ದಿನ ಭವಿಷ್ಯ: ದ್ರವ ರೂಪದ ವಸ್ತುಗಳ ಮಾರಾಟಗಾರರಿಗೆ ಅಧಿಕ ಲಾಭವಾಗು
ವುದು..
Published 23 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೇಹದಲ್ಲಿ ಅಧಿಕ ಉಷ್ಣಾಂಶದ ಪರಿಣಾಮದಿಂದಾಗಿ ಅನಾರೋಗ್ಯ ಉಂಟಾಗಬಹುದು. ಸುಖ ಭೋಜನ ಪ್ರಾಪ್ತಿಯಾಗಲಿದೆ. ಆದರೆ ಈ ದಿನದ ಸ್ವಾಧಿಷ್ಟ ಭೋಜನ ಈ ದಿನ ಆರೋಗ್ಯಕ್ಕೆ ಸ್ವಲ್ಪ ತೊಂದರೆ ತರಬಹುದು.
ವೃಷಭ
ಮಕ್ಕಳ ಆಟಿಕೆ ಅಥವಾ ಅಲಂಕಾರಿಕ ವಸ್ತುಗಳ ಖರೀದಿಯಿಂದ ಹಣ ವ್ಯಯ ಆಗಲಿದೆ. ಕೈ ತಪ್ಪಿ ಹೋದ ವಿಚಾರಗಳು ಪುನಃ ಕೈ ಸೇರಲಿದೆ. ದಾಂಪತ್ಯದಲ್ಲಿ ಸಣ್ಣ ವಿಚಾರಗಳಿಂದ ಮಾನಸಿಕ ಅಸಮಾಧಾನ ಕಾಡಲಿದೆ.
ಮಿಥುನ
ದುರಭ್ಯಾಸಗಳಿಗೆ ಒಳಗಾಗದಂತೆ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡಿ. ಉದ್ಯೋಗದಲ್ಲಿ ಉತ್ತಮ ಹೆಸರು ಗಳಿಸುವ ಪ್ರಯತ್ನಕ್ಕೆ ಶುಭವಾಗುತ್ತದೆ. ವಿದ್ಯಾರ್ಥಿಗಳಿಗೆ ಪೂರಕವಾದ ದಿನವಾಗಿದೆ.
ಕರ್ಕಾಟಕ
ದೊಡ್ಡ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಸಾಲ ಮಾಡು
ವುದು ಸರಿಯಲ್ಲ. ನಿಮ್ಮ ಈ ದಿನದ ಸಾಧನೆಗೆ ತಾಯಿಯ ಬೆಂಬಲ, ಪ್ರೋತ್ಸಾಹ ಸಿಗುವುದು. ಈ ದಿನ ಕೃಷಿ ಕಾರ್ಮಿಕರಿಗೆ ಕೆಲಸದಲ್ಲಿ ಬಿಡುವಿಲ್ಲದಂತೆ ಆಗುತ್ತದೆ.
ಸಿಂಹ
ಸಾಂಸಾರಿಕ ಬದುಕಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮವಾದ ಬದುಕಿಗೆ ದಾರಿಯಾಗುತ್ತದೆ. ಮನೆಯ ನವೀಕರಣಗೊಳಿಸುವ ವಿಚಾರಗಳು ಯೋಚನೆಗೆ ಬರಲಿವೆ. ಮನೆಯಲ್ಲಿ ನಿಮಗೆ ಜವಾಬ್ದಾರಿ ಹೆಚ್ಚಲಿದೆ.
ಕನ್ಯಾ
ನಿಮ್ಮ ಪ್ರತಿಭೆ ಮತ್ತು ಪರಿಶ್ರಮಕ್ಕೆ ತಕ್ಕ ಫಲ ದೊರೆತು ಸಂತೋಷ
ಆಗುವುದು. ಆದರೆ ನಿಮ್ಮ ಪ್ರಯತ್ನಕ್ಕೆ ಸರಿಯಾಗಿ ಸಂಪಾದನೆಯನ್ನು ಉಳಿಸಿ
ಕೊಳ್ಳಲು ಅಸಾಧ್ಯವಾಗಲಿದೆ. ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ನಿಮಗೆ ಸಿಗಲಿದೆ.
ತುಲಾ
ಪೂಜಾದಿ ಕೆಲಸಗಳಿಂದ ಮನಸ್ಸು ಉಲ್ಲಾಸಗೊಳ್ಳಲಿದೆ ಹಾಗೂ ಅಧಿಕಾರಿಗಳಿಗೆ ನಿಮ್ಮ ಮೇಲಿದ್ದ ಅಸಮಾಧಾನ ದೂರಾಗುವುದು. ಬಹುದಿನಗಳಿಂದ ಕಾಯುತ್ತಿದ್ದ ಕೃಷಿಯ ಫಲಿತಾಂಶವು ಇಂದು ಬರಲಿದೆ.
ವೃಶ್ಚಿಕ
ದ್ರವ ರೂಪದ ವಸ್ತುಗಳ ಮಾರಾಟಗಾರರಿಗೆ ಅಧಿಕ ಲಾಭವಾಗು
ವುದು. ನಿಮ್ಮ ನಿರ್ಧಾರಗಳಿಗೆ ಪಾಲುದಾರರಿಂದ ಉತ್ತೇಜನ ಸಿಗುವುದು. ನಿಮ್ಮ ಪ್ರಯಾಣವು ಪೂರ್ವನಿಯೋಜಿತ ರೀತಿಯಲ್ಲಿ ನಡೆಯುವುದು ಕಷ್ಟಕರ.
ಧನು
ಜನರನ್ನು ಆಕರ್ಷಿಸುವ ಕಲೆ ನಿಮ್ಮಲ್ಲಿ ಚೆನ್ನಾಗಿರುವುದರಿಂದ ನಿಮ್ಮೆಲ್ಲಾ
ಕೆಲಸ ಕಾರ್ಯಗಳಲ್ಲಿ ಅತಿ ಹೆಚ್ಚಿನ ಪ್ರಗತಿಯನ್ನು ಕಾಣುವಿರಿ. ಸಾಂಸಾರಿಕ
ವಿಷಯದಲ್ಲಿ ಕೆಲವು ಬದಲಾವಣೆ ರೂಢಿಸಿಕೊಳ್ಳಬೇಕಾಗುವುದು.
ಮಕರ
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಅಧಿಕ ಕಮಿಶನ್ ದೊರೆಯಲಿದೆ. ಸುಗಂಧ ವಸ್ತುಗಳ ತಯಾರಕರಿಗೆ ಮತ್ತು ಮಾರಾಟಗಾರರಿಗೆ ಹೆಚ್ಚಿನ ಆದಾಯ ದೊರಕುವುದು. ತಾಯಿಯ ಆರೋಗ್ಯ ಸುಧಾರಿಸುವುದು.
ಕುಂಭ
ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಈ ದಿನ ಹೆಚ್ಚಿನ ಲಾಭ ಉಂಟಾಗುವುದು. ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ಮುಂದೊಂದು ದಿನ ಅವರಿಂದ ಸಹಾಯ ಪಡೆಯಬೇಕಾಗಬಹುದು.
ಮೀನ
ಇಂದು ನೀವು ತೆಗೆದುಕೊಳ್ಳುವ ನಿರ್ಧಾರವು ಘರ್ಷಣೆಗೆ ಕಾರಣ ವಾಗುತ್ತದೆ. ನಿಮ್ಮ ಆರ್ಥಿಕ ತಾಪತ್ರಯಗಳು ಯಾರಲ್ಲಿಯೂ ಹೇಳಿಕೊಳ್ಳಲು ಆಗದಂತೆ ಆಗಲಿದೆ. ಕೌಟುಂಬಿಕ ಆತಂಕ ಕಡಿಮೆಯಾಗಲಿದೆ.