ದಿನ ಭವಿಷ್ಯ: ಈ ರಾಶಿಯವರಿಗೆ ದೇಹಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲ
Published 25 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸತ್ಯದ ಮಾರ್ಗವು ಜೀವನದಲ್ಲಿ ಎದುರಾದ ಗೊಂದಲದಿಂದ ಹೊರಬರಲು ಅನುಕೂಲ ಮಾಡಲಿದೆ. ಹಿರಿಯರೊಡನೆ ವಾಗ್ವಾದ ಆಗದಂತೆ ಜಾಗ್ರತೆ ಮಾಡಿ. ಯಶಸ್ಸಿಗೆ ಅವರ ಆಶೀರ್ವಾದವು ಅಗತ್ಯವಾಗಿರುತ್ತದೆ.
ವೃಷಭ
ದೇಹಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲ. ಸೌಂದರ್ಯವರ್ಧಕ ವಸ್ತುಗಳನ್ನು ಬಳಸಬೇಡಿ. ಅಲರ್ಜಿಯಾಗಬಹುದು. ರಾಸಾಯನಿಕ ಬಳಕೆ ವ್ಯತ್ಯಾಸದಿಂದ ರೈತರಿಗೆ ನಷ್ಟ ಸಂಭವಿಸುತ್ತದೆ.
ಮಿಥುನ
ಗುರಿ ಸಾಧಿಸಲು ಪ್ರಮುಖ ವ್ಯಕ್ತಿಗಳೊಂದಿಗೆ ಭೇಟಿ ಅನಿವಾರ್ಯ. ಕೆಲಸದಲ್ಲಿ ಸಣ್ಣ-ಪುಟ್ಟ ಬದಲಾವಣೆಗಳು ಎದುರಾಗಲಿವೆ. ದಾಂಪತ್ಯದಲ್ಲಿ ಚರ್ಚೆ, ವಾದಗಳಿಗೆ ಆಸ್ಪದ ನೀಡದಿರುವುದು ನೆಮ್ಮದಿಯನ್ನು ಕೊಡುತ್ತದೆ.
ಕರ್ಕಾಟಕ
ಕಿರುತೆರೆ ಮತ್ತು ಸಿನಿಮಾ ಕಲಾವಿದರಿಗೆ ಮಾನ್ಯತೆ ದೊರೆಯಲಿದೆ. ಆಹಾರ ವ್ಯತ್ಯಾಸದಿಂದ ಪಿತ್ತ ಸಂಬಂಧಿ ಅನಾರೋಗ್ಯಗಳು ಎದುರಾಗಲಿವೆ. ಅವಸರದ ತೀರ್ಮಾನ ಬೇಡ.
ಸಿಂಹ
ಬಟ್ಟೆ ವ್ಯಾಪಾರಿಗಳು ರೇಷ್ಮೆ ವಸ್ತ್ರಗಳ ಮಾರಾಟದಿಂದ ಲಾಭ ಪಡೆಯುವಿರಿ. ಅಧ್ಯಾಪಕ ವರ್ಗದವರಿಗೆ ವಿದ್ಯಾರ್ಥಿಗಳ ಮೇಲುಗೈಯಿಂದ ಸಂತೋಷ ಸಿಗಲಿದೆ. ಜಗನ್ಮಾತೆ ರಾಜರಾಜೇಶ್ವರಿಯನ್ನು ಪ್ರಾಥಿಸಿ.
ಕನ್ಯಾ
ಅಂಚೆ ವಿಭಾಗದ ಪರೀಕ್ಷೆಯನ್ನು ಬರೆದವರಿಗೆ ನಿರೀಕ್ಷೆಗೆ ಮೀರಿದ ಫಲಿತಾಂಶ ದೊರೆತರೂ ಕುಟುಂಬದಿಂದ ದೂರವಾಗಬೇಕಾದ ಪರಿಸ್ಥಿತಿ ಎದುರಾಗುವುದು. ಬಣ್ಣ ಮತ್ತು ಸಿಮೆಂಟ್ ವ್ಯಾಪಾರಿಗಳಿಗೆ ಲಾಭ ಅಧಿಕ.
ತುಲಾ
ತೈಲ ಲೇಪನದಂಥ ಆಯ್ಕೆಯಿಂದ ಕಾಲು ನೋವು ಉಪಶಮನ ಆಗಲಿದೆ. ನೆರೆಹೊರೆಯವರೊಂದಿಗಿನ ಸಂಬಂಧಗಳು ಉತ್ತಮಗೊಳ್ಳಲಿವೆ. ಸ್ವ ಉದ್ಯೋಗಿಗಳಿಗೆ ಅವಕಾಶ ಲಭ್ಯ.
ವೃಶ್ಚಿಕ
ಸಾಹಿತ್ಯದಲ್ಲಿ ಅಭಿರುಚಿ ಹೆಚ್ಚುತ್ತದೆ. ಯಾಂತ್ರಿಕ ಬದುಕಿನಿಂದ ತುಸು ವಿರಾಮ ಪಡೆಯುವಿರಿ. ಪತಿಯ ಆರೋಗ್ಯದಲ್ಲಿ ಆರೈಕೆಯಿಂದ ಉನ್ನತಿ ಕಾಣಲಿದೆ. ಬದುಕಿನಲ್ಲಿ ಬದಲಾವಣೆ ಇರುವುದಿಲ್ಲ.
ಧನು
ಸಾಹಿತ್ಯದಲ್ಲಿ ಅಭಿರುಚಿ ಹೆಚ್ಚುತ್ತದೆ. ಯಾಂತ್ರಿಕ ಬದುಕಿನಿಂದ ತುಸು ವಿರಾಮ ಪಡೆಯುವಿರಿ. ಪತಿಯ ಆರೋಗ್ಯದಲ್ಲಿ ಆರೈಕೆಯಿಂದ ಉನ್ನತಿ ಕಾಣಲಿದೆ. ಬದುಕಿನಲ್ಲಿ ಬದಲಾವಣೆ ಇರುವುದಿಲ್ಲ.
ಮಕರ
ಮಾತಿನಲ್ಲಿ ಬಿಗು ಮತ್ತು ಗಾಂಭೀರ್ಯವನ್ನು ಇಟ್ಟುಕೊಳ್ಳುವುದರಿಂದ ಪ್ರತಿಷ್ಠೆ ಹೆಚ್ಚುತ್ತದೆ. ಸಜ್ಜನರ ಸಹವಾಸ ಮತ್ತು ಸನ್ಮಾರ್ಗದ ಬುದ್ಧಿಯನ್ನು ಕಾಪಾಡಿಕೊಳ್ಳುವುದು ಉತ್ತಮ.
ಕುಂಭ
ಬಾಳಸಂಗಾತಿಯ ಆಯ್ಕೆಯ ವಿಚಾರದಲ್ಲಿ ಸೌಂದರ್ಯಕ್ಕಿಂತ ಗುಣ, ನಡತೆಗೆ ಪ್ರಾಮುಖ್ಯ ನೀಡುವುದು ಉತ್ತಮ. ಪುರಾಣಗಳ ಪ್ರವಚನಗಳನ್ನು ಮಾಡುವವರಿಗೆ ಹೊಸ ಅವಕಾಶಗಳು ದೊರೆಯಲಿವೆ.
ಮೀನ
ಅಳವಡಿಸಿಕೊಂಡ ಹೊಸ ಯೋಜನೆಗಳಿಂದ ಉತ್ತಮ ಪ್ರಗತಿಯನ್ನು ಕಾಣಲಿದ್ದೀರಿ. ಹಿತಶತ್ರುಗಳಿಂದ ವಂಚನಾ ಪ್ರಸಂಗವಿದ್ದರು ಜಯ ಸಿಗುವುದು ಖಂಡಿತ.