ಬುಧವಾರ, 17 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಬೇರೆಯವರ ಅಧೀನದಲ್ಲಿ ಕೆಲಸ ನಿರ್ವಹಿಸಬಾರದು
Published 7 ಮೇ 2026, 23:04 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿ ದೇವರಕೃಪೆಗೆ ಪಾತ್ರರಾದಂತಹ ಧನ್ಯತೆ  ಮನೋಭಾವ ನಿಮ್ಮದಾಗುವುದು. ಜಾಹೀರಾತುಗಳಂಥ ವಿಚಾರದಿಂದ ಪ್ರಚಾರ ಕಾರ್ಯಗಳು ನಡೆಯಲಿವೆ.
ವೃಷಭ
ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಇರುವ ಅವಕಾಶಗಳನ್ನು ಮುಂದುವರಿಸಿ. ಹೊಸ ಮನೆ ನಿರ್ಮಾಣಕ್ಕಾಗಿ  ತಯಾರಿಯನ್ನು ನಡೆಸಲು ಸುದಿನ.
ಮಿಥುನ
ಮನಸ್ಸನ್ನು ಹೊಂದಿದವರಲ್ಲಿ ಒಪ್ಪಂದದ ವ್ಯವಹಾರಗಳನ್ನು ನಡೆಸಬಹುದು. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ದೀರ್ಘಕಾಲಿಕ ಕೆಲಸಗಳು ನಿಧಾನವಾಗಿ ಸಾಗಲಿವೆ.
ಕರ್ಕಾಟಕ
ಬೇರೆಯವರ ಅಧೀನದಲ್ಲಿ ಕೆಲಸ ನಿರ್ವಹಿಸಬಾರದು. ಸ್ವತಂತ್ರವಾಗಿ ಇರಬೇಕು ಎಂಬ ಆಸೆ ಕಾಡಲಿದೆ. ಕ್ಲಪ್ತ ಸಂದರ್ಭದಲ್ಲಿ ತಂದೆ-ತಾಯಿಯ ಆರೈಕೆಯಿಂದ ಪುಣ್ಯ ಸಂಪಾದನೆಯಾಗುವುದು.
ಸಿಂಹ
ಪಾಲುದಾರರೊಂದಿಗೆ ಹಣಕಾಸಿನ ವಿಷಯದಲ್ಲಿ ಬಿಗಿ ಹಿಡಿತ ಪಡೆಯಿರಿ. ಅನ್ಯರ ಗುಣ ನಡತೆಯನ್ನು ಮೊದಲ ಭೇಟಿಯಲ್ಲಿ ತೀರ್ಮಾನ ಮಾಡಬೇಡಿ. ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಉಂಟಾಗಲಿವೆ.
ಕನ್ಯಾ
ಏರುಪೇರಾಗಿದ್ದ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ಸಿಗಲಿದೆ. ಉದ್ಯೋಗದಲ್ಲಿ ಅಸ್ತಿತ್ವ ಹಾಗೂ ಸ್ಥಾನಮಾನಗಳು ಭದ್ರವಾಗಲಿವೆ. ದುಶ್ಚಟಗಳಿಂದ ಮುಕ್ತರಾಗಿ.
ತುಲಾ
ಅನ್ಯರಿಗೆ ಸಲಹೆ ಸೂಚನೆ ಕೊಡುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಹಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜನರೊಂದಿಗೆ ಬೆರೆಯುವ ಅಭ್ಯಾಸ ಮಾಡಿಕೊಳ್ಳಿರಿ.
ವೃಶ್ಚಿಕ
ಸ್ವಂತ ಹೂಡಿಕೆಯಿಂದ ಧನಾರ್ಜನೆಯ ವಿಷಯದಲ್ಲಿ ಸಮತೋಲನ ಸಾಧಿಸಬಹುದು. ಮಗನ ಮುಂದಿನ ಓದಿಗಾಗಿ ಗಂಭೀರವಾದ ಚರ್ಚೆಯು ಬರುವುದು. ಇನ್ನೊಬ್ಬರ ಬಗ್ಗೆ ಕೆಟ್ಟ ಮಾತುಗಳು ಬೇಡ.
ಧನು
ಬಲು ಅಪರೂಪದ ಹಾಗೂ ಕರಗತವಾದ ವಿದ್ಯೆಯು ಲಾಭವನ್ನು ತಂದುಕೊಡುವುದು. ಹೊಸದಾಗಿ ಹಣ ಹೂಡಿಕೆ ಮಾಡಬೇಕಾದರೆ ಪರಿಶೀಲನೆ ಅಗತ್ಯ . ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಮಕರ
ನಿರ್ವಹಿಸಿದ ಹಣಕಾಸಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ವೃತ್ತಿ ಪರವಾಗಿ ಯಾವುದೇ ಬದಲಾವಣೆಗೆ  ಸಮಂಜಸ ದಿನವಾಗಿರುವುದಿಲ್ಲ.
ಕುಂಭ
ನಡೆದು ಹೋದ ಸಂಗತಿಗಳ ಅಥವಾ ದುರ್ಘಟನೆಗಳ ಬಗ್ಗೆ ಯೋಚಿಸದೆ ಕಾರ್ಯ ಪ್ರವೃತ್ತರಾದಲ್ಲಿ ಜಯ ಸಾಧ್ಯ. ಅವಿವಾಹಿತರಿಗೆ ಅವರ ಮನಸ್ಸಿಗೆ ಇಷ್ಟವಾಗುವ ರೀತಿಯ ಸಂಬಂಧಗಳು ಬರಲಿವೆ.
ಮೀನ
ತಾಂತ್ರಿಕ ವಿದ್ಯೆಯನ್ನು ವ್ಯಾಸಂಗ ಮಾಡುವವರಿಗೆ ಉತ್ತಮ ಫಲಿತಾಂಶ ಲಭಿಸಿ ಸಂತೋಷವಾಗುವುದು. ವೃತ್ತಿಯ ಪರವಾಗಿ ಶತ್ರುಗಳ ವಿರುದ್ಧ ಹೋರಾಟ ನಡೆಸಬೇಕಾಗಲಿದೆ. ಕಾಗದದ ಉದ್ಯಮದವರಿಗೆ  ಲಾಭ.
ADVERTISEMENT
ADVERTISEMENT