ದಿನ ಭವಿಷ್ಯ: ಈ ರಾಶಿಯವರು ಸ್ವಸಾಮರ್ಥ್ಯದಿಂದ ಉತ್ತಮ ಹುದ್ದೆ ಪಡೆದುಕೊಳ್ಳುವಿರಿ
Published 21 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೆಚ್ಚಿನ ಯಶಸ್ಸು ಪಡೆಯಲು ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕಾಗುವುದು. ವೈವಾಹಿಕ ಜೀವನದ ದಾರಿ ಪ್ರಾರಂಭವಾಗಲಿದೆ. ಅಧಿಕಾರಕ್ಕಾಗಿ ಹೋರಾಟ ನಡೆಸುವಿರಿ.
ವೃಷಭ
ಆರ್ಥಿಕ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸಾಲ ತೀರಿಸುವ ಬಗ್ಗೆ ಪ್ರಯತ್ನಿಸಿ. ವಾಸಸ್ಥಾನ ಬದಲಾವಣೆಯಿಂದ ನೆಮ್ಮದಿ ಸಿಗಲಿದೆ. ಮಾನಸಿಕ ವೇದನೆಯಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು.
ಮಿಥುನ
ಮುಂದಿನ ಯೋಜನೆಗಳಿಗೆ ಬೇಕಾಗುವ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಿ. ಮಕ್ಕಳ ಯಶಸ್ಸಿನಿಂದ ಖುಷಿಯಾಗಲಿದೆ. ದ್ರವ್ಯಲಾಭ ಲಕ್ಷಣಗಳಿವೆ.
ಕರ್ಕಾಟಕ
ಅಂದುಕೊಂಡ ಯೋಜನೆ ಸಂಪೂರ್ಣಗೊಳ್ಳಲಿದೆ. ಕಲಾವಿದರಿಗೆ ಅದರಲ್ಲೂ ಪ್ರಮುಖವಾಗಿ ನಾಟ್ಯಕಲೆಯವರಿಗೆ ಹೆಸರಾಂತ ಅವಕಾಶಗಳು ದೊರೆಯಲಿವೆ.
ಸಿಂಹ
ಕಾರ್ಯಕ್ಷೇತ್ರದಲ್ಲಿ ವಿಳಂಬಗಳು ತೋರಿ ಬಂದರೂ ಯೋಜಿತ ಕೆಲಸ ಗಳು ಫಲ ನೀಡಲಿವೆ. ಟ್ರಾವೆಲ್ಸ್ ಉದ್ಯೋಗಿಗಳಿಗೆ ಲಾಭದಾಯಕ ಬೆಳವಣಿಗೆ ಇರುವುದು. ಸ್ವಸಾಮರ್ಥ್ಯದಿಂದ ಉತ್ತಮ ಹುದ್ದೆ ಪಡೆದುಕೊಳ್ಳುವಿರಿ.
ಕನ್ಯಾ
ವ್ಯವಸ್ಥಿತ ಹಾಗೂ ತಂತ್ರಗಾರಿಕೆ ಹೊಂದಿರುವ ಯೋಜನೆಗಳಿಂದ ಆರ್ಥಿಕ ಲಾಭ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಪಠ್ಯಕ್ಕಿಂತ ಪಠ್ಯೇತರ ವಿಚಾರದಲ್ಲಿ ಆಸಕ್ತಿ ಮೂಡಲಿದೆ. ಯಾರಲ್ಲಿಯೂ ಗಲಾಟೆಯನ್ನು ಮಾಡಿಕೊಳ್ಳಬೇಡಿ.
ತುಲಾ
ಉದ್ಯೋಗ ಬದಲಾವಣೆ ಮಾಡುವ ವಿಚಾರ ಮೇಲಧಿಕಾರಿಗಳ ಗಮನಕ್ಕೆ ತರುವುದು ಒಳ್ಳೆಯದು. ತಂದೆಯಿಂದ ವೃತ್ತಿಗೆ ಸಹಾಯ ದೊರಕುತ್ತದೆ. ರಾಜಕೀಯ ರಂಗ ಪ್ರವೇಶ ಸಾಧ್ಯತೆ.
ವೃಶ್ಚಿಕ
ಲೆಕ್ಕಪತ್ರಗಳ ನಿರ್ವಹಣೆಯಲ್ಲಿ, ಪೋಷಣೆಯಲ್ಲಿ ದುಡುಕಬೇಡಿ. ವೃತ್ತಿ ನಿಪುಣತೆಯಿಂದ ಉನ್ನತಾಧಿಕಾರಿ ಹುದ್ದೆಗೆ ನೇಮಕಗೊಳ್ಳುವಿರಿ.ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ.
ಧನು
ಸಾಮರ್ಥ್ಯಕ್ಕೆ, ಪ್ರತಿಭೆಗೆ ಅನುಗುಣವಾದ ಉದ್ಯೋಗ ಅವಕಾಶ ದೊರೆತು ಸಂತಸವಾಗಲಿದೆ. ವೃತ್ತಿ ಪ್ರಾಮಾಣಿಕತೆಗೆ ನಿರೀಕ್ಷೆ ಮೀರಿದ ಗೌರವ ಲಭ್ಯ. ಜಾಹೀರಾತು ಏಜೆನ್ಸಿಯವರಿಗೆ ಅಧಿಕ ಆದಾಯ.
ಮಕರ
ಕೌಟುಂಬಿಕ ಸಮಸ್ಯೆಗಳು ಬಗೆಹರಿದು ಮನೆಯವರಿಗೆಲ್ಲ ನೆಮ್ಮದಿ ಉಂಟಾಗುವುದು. ಕೇಟರಿಂಗ್ ಮತ್ತು ಹೋಟೆಲ್ ಉದ್ಯಮದವರಿಗೆ ಶುಭ ದಿನ. ಕಷ್ಟಗಳಿಂದ ಮುಕ್ತರಾಗಲು ವಿಷ್ಣು ಸಹಸ್ರ ನಾಮ ಸ್ತೋತ್ರ ಪಠಿಸಿರಿ.
ಕುಂಭ
ವ್ಯವಹಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಹಿರಿಯರ ಮತ್ತು ಮಡದಿಯಲ್ಲಿದ್ದ ನಕಾರಾತ್ಮಕ ಪ್ರತಿಕ್ರಿಯೆ ಬದಲಾಗಿ ನಿರ್ಣಯಗಳಿಗೆ ಸಕಾರಾತ್ಮಕ ಬೆಂಬಲ ದೊರೆಯಲಿದೆ. ಉಡುಗೊರೆ ಲಭ್ಯವಾಗಬಹುದು.
ಮೀನ
ವಿನಾಕಾರಣ ಅಲೆದಾಟದಿಂದ ಬೇಸರ ಪಡುವ ಅವಶ್ಯಕತೆ ಇಲ್ಲ. ಇಂದಿನ ಶ್ರಮ ಮುಂದಿನ ದಿನಕ್ಕೆ ಒಂದು ಅಡಿಪಾಯವಾಗಲಿದೆ. ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಡಿ.