ದಿನ ಭವಿಷ್ಯ: ಈ ರಾಶಿಯವರಿಗೆ ವೈದ್ಯಕೀಯ ಖರ್ಚುಗಳು ಹೆಚ್ಚಲಿವೆ
Published 22 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಸ್ತಿ ವಿಷಯಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಆಧ್ಯಾತ್ಮಿಕ ವಿಚಾರಗಳತ್ತ ಗಮನ ಹರಿಯಲಿದೆ. ಗಣಪತಿಯ ಅನುಗ್ರಹದಿಂದ ಸ್ಥಾನ ಲಭ್ಯವಾಗಲಿದೆ.
ವೃಷಭ
ಹೊಸ ವಿದ್ಯುತ್ ಉಪಕರಣಗಳ ಅಳವಡಿಕೆ ಅನಿವಾರ್ಯ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದೆ. ವಿದ್ಯಾಭ್ಯಾಸ ನಿಶ್ಚಿಂತೆಯಿಂದ ಸಾಗಲಿದೆ.
ಮಿಥುನ
ಕೆಲಸಕ್ಕೆ ಇತರೆ ಜೊತೆಗಾರರಿಂದ ಅಡೆತಡೆಗಳು ಎದುರಾಗಲಿವೆ. ಟೀಕೆಯ ಮಾತುಗಳನ್ನು ಕೇಳಬೇಕಾಗಬಹುದು. ಗಣ್ಯ ವ್ಯಕ್ತಿಗಳ ಪರಿಚಯ ಸ್ವಂತ ಕೆಲಸವೊಂದಕ್ಕೆ ಸಹಾಯವಾಗುವುದು.
ಕರ್ಕಾಟಕ
ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲಗಳನ್ನು ಸಾಮಾಜಿಕವಾಗಿ ಪ್ರದರ್ಶಿಸಿ. ಜೀವನದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಲಿದೆ. ಚರ್ಮಕ್ಕೆ ಸಂಬಂಧಪಟ್ಟಂತೆ ಅನಾರೋಗ್ಯ ಎದುರಾಗಬಹುದು.
ಸಿಂಹ
ನವಉದ್ಯಮಿಗಳಿಗೆ ಹಿರಿಯರಿಂದ ತಿಳಿವಳಿಕೆಯ ಮಾತುಗಳು, ಆಶೀರ್ವಾದವು ಪ್ರಾಪ್ತಿ. ಆಹಾರ ಸೇವಿಸಲು ಸಂಕೋಚ ಮಾಡಿಕೊಳ್ಳಬೇಡಿ. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ಶುಭಕಾಲ.
ಕನ್ಯಾ
ಮನೆಯಲ್ಲಿ ನಡೆಯಬೇಕಿರುವ ಮಂಗಳಕಾರ್ಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸುದಿನ. ಮನೆಯಲ್ಲಿ ಅಗತ್ಯವಾದ ಹೊಂದಾಣಿಕೆ ಮಾಡಿಕೊಳ್ಳಿ.
ತುಲಾ
ಶ್ರಮಕ್ಕೆ ಅನುಗುಣವಾಗಿ ಆರ್ಥಿಕ ಸ್ಥಿತಿಗತಿಗಳು ಉತ್ತಮಗೊಳ್ಳಲಿವೆ. ರೇಷ್ಮೆ ಹಾಗೂ ಕಬ್ಬು ಬೆಳೆಗಳಿಂದ ನಿರೀಕ್ಷೆಗೂ ಮೀರಿದ ಲಾಭ ಇದೆ. ಮಕ್ಕಳ ನಡವಳಿಕೆಯಿಂದ ಗೌರವಕ್ಕೆ ಧಕ್ಕೆ ತರುವಂತಾಗಬಹುದು.
ವೃಶ್ಚಿಕ
ಮೌನದ ಉತ್ತರದಿಂದ ಭಿನ್ನಾಭಿಪ್ರಾಯದ ಸಮಸ್ಯೆಗೆ ಅಂತ್ಯ ಹೇಳಬಹುದು. ಕೆಲಸವು ಮೊದಲ ಪ್ರಯತ್ನದಲ್ಲಿಯೇ ಸಫಲವಾಗಲಿದೆ. ವೈದ್ಯಕೀಯ ಖರ್ಚುಗಳು ಹೆಚ್ಚಲಿವೆ.
ಧನು
ಕೆಲಸದ ಕ್ಷೇತ್ರದಲ್ಲಿ ಜವಾಬ್ದಾರಿಯುತ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ವಿದ್ವಾಂಸರೊಡನೆ ಕೆಲ ಹೊತ್ತು ಕಳೆಯಲಿದ್ದೀರಿ. ಸಿಟ್ಟಿನಿಂದ ಹೊರಬರಲು ಶನೈಶ್ಚರನನ್ನು ಪ್ರಾರ್ಥಿಸಿ.
ಮಕರ
ಸಂಸ್ಥೆಯಿಂದ ತರಬೇತಿ ಪಡೆದುಕೊಳ್ಳುವ ಅವಕಾಶಗಳು ಎದುರಾಗಲಿವೆ. ಒಂದು ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ತೀರ್ಮಾನವನ್ನೂ ತೆಗೆದುಕೊಳ್ಳಬೇಡಿ.
ಕುಂಭ
ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕಾಗುವುದು. ನಿರುದ್ಯೋಗಿಗಳಿಗೆ ಹಂಗಾಮಿ ನೌಕರಿಯನ್ನು ಒಪ್ಪಿಕೊಳ್ಳುವುದು ಅನಿವಾರ್ಯ. ಯಂತ್ರೋಪಕರಣ ಮಾರಾಟದಿಂದ ಲಾಭ.
ಮೀನ
ಕಷ್ಟ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ, ಸಕಾಲಕ್ಕೆ ಸ್ನೇಹಿತರಿಂದ ಹಣದ ಸಹಾಯ ಸಿಗಲಿದೆ. ಪ್ರವಾಸದಿಂದ ಸಂತೋಷ ಹೊಂದುವಿರಿ. ಕ್ಷಣಿಕ ಸುಖಕ್ಕಾಗಿ ಹಣ ವ್ಯಯ ಮಾಡುವುದು ಸರಿಯಲ್ಲ