ಮಂಗಳವಾರ, 16 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಶ್ರಮಕ್ಕೆ ತಕ್ಕಷ್ಟು ಆದಾಯ ಲಭಿಸಲಿದೆ
Published 27 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಅಭಿವೃದ್ಧಿಗೆ ಬೇಕಾದ ಹಲವಾರು ಆಸಕ್ತಿದಾಯಕ ವಿಚಾರಗಳು ನಿಮ್ಮ ಕಿವಿಗೆ ಬೀಳಲಿವೆ. ಜವಳಿ ವ್ಯಾಪಾರಿಗಳಿಗೆ ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಅಧಿಕ ಮಟ್ಟದಲ್ಲಿ ಫಲ ಕೊಡಲಿದೆ.
ವೃಷಭ
ಈ ದಿನದ ಗ್ರಹಗಳ ಚಲನೆಯು ಸುಖಮಯವಾಗಿ ಜೀವನ ನಡೆಸಲು ಅನುಕೂಲಕರವಾಗಿದೆ. ವಿದ್ಯೆ ಮತ್ತು ಬುದ್ಧಿವಂತಿಕೆಯನ್ನು ಸರಿಯಾದ ಮಾರ್ಗ ದಲ್ಲಿ ಬಳಸುವ ಬಗ್ಗೆ ತೀರ್ಮಾನಿಸಿ. ವಾಹನ ಚಾಲನೆಯಲ್ಲಿ ಜಾಗರೂಕತೆ.
ಮಿಥುನ
ಮಕ್ಕಳ ಹೊಸ ವ್ಯವಹಾರದಲ್ಲಿ ತಂದೆ ತಾಯಿಯ ಆಶೀರ್ವಾದ ಮತ್ತು ಆರ್ಥಿಕ ಸಹಾಯ ಸಹಕಾರ ದೊರೆಯಲಿದೆ. ಬಾಕಿಯುಳಿದ ಕಾರ್ಯಕ್ಕೆ ಇಂದು ಹೊಸ ಜೀವ ಬರುವುದು. ಕ್ರೀಡಾಪಟುಗಳಿಗೆ ಎಲ್ಲ ಸ್ಪರ್ಧೆಗಳಲ್ಲೂ ಜಯ.
ಕರ್ಕಾಟಕ
ಹೂವಿನ ಜೊತೆಯಲ್ಲಿ ನಾರು ಸ್ವರ್ಗ ಸೇರಿತು ಎಂಬಂತೆ ಪ್ರಭಾವಿ ವ್ಯಕ್ತಿಗಳ ಜತೆಗಿನ ಒಡನಾಟ ಮತ್ತು ಓಡಾಟ ನಿಮಗೆ ಹೆಚ್ಚಿನ ಸ್ಥಾನಮಾನ ತಂದು ಕೊಡಲಿದೆ. ವಿದ್ಯಾರ್ಥಿಗಳಿಗೆ ಸಾಧನೆಗಾಗಿ ಹೆಚ್ಚಿನ ಅವಕಾಶ ಸಿಗುವುದು.
ಸಿಂಹ
ಆಹಾರ ಪದಾರ್ಥಗಳ ವ್ಯಾಪಾರ ಮಾಡುವವರು ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಉತ್ತಮ ಹಾಗೂ ಶ್ರಮಕ್ಕೆ ತಕ್ಕಷ್ಟು ಆದಾಯ ಲಭಿಸಲಿದೆ. ವಿವಾಹದ ವಿಚಾರದಲ್ಲಿ ಇನ್ನೊಮ್ಮೆ ಯೋಚಿಸಿ ತೀರ್ಮಾನಿಸಿರಿ.
ಕನ್ಯಾ
ಸ್ವಂತ ಉದ್ಯಮಿಗಳಿಗೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಎಲ್ಲಾ ರೀತಿಯ ಸಹಾಯ ಸಹಕಾರ ಒದಗಿ ಬರುವುದು. ನಿಮ್ಮ ಸಹೋದರಿಯ ನಿಶ್ಚಿತಾರ್ಥ ಅಥವಾ ವಿವಾಹದ ಸಲುವಾಗಿ ತಯಾರಿಯನ್ನು ನಡೆಸುವಿರಿ.
ತುಲಾ
ದೇವರ ಕೆಲಸಗಳಿಗಾಗಿ ಅಥವಾ ದೇವರ ದರ್ಶನಕ್ಕಾಗಿ ಹಣ ವ್ಯಯ ಆಗುವ ಲಕ್ಷಣವಿದೆ. ಆರಂಭದಲ್ಲಿ ಕೆಲಸಗಳು ನಿರೀಕ್ಷಿತ ಹಾದಿಯಲ್ಲಿ ಸಾಗುವುದ ರಿಂದ ನಿಮ್ಮಲ್ಲಿ ಧೈರ್ಯ ಹೆಚ್ಚುತ್ತದೆ. ಮುಕ್ತಾಯದ ಹಂತದ ಬಗ್ಗೆ ಗಮನವಿರಲಿ.
ವೃಶ್ಚಿಕ
ಕೃಷಿಕರು ಈಗಿನ ಕಾಲಕ್ಕೆ ತಕ್ಕಂತೆಯೇ ಯಂತ್ರೋಪಕರಣಗಳ ಬಳಕೆ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಗಮನಹರಿಸಿ. ಅನಿರೀಕ್ಷಿತ ಉಡುಗೊರೆ ಸಿಗಲಿದೆ. ಎಂಟು ವರ್ಷದ ಒಳಗಿನ ಮಕ್ಕಳು ಶೀತದಿಂದ ಬಳಲುವಂತಾಗಬಹುದು.
ಧನು
ಎಂಜಿನಿಯರಿಂಗ್ ಕೆಲಸಗಾರರು ತಮ್ಮ ಕಾರ್ಯದಲ್ಲಿ ಚಾಣಕ್ಯ ನೀತಿ ಅನುಸರಿಸುವುದರಿಂದ ವ್ಯವಹಾರದಲ್ಲಿ ಪ್ರಶಂಸೆ ಹಾಗೂ ಯಶಸ್ಸು ಕಾಣುವಿರಿ ಹಾಗೂ ಇನ್ನು ಯಶಸ್ಸಿನ ಹೊಸ ಮಾರ್ಗಗಳು ನಿಮಗಿಂದು ಅರಿವಾಗುವುದು.
ಮಕರ
ದಿನದ ಅಂತ್ಯದಲ್ಲಿ ನಾಳೆಯ ದಿನದ ಅಧಿಕವಾದ ಕೆಲಸಗಳ ಬಗ್ಗೆ ಗಮನ ಹರಿಸುವುದು ಉತ್ತಮ. ವಿವಿಧ ರೀತಿಯ ಬರವಣಿಗೆ ಮುಖಾಂತರ ಹೆಚ್ಚುವರಿ ಆದಾಯವಿರುವುದು. ಮಕ್ಕಳಿಂದ ನಿಮಗೆ ಸಂತೋಷವಾಗುವುದು.
ಕುಂಭ
ಆಪ್ತರ ಸಕಾಲಿಕ ಸಹಾಯಕ್ಕೆ ಧನ್ಯವಾದ ತಿಳಿಸಲು ಮರೆಯದಿರಿ ಮತ್ತು ಅವರ ಸಂಪರ್ಕವನ್ನು ಭದ್ರ ಮಾಡಿಕೊಳ್ಳಿ. ಸಹೋದರರ ಆಗಮನದಿಂದ ಸಂತೋಷ ಇರಲಿದೆ. ಕೌಟುಂಬಿಕವಾದ ಶುಭ ಸಮಾಚಾರ ಕೇಳಿಬರಲಿದೆ.
ಮೀನ
ನೀವು ಮಾಡುತ್ತಿರುವ ಕೆಲಸದಲ್ಲಿ ನಿಮ್ಮ ಗಮನಕ್ಕೆ ಬರುವ ತಪ್ಪುಗಳನ್ನು ಪುನರಾವರ್ತನೆಯಾಗದಂತೆ ಗಮನಿಸಿದರೆ ಯಶಸ್ಸಿನ ದಾರಿ ಕಾಣಬಹುದು.ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಮೇಲೆ ಅಧಿಕವಾದ ಶ್ರಮವಹಿಸಿ.
ADVERTISEMENT
ADVERTISEMENT