ರಭಾವಿ ವ್ಯಕ್ತಿಗಳ ಪರಿಚಯವು ಭವಿಷ್ಯದ ಆಲೋಚನೆಗಳನ್ನು ಉತ್ತಮಗೊಳಿಸುತ್ತವೆ. ಸಜ್ಜನರ ಭೇಟಿಯಿಂದ ಹಾಗೂ ಸಹವಾಸದಿಂದ ಕಾರ್ಯಗಳು ಕೈಗೂಡಲಿವೆ.
ಧನು
ಹೋಟೆಲ್ ಉದ್ಯಮದವರಿಗೆ ಆದಾಯದಲ್ಲಿ ಬಹಳ ವ್ಯತ್ಯಾಸ ಉಂಟಾಗಲಿದೆ. ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬಗ್ಗೆ ಯೋಚಿಸಿ. ಪುಣ್ಯಕ್ಷೇತ್ರಗಳ ದರ್ಶನದ ಯೋಗವಿದೆ.
ಮಕರ
ಶತ್ರುಗಳ ಉಪಟಳ ತಡೆಯಲು ತಂತ್ರಗಾರಿಕೆ ಮಾಡಬೇಕಾಗುತ್ತದೆ. ಕೃಷಿಕರು ಮಿಶ್ರ ಕೃಷಿ ಪದ್ಧತಿಯನ್ನು ಅನುಸರಿಸಿದರೆ ಲಾಭ . ವೈಯಕ್ತಿಕ ಕೆಲಸಗಳಿಗೆ ಅಡಚಣೆ ಇರುವುದಿಲ್ಲ.
ಕುಂಭ
ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಅವಕಾಶಗಳು ಸಿಗಲಿವೆ. ಐಷಾರಾಮಿ ಜೀವನ ನಿರ್ವಹಣೆ ಆರ್ಥಿಕ ನಷ್ಟಕ್ಕೆ ಕಾರಣವಾಗುವುದು. ತಂದೆಯ ಆರೋಗ್ಯ ಸುಧಾರಣೆಯಾಗಿ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ.
ಮೀನ
ಕನಸುಗಳನ್ನು ಸಾಕಾರಗೊಳಿಸಲು ಅವಿರತ ಪರಿಶ್ರಮ ಅಗತ್ಯ. ಸಂತಾನದ ಅಪೇಕ್ಷಿಗಳಿಗೆ ಶುಭ ಫಲ ಪ್ರಾಪ್ತಿ. ಕೆಲಸ ಕಾರ್ಯಗಳು ಕೈಗೂಡಲು ದೇವರಲ್ಲಿ ಹರಕೆ ಹೊತ್ತಿರುವ ವಿಚಾರವನ್ನು ಮರೆಯದಿರಿ.