ದಿನ ಭವಿಷ್ಯ: ಯಾವುದೇ ತರದ ಒತ್ತಡಕ್ಕೆ ಮಣಿಯದೆ ಮುನ್ನುಗ್ಗಿ, ಎಲ್ಲವು ಜಯ ತರಲಿದೆ
Published 1 ಜೂನ್ 2026, 23:37 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಿದ್ಯಾರ್ಥಿ ಜೀವನದಲ್ಲಿರುವವರಿಗೆ ಪ್ರಯತ್ನಗಳು ವ್ಯರ್ಥವಾಗಿಲ್ಲ ಎಂಬುದು ಅರಿವಾಗುವುದು. ಒಳಾಂಗಣ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಉಂಟಾಗಲಿದೆ. ಹಣಕಾಸಿನಲ್ಲಿ ಹಿಡಿತವಿರಲಿ.
ವೃಷಭ
ಹೂವಿನ ಬೆಳೆಗಾರರಿಗೆ, ಹೈನು ಉದ್ಯಮಿಗಳಿಗೆ ಲಾಭವಿದ್ದರೂ ಮಧ್ಯವರ್ತಿಗಳ ಕಿರಿಕಿರಿ ತಪ್ಪಿದ್ದಲ್ಲ. ವ್ಯಾಪಾರಿಗಳು ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಬಂಡವಾಳ ಹೂಡಬಹುದು.
ಮಿಥುನ
ಸೌಜನ್ಯ, ಸರಳತೆ ಹುದ್ದೆಗೆ ಮೆರುಗು ತರಲಿದೆ. ವೃಥಾ ಕಾಲಹರಣ ಮಾಡಿದರೆ ನಷ್ಟ ಅನುಭವಿಸುವಿರಿ. ಉದ್ದಟತನ ಸೋಲಿಗೆ ಮುಖ್ಯ ಕಾರಣವಾಗಲಿದೆ. ಮಹಾಗಣಪತಿಯನ್ನು ಆರಾಧಿಸಿ ಶುಭವಾಗುತ್ತದೆ.
ಕರ್ಕಾಟಕ
ಜವಾಬ್ದಾರಿಯುತ ಕಾರ್ಯಗಳ ಬಗ್ಗೆ ಗಮನವಿರಲಿ. ಸಂಪಾದನೆಯನ್ನು ನೋಡಿದ ಕೆಲವರು ಮತ್ಸರ ಪಡುವಂತಾಗುತ್ತದೆ. ಬೆಲೆಬಾಳುವ ವಸ್ತು ಕಳೆದುಹೋಗುವ ಸಾಧ್ಯತೆಯಿದೆ.
ಸಿಂಹ
ದಾಯಾದಿಗಳ ಮಧ್ಯೆ ನೀವಂದುಕೊಂಡಷ್ಟು ಪರಿಸ್ಥಿತಿ ಕೆಟ್ಟದಾಗಿ ಇರುವುದಿಲ್ಲ. ಸರ್ಕಾರಿ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಸ್ವಯಂ ಶಕ್ತಿಯು ಹಿತೈಷಿಗಳ ಕಣ್ಣನ್ನು ಕೆಂಪಾಗಿಸುತ್ತದೆ.
ಕನ್ಯಾ
ಹಣಕಾಸು ಸಂಸ್ಥೆಗೆ ಪಾಲುದಾರರಾಗುವುದು ದಾರಿಯಲ್ಲಿ ಹೋಗುವ ಸಮಸ್ಯೆಯನ್ನು ಮನೆಗೆ ಕರೆತಂದಂತೆ ಆಗುತ್ತದೆ. ಹೊಲದ ಅಥವಾ ಜಮೀನಿನ ಕೆಲಸಕ್ಕೆ ಆಳನ್ನು ಗೊತ್ತು ಮಾಡಿಕೊಳ್ಳುವುದು ಉತ್ತಮ.
ತುಲಾ
ಅಧಿಕಾರಸ್ಥರು ಹಾಗೂ ಹಿರಿಯ ನೌಕರರ ಜತೆ ಸ್ನೇಹ ಸಂಬಂಧ ಹೆಚ್ಚಿ ಉಲ್ಲಾಸ ಮೂಡಲಿದೆ. ಉದ್ಯೋಗದ ಸಂದರ್ಶನದಲ್ಲಿ ಧೈರ್ಯದಿಂದ ಮುನ್ನುಗಿ, ಶುಭಫಲವನ್ನು ಹೊಂದುವಿರಿ.
ವೃಶ್ಚಿಕ
ಆಲೋಚಿಸಿದ ರೀತಿಯಲ್ಲಿ ಕೆಲಸಗಳೆಲ್ಲವೂ ನಡೆದು ನೆಮ್ಮದಿ ಕಾಣುವಿರಿ. ಆಲಸ್ಯತನ ಕುಟುಂಬದ ಅಭಿವೃದ್ಧಿಯನ್ನು ಹಾಳು ಮಾಡುತ್ತದೆ. ಅವಶ್ಯಕತೆಗಿಂತ ಹೆಚ್ಚಾಗಿ ಖರ್ಚುಗಳನ್ನು ಮಾಡಬೇಡಿ.
ಧನು
ಮನೆಯ ವ್ಯವಹಾರಗಳಲ್ಲಿ ಇದ್ದ ಹಲವಾರು ತೊಡಕುಗಳು ಒಮ್ಮತದಿಂದ ದೂರಾಗಲಿವೆ. ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿದೆ. ಬಯಸಿದವರು ದೂರಾಗುವ ಆತಂಕ ಎದುರಾಗಬಹುದು.
ಮಕರ
ವಿದ್ಯಾರ್ಥಿಗಳು ಕೇವಲ ಪಠ್ಯದ ವಿಚಾರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ಸಾಹವನ್ನು ತೋರುವುದರಿಂದ ಮನೋಲ್ಲಾಸ ಹೆಚ್ಚುವುದು. ಸ್ವಾರ್ಥಕ್ಕಾಗಿ ಕಾನೂನಿಗೆ ವಿರುದ್ಧವಾದ ಕೆಲಸವನ್ನು ಮಾಡದಿರಿ.
ಕುಂಭ
ಕಿರುತೆರೆ ಕಲಾವಿದರಿಗೆ ಹಿರಿಯರಿಂದ ಪಡೆದ ಮಾರ್ಗದರ್ಶನ ಉಪಯೋಗಕ್ಕೆ ಬರುವುದು. ಆರೋಗ್ಯ ಸ್ಥಿತಿ ಉತ್ತಮವಾಗಿ ದಾಂಪತ್ಯ ಜೀವನವು ಸುಖಮಯವಾಗಲಿದೆ. ತಾಮ್ರದ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.
ಮೀನ
ಕೆಲಸ ಪ್ರಾರಂಭಕ್ಕೆ ಆತ್ಮಸ್ಥೈರ್ಯ ಬಹಳ ಮುಖ್ಯ, ಯಾವುದೇ ತರದ ಒತ್ತಡಕ್ಕೆ ಮಣಿಯದೆ ಮುನ್ನುಗ್ಗಿ, ಎಲ್ಲವು ಜಯ ತರಲಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗ್ರತೆ ಅನಿವಾರ್ಯ.