ಮಂಗಳವಾರ, 9 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: 15 ಮೇ 2026 ಶುಕ್ರವಾರ– ಗುರಿ ತಲುಪಲು ಆಂಜನೇಯನನ್ನು ಆರಾಧಿಸಿ
Published 14 ಮೇ 2026, 18:36 IST
​ಪ್ರಜಾವಾಣಿ ವಾರ್ತೆ
author
ಮೇಷ
ವ್ಯಾಪಾರದಲ್ಲಿ ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ. ಗೃಹ ಬಳಕೆಯ, ಆಲಂಕಾರಿಕ ಸಾಮಗ್ರಿಗಳ ಖರೀದಿ ಮಾಡುವಿರಿ. ಕರ್ತವ್ಯನಿಷ್ಠೆಯಿಂದ ಕಾರ್ಯ ಸಾಧಿಸುವಿರಿ.
ವೃಷಭ
ಕುಟುಂಬಕ್ಕೆ ಸಂಬಂಧಿಸಿದಂತೆ ಶುಭ ವಾರ್ತೆ ಕೇಳುವಿರಿ. ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ ಸಂಬಂಧಗಳಲ್ಲಿ ಸಾಮರಸ್ಯ ಕಾಯ್ದುಕೊಳ್ಳಿರಿ. ಗುರಿ ತಲುಪಲು ಆಂಜನೇಯನನ್ನು ಆರಾಧಿಸಿ.
ಮಿಥುನ
ಒತ್ತಡ ತರುವ ಕೆಲಸಗಳಿಂದ ದೂರ ಉಳಿಯಿರಿ. ಹಣ ಹೂಡಿಕೆಯ ವಿಷಯದಲ್ಲಿ ಅವರಿವರ ಮಾತುಗಳನ್ನು ಕೇಳುವ ಬದಲಾಗಿ ಅನಿಸಿಕೆಯಂತೆ ನಡೆಯಿರಿ.
ಕರ್ಕಾಟಕ
ಉತ್ತಮ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು ಪಡೆಯುವಿರಿ. ಅರ್ಧಕ್ಕೆ ನಿಂತಿದ್ದ ಗೃಹ ನಿರ್ಮಾಣ ಕೆಲಸಗಳು ಮುಂದುವರಿಯಲಿವೆ. ಶತ್ರು ಬಾಧೆ ನಿವಾರಣೆ ಆಗಲಿದೆ.
ಸಿಂಹ
ಜೀವನದಲ್ಲಿ ಸವಾಲಾಗಿ ಬಂದ ಜವಾಬ್ದಾರಿಯಲ್ಲಿ ಜಯ ಸಾಧಿಸಲಿದ್ದೀರಿ. ಬಹಳ ದಿನಗಳ ನಂತರ ಕೆಲಸದಲ್ಲಿ ಸಮಾಧಾನವನ್ನು ಹೊಂದುವಿರಿ. ಹೊಸ ಉದ್ಯೋಗಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು.
ಕನ್ಯಾ
ಲೋಹಗಳ ಕೈಗಾರಿಕೆ ಉದ್ಯಮದವರಿಗೆ ಶ್ರಮದಿಂದ ಅಭಿವೃದ್ದಿ. ಧ್ಯಾನ ಮಾಡುವ ಮೂಲಕ ಏಕಾಗ್ರತೆ ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡಿ. ಗೋ ಸೇವೆಯಿಂದ ನೆಮ್ಮದಿ ಸಂಪಾದಿಸಬಹುದು.
ತುಲಾ
ಕೆಲವು ದಿನಗಳಿಂದ ಮುಂದೂಡಿದ್ದ ವಿದೇಶ ಪ್ರಯಾಣ ಕೈಗೊಳ್ಳುವ ಬಗ್ಗೆ ಯೋಚನೆ ಬರುವುದು. ಹಣಕಾಸಿನ ಬಗ್ಗೆ ಚಿಂತಿಸಬೇಕಿಲ್ಲ. ದಿನದ ಮಧ್ಯದಲ್ಲಿ ಅಚ್ಚರಿ ಸುದ್ದಿ ಕೇಳಲಿರುವಿರಿ.
ವೃಶ್ಚಿಕ
ವ್ಯಾಪಾರ ಸ್ಥಳವನ್ನು ಅಲಂಕಾರಯುತವಾಗಿ ವಿನ್ಯಾಸ ಮಾಡಿದರೆ ಹೆಚ್ಚಿನ ಲಾಭ ಪಡೆಯುವಿರಿ. ನಿಮ್ಮ ಪರವಾಗಿರುವ ಪರಿಸ್ಥಿತಿಯ ಲಾಭ ಪಡೆಯಲು ವಿಫಲರಾಗಬೇಡಿ.
ಧನು
ಮಗನ ಉನ್ನತ ವಿದ್ಯಾಭ್ಯಾಸ ವಿಷಯಗಳನ್ನು ಹಾಗೂ ಅದರಿಂದಾಗುವ ಲಾಭ ನಷ್ಟಗಳ ಬಗ್ಗೆ ಪುನರವಲೋಕನ ಮಾಡಿ. ಆಲಸ್ಯದಿಂದಾಗಿ ಕೆಲಸಗಳನ್ನು ಮುಂದೆ ಹಾಕದೆ ಪೂರ್ಣಗೊಳಿಸಿ.
ಮಕರ
ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಪರಿಣತರ ಸಲಹೆ, ಸೂಚನೆಗಳೊಂದಿಗೆ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ.
ಕುಂಭ
ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲಗಳನ್ನು ಹೊರ ತೆಗೆಯಲು ವೇದಿಕೆ ಸಿಗುವುದು. ಮಾತುಗಳಿಗೆ ವಿರುದ್ಧ ಮಾತನ್ನು ಮಕ್ಕಳಿಂದ ಕೇಳಬೇಕಾಗಲಿದೆ. ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ.
ಮೀನ
ಗಿಡಗಳ ನರ್ಸರಿ ಮಾಡುವವರಿಗೆ ಕೀಟಬಾಧೆ ಉಂಟಾಗುವುದು. ಆಧ್ಯಾತ್ಮಿಕ ವಿಚಾರಗಳ ಪುಸ್ತಕಗಳನ್ನು ಕೊಳ್ಳಲು ಧನ ವಿನಿಯೋಗ ಆಗುವುದು. ಸಹವರ್ತಿಗಳೊಡನೆ ಸಂಯಮದಿಂದ ವರ್ತಿಸಿ.
ADVERTISEMENT
ADVERTISEMENT