ಮಂಗಳವಾರ, 16 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ವಾಕ್ಚಾತುರ್ಯಕ್ಕೆ ಸಾಮಾಜಿಕವಾಗಿ ಗೌರವ ಪ್ರಶಂಸೆ ಸಿಗಲಿದೆ
Published 9 ಮೇ 2026, 23:25 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಹೋದರರಲ್ಲಿನ ಕೋರ್ಟು ವ್ಯವಹಾರಗಳನ್ನು ರಾಜಿ ಮೂಲಕ ಬಗೆ ಹರಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದು ಒಳ್ಳೆಯದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನ ನಡೆಸಲು ಈ ದಿನ ಶುರು ಮಾಡಿದಲ್ಲಿ ಫಲ ನೀಡಲಿದೆ.
ವೃಷಭ
ವ್ಯವಹಾರದಲ್ಲಿನ ಹೆಚ್ಚಿನ ಸಮಸ್ಯೆಗಳಿಗೆ ಈ ದಿನ ಉತ್ತಮ ರೀತಿಯಲ್ಲಿ ಪರಿಹಾರ ದೊರೆಯಲಿದೆ. ಎತ್ತರದಲ್ಲಿ ಹತ್ತಿ ಕೆಲಸ ಮಾಡುವವರು ಹಾಗು ಸಾಹಸಿ ಪ್ರವೃತ್ತಿಯವರು ಜಾಗ್ರತರಾಗಿರಿ. ಸ್ವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಿರಿ.
ಮಿಥುನ
ಜೀವನದಲ್ಲಿ ಬೇರೆಯವರ ಹಿಡಿತದಿಂದ ಬಳಲಿರುವ ನಿಮಗೆ ಆ ಸಮಸ್ಯೆಯಿಂದ ಹೊರಬರುವ ಅವಕಾಶಗಳು ಸಿಗಲಿವೆ. ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವುದು ಕಷ್ಟವಾಗಬಹುದು. ಕುಟುಂಬದಲ್ಲಿ ಸಂತಸ ಇರಲಿದೆ.
ಕರ್ಕಾಟಕ
ನಿಮ್ಮ ದೈನಂದಿನ ಬದುಕನ್ನು ಶಿಸ್ತು ಬದ್ಧವಾದ ರೀತಿಯಲ್ಲಿ ನೆಡೆಸಲು ತೀರ್ಮಾನಿಸುವುದರಿಂದ ಅಭಿವೃದ್ಧಿ ಹೊಂದುವಿರಿ. ಆರ್ಥಿಕವಾಗಿ ಲಾಭ ಪಡೆಯುವುದಕ್ಕೆ ಹೋರಾಟ ನೆಡೆಸಬೇಕಾಗುವ ಪರಿಸ್ಥಿತಿ ಇರಲಿದೆ.
ಸಿಂಹ
ಭವಿಷ್ಯದ ಬಗ್ಗೆ ಅನಗತ್ಯ ಚಿಂತಿಸುವುದನ್ನು ಬಿಟ್ಟು ಹಿರಿಯರ ಹೇಳಿಕೆ ಯಂತೆ ಅಗತ್ಯ ಪೂರೈಸುವ ಕಡೆಗೆ ಹೆಚ್ಚಿನ ಗಮನ ಹರಿಸಿ. ನಿಮ್ಮ ಒತ್ತಡದ ನಡುವೆಯೂ ಇತರರಿಗೆ ಸಹಾಯ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ.
ಕನ್ಯಾ
ಲೇವಾದೇವಿ ವ್ಯವಹಾರ ನೆಡೆಸುವವರಿಗೆ ವ್ಯವಹಾರದಲ್ಲಿ ಸ್ವಲ್ಪ ಪ್ರಮಾಣದ ನಷ್ಟ ಸಂಭವಿಸಿ ಹಿನ್ನಡೆಯನ್ನು ಕಾಣಲಿದೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.
ತುಲಾ
ವಿವಾಹ ಸಂಬಂಧ ವರಾನ್ವೇಷಣೆಗೆ ತೊಡಗುವುದಕ್ಕೆ ಸೂಕ್ತವಾದ ದಿನ, ಸುಲಭವಾಗಿ ಪ್ರಾಪ್ತಿಯಾಗುವುದು. ವ್ಯಾಪಾರ-ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಾದರೂ ಮೂಲಧನಕ್ಕೆ ಮೋಸವಾಗುವುದಿಲ್ಲ.
ವೃಶ್ಚಿಕ
ನಿಮ್ಮ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗುವ ಧರ್ಮಪತ್ನಿಯ ಸಹಕಾರ ಮುನ್ನಡೆಗೆ ಪೂರಕವಾಗಲಿದೆ. ಸಹೋದರರಲ್ಲಿ ಅಥವಾ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ, ವಾದ ವಿವಾದ, ಕಲಹಗಳು ಇಲ್ಲವಾಗುವುದು.
ಧನು
ನೀವಿಂದು ಇನ್ನೊಬ್ಬರ ಅಧೀನದಿಂದ ಹೊರಬಂದು ಸ್ವತಂತ್ರ ಮನೋಭಾವದಿಂದ ಉಲ್ಲಾಸ ಬರಿತವಾಗಿ ಜೀವನ ನಡೆಸುವಂತಾಗಲಿದೆ. ನಿಮ್ಮ ವಾಕ್ಚಾತುರ್ಯಕ್ಕೆ ಸಾಮಾಜಿಕವಾಗಿ ಗೌರವ ಪ್ರಶಂಸೆ ಸಿಗಲಿದೆ.
ಮಕರ
ನಿಮಗೆ ಒಳಿತಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ರೀತಿಯ ಯೋಚನೆಗಳು ಬೇಡ. ವ್ಯವಹಾರದಲ್ಲಿನ ಲಾಭ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಮನೆಯಲ್ಲಿ ಸಮಾರಂಭ ನಡೆಸಲು ತಯಾರಿ ನಡೆಸಬಹುದು.
ಕುಂಭ
ನಿಮ್ಮ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯ ಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ರಜೆಯ ದಿನವಾದರೂ ಅನಿವಾರ್ಯ ಕಾರಣದಿಂದಾಗಿ ಕಾರ್ಯಪ್ರವೃತ್ತರಾಗಬೇಕಾಗುವುದು.
ಮೀನ
ಸಾಂಸಾರಿಕ ಒತ್ತಡದಿಂದ ವೃತ್ತಿಪರವಾದ ಜವಾಬ್ದಾರಿ ತೆಗೆದುಕೊಳ್ಳು ವುದು ಕಷ್ಟವಾಗುತ್ತದೆ. ನಿಮ್ಮ ಕ್ರಾಂತಿಕಾರಿ ಸ್ವಭಾವವು ಈ ದಿನ ಹೆಚ್ಚಿನ ಲಾಭವನ್ನು ತರಲಿದೆ. ಹೊಸ ವಾಹನ ಖರೀದಿಸುವ ಯೋಗ ಬರುವುದು.
ADVERTISEMENT
ADVERTISEMENT