ದಿನ ಭವಿಷ್ಯ: ನಿಮ್ಮ ಜೀವನದಲ್ಲಿ ಆಶಾದಾಯಕ ಭಾವನೆಗಳಿಂದ ನೆಮ್ಮದಿಯಾಗಲಿದೆ
Published 2 ಜೂನ್ 2026, 23:35 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೂತನ ವ್ಯಕ್ತಿಯ ಪರಿಚಯವು ನಿಮ್ಮ ಕೆಲಸಕ್ಕೆ ಅನುಕೂಲವನ್ನು ಉಂಟು ಮಾಡುತ್ತದೆ. ಮಕ್ಕಳ ವಿಚಾರವಾಗಿ ಇಂದು ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿದೆಯೇ ಎಂದು ಇನ್ನೊಮ್ಮೆ ವಿಮರ್ಶಿಸಿಕೊಳ್ಳಿರಿ.
ವೃಷಭ
ಎಷ್ಟೇ ಚಾಣಾಕ್ಷತನ ತೋರಿದರೂ ಮಾತುಗಾರಿಕೆಯಲ್ಲಿ ನೀವು ಈ ದಿನ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ದಿನ ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಹೆಚ್ಚಿನ ಆದಾಯ ಉಂಟಾಗಲಿದೆ.
ಮಿಥುನ
ನಾಳೆಯ ಕೆಲಸಗಳ ಬಗ್ಗೆ ಇಂದೇ ತಯಾರಿ ನಡೆಸುವುದು ಯಶಸ್ಸಿಗೆ ಸಹಾಯವಾಗುವುದು. ಭಾರಿ ಕೆಲಸಕ್ಕೆ ಕೈಹಾಕಿದ ಪರಿಣಾಮದಿಂದಾಗಿ
ಸಣ್ಣ-ಪುಟ್ಟ ಅನಾರೋಗ್ಯ ದೇಹಾಯಾಸ ಉಂಟಾಗಬಹುದು.
ಕರ್ಕಾಟಕ
ಸ್ವಂತ ಉದ್ಯಮದಲ್ಲಿರುವವರು ತಮ್ಮ ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಉತ್ಸಾಹವನ್ನು ತೋರಿ ಅದರಲ್ಲಿ ಸಫಲತೆಹೊಂದಬಹುದು. ಕೆಲಸದಲ್ಲಿ ಧನಾತ್ಮಕ ಬದಲಾವಣೆಯಿಂದಾಗಿ ಸಂತಸ.
ಸಿಂಹ
ಪತ್ರಿಕಾ ವರದಿಗಾರರಿಗೆ ಈ ದಿನವು ಬಹಳ ವಿಶೇಷ ದಿನವಾಗಿ ಜೀವನದಲ್ಲಿ ಸದಾಕಾಲ ನೆನಪಿರುವಂತೆ ಆಗಬಹುದು. ಸರ್ಕಾರಿ ವೃತ್ತಿಪರವಾಗಿ ಅಪಾರ ಗಮನಹರಿಸಿದಲ್ಲಿ ಬಹುನಿರೀಕ್ಷಿತವಾದ ಬೆಳವಣಿಗೆಗಳು ಇರುತ್ತವೆ.
ಕನ್ಯಾ
ಕೈ ತಪ್ಪಿ ಹೋದ ಕಾರ್ಯಗಳಿಂದ ಆಗುವ ಲಾಭ ನಷ್ಟದ ಮೌಲ್ಯಮಾಪನ ಮಾಡುತ್ತ ಸುಮ್ಮನೆ ಕೂರುವುದರಲ್ಲಿ ಯಾವುದೇ ಪ್ರಯೋಜನ ಇರುವುದಿಲ್ಲ. ನಿಮ್ಮ ಕರ್ತವ್ಯದಲ್ಲಿನ ಕೊರತೆಯು ಮೇಲಧಿಕಾರಿಗಳಿಗೆ ಎದ್ದು ಕಾಣಲಿದೆ.
ತುಲಾ
ನಿಮ್ಮ ಒಡಹುಟ್ಟಿದವರ ಸಹಾಯ ಸಹಕಾರದಿಂದ ಮಾನಸಿಕ ನೆಮ್ಮದಿ ಹಾಗೂ ಸಂಸಾರದಲ್ಲಿ ಸಮತೋಲನ ಪಡೆಯುವಿರಿ. ಕುಲ ದೇವರ ದರ್ಶನ ಅಥವಾ ಕ್ಷೇತ್ರಕ್ಕೆ ಕಾಣಿಕೆ ಕಳುಹಿಸಿದ ನಂತರ ಈ ದಿನವನ್ನು ಪ್ರಾರಂಭಿಸಿ
ವೃಶ್ಚಿಕ
ಸೋಮಾರಿತನ ದೂರವಾಗಿ ಕೈಹಿಡಿದ ಕಾರ್ಯ ಸಾಧನೆ ಅಂತಿಮ ಹಂತ ತಲುಪಲಿದೆ. ನಿಮ್ಮ ಬಯಕೆಗಳು ಸುಲಭವಾಗಿ ಈಡೇರುವುದು. ಸದಾ ಕಾಲದಲ್ಲಿ ಸಕಾರಾತ್ಮಕ ನಡವಳಿಕೆಗಳಿಂದಾಗಿ ಲಾಭ ಕಂಡು ಕೊಳ್ಳಲಿದ್ದೀರಿ.
ಧನು
ಬೇಸತ್ತು ಹೋಗಿದ್ದ ನಿಮ್ಮ ಜೀವನದಲ್ಲಿ ಆಶಾದಾಯಕ ಭಾವನೆಗಳಿಂದ ನೆಮ್ಮದಿಯಾಗಲಿದೆ. ದೃಷ್ಟಿದೋಷ ಸರಿಪಡಿಸಿಕೊಳ್ಳಲು ವೈದ್ಯರನ್ನು ಭೇಟಿಮಾಡಿ. ಸಗಟು ವ್ಯಾಪಾರಿಗಳಿಗೆ ಸಣ್ಣ ಸಮಸ್ಯೆ ಎದುರಾಗಬಹುದು.
ಮಕರ
ನಿಮ್ಮ ಮಾತುಗಾರಿಕೆಯಿಂದಾಗಿ ಸಹೋದರರಿಗೆ ನೋವಾಗಬಹುದು ಅಥವಾ ಕಲಹ ಉಂಟಾಗಬಹುದು. ಈ ದಿನ ನಿಮ್ಮ ಮೊದಲ ಆದ್ಯತೆ ವೃತ್ತಿಪರ ಕೆಲಸಗಳ ಬಗೆಗೆ ಮಾತ್ರ ಇರಲಿ. ಸ್ವಂತ ವ್ಯಾಪಾರದ ಯೋಚನೆ ಮಾಡಬಹುದು.
ಕುಂಭ
ನೀವು ಅಧಿಕಾರಿಗಳಾಗಿದ್ದಲ್ಲಿ ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವ ನಿಮ್ಮ ನಿರ್ಧಾರವು ಬಹಳ ಅನುಕೂಲಕರವಾಗುವುದು. ನೀವು ಆಡಿದ ಮಾತುಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಸೋಲಬೇಕಾಗುತ್ತದೆ.
ಮೀನ
ಅನಾರೋಗ್ಯದ ಕಾರಣದಿಂದಾಗಿ ಹಣಕಾಸಿನ ಅನಿವಾರ್ಯತೆಯನ್ನು
ಎದುರಿಸಬೇಕಾಗಲಿದೆ. ಜವಳಿ ವ್ಯಾಪಾರಿಗಳಿಗೆ ಅಧಿಕ ವ್ಯಾಪಾರವಿರುವುದು. ಆರಕ್ಷಕರು ಅನಿವಾರ್ಯವಾಗಿ ಬಿಡುವಿಲ್ಲದ ಕೆಲಸ ಮಾಡಬೇಕಾಗಬಹುದು.