ಮಂಗಳವಾರ, 9 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನಿಂದನೆಯ ಭೀತಿ, ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ ಎದುರಾಗಬಹುದು
Published 10 ಏಪ್ರಿಲ್ 2026, 22:36 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೋಭಿಲಾಷೆಗೆ ಪೆಟ್ಟು ಬೀಳುವ ಕಾರಣದಿಂದ ಪ್ರೀತಿ ಪಾತ್ರರು ದೂರವಾಗುವ ಸಂಭವವಿದೆ. ಡಿಸೈನಿಂಗ್ ಕ್ಷೇತ್ರದವರಿಗೆ ಉತ್ತಮ ಅವಕಾಶಗಳು ಲಭಿಸಲಿವೆ. ಅನಗತ್ಯ ಚಿಂತೆ ಮೈಮೇಲೆ ಎಳೆದುಕೊಳ್ಳಬೇಡಿ.
ವೃಷಭ
ಪ್ರಯತ್ನಪೂರ್ವಕವಾಗಿ ಮಗನಿಗೆ ಹೇಳಿದ ವಿದ್ಯಾಮಾರ್ಗದಿಂದ ಮಗನು ಹಿಂದಿರುಗುವ ಸಾಧ್ಯತೆ ಇದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಬೇಕಾದ ಸಂದರ್ಭ ಎದುರಾಗುವುದು.
ಮಿಥುನ
ಸಹೋದರರಲ್ಲಿನ ಭಿನ್ನಾಭಿಪ್ರಾಯಗಳು ಪ್ರೀತಿಯ ಮಾತುಗಳಿಂದ ದೂರಾಗಲಿವೆ. ದಿಟ್ಟ ನಿಲುವನ್ನು ತೆಗೆದುಕೊಳ್ಳಲು ಈ ದಿನ ಸಮಂಜಸವಲ್ಲ. ವಾಹನದಲ್ಲಿ ಚಲಿಸುವಾಗ ಜಾಗ್ರತೆ ಇರಲಿ.
ಕರ್ಕಾಟಕ
ಹಿರಿಯರ ಮಾರ್ಗದರ್ಶನದಂತೆ ಧಾರ್ಮಿಕ ಕೆಲಸ ಮಾಡು ವುದರಿಂದ ಅಡೆತಡೆಗಳು ಇರುವುದಿಲ್ಲ. ಸಂಪ್ರದಾಯಬದ್ಧವಾಗಿ ನಡೆ ಯುವುದು. ಆಸ್ತಿ ಖರೀದಿ ವಿಚಾರದಲ್ಲಿ ಸಮಂಜಸ ನಿರ್ಧಾರ ಕೈಗೊಳ್ಳುವಿರಿ.
ಸಿಂಹ
ಕಾರ್ಮಿಕರ ಸಮಸ್ಯೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿ ಅವರ ಮನಸ್ಸಿನಲ್ಲಿ ಉತ್ತಮ ಸ್ಥಾನ ಸಂಪಾದಿಸಿಕೊಳ್ಳುವಂತೆ ನಿಮ್ಮ ವ್ಯಕ್ತಿತ್ವವಿರಲಿ. ಅವಶ್ಯಕತೆಗೆ ಮೀರಿ ಕೆಲಸ ಮಾಡಬೇಕಾದ ಸಮಸ್ಯೆ ನಿಮಗಿಲ್ಲ.
ಕನ್ಯಾ
ವೃತ್ತಿ ನಿಪುಣತೆಯಿಂದ ಹೆಚ್ಚು ವರಮಾನ ಬರುವ ಕೆಲಸಕ್ಕೆ ಪ್ರಯತ್ನಿಸುವ ಸಲಹೆ ಬರುವುದು. ಜವಾಬ್ದಾರಿ ಹೆಚ್ಚಿರುವುದರಿಂದ ಸೃಜನಾತ್ಮಕ ಕಾರ್ಯ ನಿರ್ವಹಣೆ ಅಗತ್ಯವಾಗುವುದು.
ತುಲಾ
ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿರುವ ನಿಮಗೆ, ಋಣಾತ್ಮಕ ಯೋಚನೆಗಳು ಬರಲಿವೆ. ಸಿಟ್ಟು, ಒರಟುತನ ಏಕಾಂಗಿತನಕ್ಕೆ ಮುಖ್ಯ ಕಾರಣ. ವಾಣಿಜ್ಯೋದ್ಯಮಿಗಳು ಭದ್ರತೆಯ ಬಗ್ಗೆ ಗಮನ ಹರಿಸಿ.
ವೃಶ್ಚಿಕ
ಕೆಲಸ ಕಾರ್ಯಗಳು ವಿಳಂಬ ನೀತಿಯನ್ನು ತೊರೆದು ಸರಾಗವಾಗಿ ನಡೆದು ಆರ್ಥಿಕವಾಗಿ ಮುನ್ನಡೆಯಲಿವೆ. ಸಣ್ಣ-ಪುಟ್ಟ ವಿಷಯಗಳಿಗೂ ಮಹತ್ವ ಕೊಡಬೇಕಾಗುವುದು. ನಿರಂತರ ಕೆಲಸಗಳಿಂದಾಗಿ ವಿಶ್ರಾಂತಿ ಬೇಕೆನಿಸಲಿದೆ.
ಧನು
ಕಾರ್ಯರಂಗದಲ್ಲಿ ಧೈರ್ಯ, ಪ್ರಯತ್ನಬಲ, ಆತ್ಮವಿಶ್ವಾಸದ ಪ್ರವೃತ್ತಿಯಿಂದ ಅಭಿವೃದ್ಧಿ ಹೊಂದಿದರೂ ಜನರ ಕೆಟ್ಟ ದೃಷ್ಟಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ. ಗೆಳೆಯರ ಸೂಕ್ತ ಪ್ರತಿಕ್ರಿಯೆ ದೊರೆಯಲಿದೆ.
ಮಕರ
ಧಾರ್ಮಿಕ ಕ್ಷೇತ್ರದ ಆಡಳಿತ ವ್ಯಕ್ತಿಗೆ ಅಥವಾ ವ್ಯವಸ್ಥಾಪಕರಿಗೆ ನಿಂದನೆಯ ಭೀತಿ, ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ ಎದುರಾಗಬಹುದು. ಕಟ್ಟಡಗಳನ್ನು ಬಾಡಿಗೆಗೆ ಕೊಡುವುದರಿಂದ ಆರ್ಥಿಕ ಅಭಿವೃದ್ಧಿ ಕಂಡುಬರುವುದು.
ಕುಂಭ
ಹೊಸ ವ್ಯಾಪಾರವನ್ನು ಅಥವಾ ಏಜೆನ್ಸಿಯೊಂದನ್ನು ಪ್ರಾರಂಭಿಸುವ ಯೋಚನೆ ಇರುವವರಿಗೆ ಪೂರ್ವ ತಯಾರಿ ನಡೆಸಲು ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿದೆ. ಸೌಹಾರ್ದದಿಂದ ವರ್ತಿಸಿ.
ಮೀನ
ದೈನಂದಿನ ಚಟುವಟಿಕೆಗಳನ್ನು ಹೊರತುಪಡಿಸಿ ವಿಭಿನ್ನ ಪ್ರಯೋಗಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಆಹಾರದಲ್ಲಿನ ಬದಲಾವಣೆಯಿಂದಾಗಿ ದೇಹದಲ್ಲಿನ ಉಷ್ಣವ್ಯಾಧಿ ನಿವಾರಣೆಯಾಗುವುದು.
ADVERTISEMENT
ADVERTISEMENT