ದಿನ ಭವಿಷ್ಯ: ಕಷ್ಟದ ದಿನಗಳು ದೂರಾಗಿ ಸುಖ ನೆಮ್ಮದಿಯ ಭಾವವನ್ನು ಕಾಣಲಿದ್ದೀರಿ
Published 8 ಏಪ್ರಿಲ್ 2026, 22:39 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅನವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಕೆಟ್ಟ ಆಲೋಚನೆಯನ್ನು ತೆಗೆದುಹಾಕಿ. ಕಷ್ಟದ ದಿನಗಳು ದೂರಾಗಿ ಸುಖ ನೆಮ್ಮದಿಯ ಭಾವವನ್ನು ಕಾಣಲಿದ್ದೀರಿ. ಪ್ರವಾಸಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ.
08 ಏಪ್ರಿಲ್ 2026, 22:39 IST
ವೃಷಭ
ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಅನೇಕ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ. ವ್ಯವಹರಿಸುವ ವ್ಯಕ್ತಿಯ ಪೂರ್ವಾಪರ ತಿಳಿದಿರುವುದು ಉತ್ತಮ. ಷೇರು ಬಂಡವಾಳಗಳನ್ನು ಹೆಚ್ಚಿಸಿಕೊಳ್ಳುವಿರಿ.
08 ಏಪ್ರಿಲ್ 2026, 22:39 IST
ಮಿಥುನ
ವಿಭಿನ್ನ ಜನರನ್ನು ಭೇಟಿಯಾಗಲಿರುವುದರಿಂದ ವೃತ್ತಿ ಬದುಕು ಹಾಗೂ ಸಾಮಾಜಿಕ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಧೈರ್ಯದಿಂದ ಕಾರ್ಯಪ್ರವೃತ್ತರಾದಲ್ಲಿ ಇಷ್ಟಾರ್ಥ ಸಿದ್ಧಿಸಲಿದೆ.
08 ಏಪ್ರಿಲ್ 2026, 22:39 IST
ಕರ್ಕಾಟಕ
ನಾನಾ ಬಗೆಯ ಚಿಂತನೆಗಳು ಕಾರ್ಯರೂಪಕ್ಕೆ ಬರಲಿವೆ. ಆದರೆ ಆಕಸ್ಮಿಕವಾಗಿ ಮಾಡುವ ಕೆಲಸದಿಂದ ಧರ್ಮಸಂಕಟದಲ್ಲಿ ಸಿಲುಕಲಿದ್ದೀರಿ. ಮಕ್ಕಳಿಗಾಗಿ ವಸ್ತುಗಳನ್ನು ಖರೀದಿಸುವಿರಿ.
08 ಏಪ್ರಿಲ್ 2026, 22:39 IST
ಸಿಂಹ
ಬದುಕಿನ ಸಾರ ತಿಳಿಯುವುದು ಉತ್ತಮ ವಿಚಾರ. ಕುಟುಂಬದ ಹಲವಾರು ತಾಪತ್ರಯಗಳಿಗೆ ಊರಿನ ಪ್ರಾಜ್ಞರಿಂದ ಪರಿಹಾರವನ್ನು ಪಡೆದುಕೊಳ್ಳುವಿರಿ.
08 ಏಪ್ರಿಲ್ 2026, 22:39 IST
ಕನ್ಯಾ
ಪಾಲುದಾರರ ಜತೆಗಿನ ವ್ಯವಹಾರಗಳಲ್ಲಿ ಅತಿಯಾದ ಪಾರದರ್ಶಕತೆ ಅಪಾಯವನ್ನು ತಂದೊಡ್ಡಬಹುದು. ಮನೋಭಿಲಾಷೆಯಂತೆ ಸಂಘ ಸಂಸ್ಥೆಗಳ ಅಧಿಕಾರ ಪ್ರಾಪ್ತಿ. ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು.
08 ಏಪ್ರಿಲ್ 2026, 22:39 IST
ತುಲಾ
ಮನೆಯಲ್ಲಿನ ಹಿರಿಯ ನಾಗರಿಕರ ವಿಚಾರವಾಗಿ ಸಣ್ಣ ಪುಟ್ಟ ವಿಚಾರಗಳಲ್ಲೂ ನಿಗಾವಹಿಸಿ. ಸಂದರ್ಶನಕಾರರಿಗೆ ಪ್ರಭಾವಿ ವ್ಯಕ್ತಿಗಳನ್ನು ಸಂದರ್ಶಿಸಲು ಅವಕಾಶ ಸಿಗಲಿದೆ.
08 ಏಪ್ರಿಲ್ 2026, 22:39 IST
ವೃಶ್ಚಿಕ
ಸಂಘ ಸಂಸ್ಥೆಗಳ ವಿಚಾರವನ್ನು ಮುಕ್ತವಾಗಿ ಚರ್ಚಿಸಿ ನಂತರದಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತನ್ನಿ. ಅನವಶ್ಯಕವಾಗಿ ಎಳೆದುಕೊಳ್ಳುವ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ.
08 ಏಪ್ರಿಲ್ 2026, 22:39 IST
ಧನು
ನಿಮ್ಮ ಮಾತನ್ನು ಪ್ರಸ್ತುತ ಪಡಿಸುವಾಗ ಅದ್ಭುತ ವಾಗ್ಛರಿ ಎಲ್ಲರನ್ನೂ ನಿಮ್ಮ ಮಾತಿನಲ್ಲಿ ಹಿಡಿದು ನಿಲ್ಲಿಸುತ್ತದೆ. ನೂತನ ಯೋಜನೆಗಳಿಗೆ ಹಣಕಾಸಿನ ಕೊರತೆ ಇರುವುದಿಲ್ಲ.
08 ಏಪ್ರಿಲ್ 2026, 22:39 IST
ಮಕರ
ಚೋರ ಬಾಧೆ ಇರುವ ಕಾರಣದಿಂದ ದೊಡ್ಡ ಮಟ್ಟದ ಹಣ ಅಥವಾ ಬೆಲೆ ಬಾಳುವ ವಸ್ತುಗಳನ್ನು ಹಿಡಿದುಕೊಂಡು ಸಂಚರಿಸುವುದು ಸರಿಯಲ್ಲ. ಉರಿಯುತ್ತಿರುವಂಥ ಬೆಂಕಿಗೆ ಶತ್ರುಗಳು ತುಪ್ಪ ಸುರಿಯಬಹುದು.
08 ಏಪ್ರಿಲ್ 2026, 22:39 IST
ಕುಂಭ
ಗೊಂದಲಗಳಿಗೆ ಒಳಗಾಗದೇ ನಿಲುವು ಸ್ಪಷ್ಟಪಡಿಸಿಕೊಂಡಲ್ಲಿ ಗೆಲುವು ನಿಮ್ಮದಾಗಲಿದೆ. ಬುದ್ಧಿವಂತಿಕೆಯಿಂದ ಕೂಡಿರುವ ಕಾರ್ಯವೈಖರಿ ನಿಮ್ಮದಾಗಿರುತ್ತದೆ.
08 ಏಪ್ರಿಲ್ 2026, 22:39 IST
ಮೀನ
ಹಿಂತಿರುಗಿ ಬರಬೇಕಿದ್ದ ಹಣಕ್ಕೆ ಇರುವ ಅಡಚಣೆಗಳನ್ನು ನಿವಾರಿಸಿಕೊಳ್ಳಿ. ಪ್ರೀತಿ ಪಾತ್ರರಿಂದ ತಾತ್ಕಾಲಿಕವಾಗಿ ದೂರವಾಗುವ ಸಂಭವವಿದೆ. ತಂದೆಯಿಂದ ವಾಹನ ಅಥವಾ ವಸ್ತ್ರಾಭರಣ ಪ್ರಾಪ್ತಿಯಾಗಲಿದೆ.
08 ಏಪ್ರಿಲ್ 2026, 22:39 IST