ದಿನ ಭವಿಷ್ಯ: ಈ ರಾಶಿಯವರ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗುವ ಲಕ್ಷಣವಿದೆ
Published 17 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜನ ಸಂಪರ್ಕ ಮತ್ತು ಆರ್ಥಿಕ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯಲಿವೆ. ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದರೂ, ಸುಲಭವಾಗಿ ಬಿಡುವುದಿಲ್ಲ.
ವೃಷಭ
ಎಷ್ಟೇ ಪರಿಶ್ರಮವಿದ್ದರೂ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗುವ ಲಕ್ಷಣವಿದೆ. ಯಶಸ್ಸನ್ನು ಹೊಂದಲು ಅನುಸರಿಸುತ್ತಿರುವ ಹಳೆ ದಾರಿ ಬಿಟ್ಟು ಹೊಸ ಮಾರ್ಗ ಕಂಡುಹಿಡಿದುಕೊಳ್ಳಬೇಕು.
ಮಿಥುನ
ಸಂತೋಷದಲ್ಲಿ ಮೈಮರೆಯುವಿಕೆಯಿಂದ ಗಮನ ಕಡಿಮೆಯಾಗಿ ಎಡವಟ್ಟುಗಳು ಆಗಬಹುದು. ಉದ್ಯೋಗದಲ್ಲಿ ಬದಲಾವಣೆ ಸಂಭವವಿದೆ. ದುರ್ಗಾದೇವಿಗೆ ಶರಣಾಗುವುದರಿಂದ ಶುಭ ಸಂತೋಷ ಪ್ರಾಪ್ತಿ.
ಕರ್ಕಾಟಕ
ಮಕ್ಕಳ ವ್ಯಾಸಂಗದ ಬಗ್ಗೆ ಸಂಬಂಧಿಕರಲ್ಲಿ ಚರ್ಚೆ ನಡೆಸುವುದು ಒಳಿತು. ಕೆಲವು ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸೂಕ್ತ ದಿನ.
ಸಿಂಹ
ವಿವಾದ ಗೊಡವೆಗಳಿಂದ ದೂರ ಉಳಿಯುವುದರಿಂದ ಗೌರವವನ್ನು ಕಾಪಾಡಿಕೊಳ್ಳಬಹುದು. ಬೇಗ ಗುರಿ ತಲುಪಬೇಕೆನ್ನುವ ಹಂಬಲವು ಫಲಿತಾಂಶಕ್ಕೆ ಅಡ್ಡಿ ಮಾಡಬಹುದು.
ಕನ್ಯಾ
ಕಾರ್ಯದೊತ್ತಡ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳ ಉಂಟಾಗಲಿದೆ. ಬೆಳ್ಳಿ ವಸ್ತುಗಳ ಮಾರಾಟ ಮಾಡುವವರು ಆದಾಯವನ್ನು ಗಳಿಸುವಿರಿ.
ತುಲಾ
ಮಕ್ಕಳು ಆಡುವ ತಿರಸ್ಕಾರದ ಮಾತುಗಳು ಬಹಳವಾಗಿ ಬೇಸರಕ್ಕೆ ಒಳಗಾಗುವಂತೆ ಮಾಡಲಿದೆ. ಸಂದಿಗ್ಧ ಪರಿಸ್ಥಿತಿಯನ್ನು ಮಾರ್ಗದರ್ಶಕರ ಸಲಹೆ ಪಡೆದು ನಿಭಾಯಿಸಿ.
ವೃಶ್ಚಿಕ
ಅನವಶ್ಯಕ ಪ್ರಯಾಣ ಖರ್ಚು-ವೆಚ್ಚಗಳನ್ನು ಹೆಚ್ಚು ಮಾಡಲಿದ್ದು, ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ವಸ್ತ್ರ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಇರಲಿದೆ.
ಧನು
ಸಮೀಪವರ್ತಿಗಳ ಸಲಹೆ ಸಹಕಾರದಿಂದ ವ್ಯಾಪಾರ ವಹಿವಾಟುಗಳಲ್ಲಿನ ಆದಾಯದಲ್ಲಿ ಗಣನೀಯ ಏರಿಕೆ ಉಂಟಾಗಲಿದೆ. ಹೊಸ ಕಟ್ಟಡ ನಿರ್ಮಾಣ ಕಾರ್ಯಗಳ ಒಪ್ಪಂದ ಏರ್ಪಡಲಿದೆ.
ಮಕರ
ಅಧಿಕಾರಸ್ಥರು ಹಾಗೂ ಹಿರಿಯ ನೌಕರರ ಜತೆ ಸ್ನೇಹ ಸಂಬಂಧ ಹೆಚ್ಚಾಗಿ ವೃತ್ತಿಯಲ್ಲಿ ನವ ಉಲ್ಲಾಸ ಮೂಡಲಿದೆ. ಹೊಣೆಗಾರಿಕೆಯನ್ನು ಹೊರಲು ಸಿದ್ಧರಾಗಿರುವಿರಿ.
ಕುಂಭ
ಧಾರ್ಮಿಕವಾಗಿ ಇರುವವರಿಗೆ, ವೇದಾಧ್ಯಯನದಲ್ಲಿರುವವರಿಗೆ ಮಂತ್ರಸಿದ್ಧಿ ಆಗಬಹುದು. ಜೀವನಶೈಲಿಯಲ್ಲಿ ಧಾರ್ಮಿಕತೆ ಅಳವಡಿಸಿಕೊಳ್ಳುವಿರಿ. ಇತರರ ಸಹಾಯದಿಂದ ಎಲ್ಲವನ್ನೂ ಸಂಪಾದಿಸಿಕೊಳ್ಳಬೇಕಾಗುತ್ತದೆ.
ಮೀನ
ಆರೋಗ್ಯದ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಪರಿಹರಿಸುವ ಬಗೆಯನ್ನು ಕಂಡುಹಿಡಿದರೆ ಉತ್ತಮ. ದೇವಿ ಕೃಪಾಕಟಾಕ್ಷ ನಿಮ್ಮಲ್ಲಿ ಇರುವುದರಿಂದ ಕಾರ್ಯದಲ್ಲಿ ತೊಂದರೆ ಇರುವುದಿಲ್ಲ.