ದಿನ ಭವಿಷ್ಯ: ಈ ರಾಶಿಯವರಿಗೆ ಶತ್ರುಗಳ ಬಾಧೆ ದೂರಾಗಿ ಯೋಜನೆಗಳು ಈಡೇರಲಿದೆ
Published 30 ಮೇ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯೋಗ್ಯತೆ ಇಲ್ಲದ ವ್ಯಕ್ತಿಗೆ ಉದಾರತೆ ತೋರುವುದರಿಂದ ನಿಮ್ಮ ದಡ್ಡತನದ ಪ್ರದರ್ಶನ ಆಗುವುದು. ಕಲಿತ ವಿದ್ಯೆಯನ್ನು ಬಳಸಿಕೊಳ್ಳುವ ಬಗ್ಗೆ ನಿಮ್ಮ ಪ್ರಯತ್ನವಿರಲಿ. ಪತ್ರಿಕೋದ್ಯಮದವರಿಗೆ ಕೆಲಸದ ಹೊರೆ ಹೆಚ್ಚುವುದು.
ವೃಷಭ
ಸಾಂಸಾರಿಕ ಸಮಸ್ಯೆಗಳಿಗೆ ಮನೆಯ ಹೊರಗಿನವರ ಬಳಿ ಸಲಹೆ ಕೇಳುವುದು ನಿಮ್ಮ ಪ್ರತಿಷ್ಠೆಗ ದಕ್ಕೆ ತರುವುದರಿಂದ ನೀವೇ ಅದಕ್ಕೆ ಪರಿಹಾರ ಹುಡುಕಿಕೊಳ್ಳಿ. ನಿಮ್ಮ ಕಾರ್ಯತಂತ್ರಗಳಿಗೆ ಎದುರಾಳಿಯ ಸೋಲು ಖಚಿತ.
ಮಿಥುನ
ಔಷಧ ವ್ಯಾಪಾರಿಗಳಿಗೆ ಆದಾಯದ ಉತ್ತಮವಾದ ಇನ್ನೊಂದು ಮೂಲ ಸಿಗುವಂತಾಗುವುದು. ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡ ಹೇರಬೇಡಿ. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರಿಗಳ ಭಯ ಉಂಟಾಗಲಿದೆ.
ಕರ್ಕಾಟಕ
ನೀವು ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಫಲ ಪುಷ್ಪಗಳ ವ್ಯಾಪಾರಿಗಳಿಗೆ ಅಧಿಕ ಲಾಭ ಇರುವುದು. ಆರೋಗ್ಯದಲ್ಲಿ ಏರುಪೇರಾದರೆ ಆತಂಕ ಬೇಡ.
ಸಿಂಹ
ಸಮಯಕ್ಕೆ ಸರಿಯಾದ ಆಹಾರ ಸೇವನೆಯಿಂದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವುದೇ ವಾದ ವಿವಾದಗಳು ನಡೆದರೂ ಈ ದಿನದ ನಿಮ್ಮ ಕಾರ್ಯ ಸಾಧನೆಗೆ ಅಡ್ಡಿಯಾಗದು. ಖರ್ಚಿನಲ್ಲಿ ಹಿಡಿತವಿರಲಿ.
ಕನ್ಯಾ
ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆಗಳು ಅನುಭವಕ್ಕೆ ಬಂದಲ್ಲಿ ತಡಮಾಡದೆ ವೈದ್ಯರನ್ನು ಭೇಟಿ ಮಾಡಿ. ರೇಷ್ಮೆ ಉತ್ಪಾದಕರು ಆದಾಯದಲ್ಲಿ ಸುಧಾರಣೆ ಕಾಣುವಿರಿ. ಕಪ್ಪು ವಸ್ತ್ರ ಈ ದಿನ ಶುಭವನ್ನು ಉಂಟುಮಾಡಲಿದೆ.
ತುಲಾ
ಹಿಂದಿನ ನಿಮ್ಮ ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ ಮರಳಿ ಪ್ರಯತ್ನ ಮಾಡುವುದರಿಂದ ಜಯಶಾಲಿಯಾಗಬಹುದು. ಶತ್ರುಗಳ ಬಾಧೆ ದೂರಾಗಿ ನಿಮ್ಮ ಯೋಜನೆಗಳು ಈಡೇರಲಿದೆ. ಕಾರ್ಮಿಕ ವರ್ಗದ ಬೇಡಿಕೆ ಈಡೇರಲಿದೆ.
ವೃಶ್ಚಿಕ
ದಲ್ಲಾಳಿಗಳಿಗೆ ಮತ್ತು ವೃತ್ತಿವ್ಯಾಪಾರಗಳಲ್ಲಿ ಮುನ್ನುಗ್ಗಿ ಕೆಲಸ ಮಾಡುವವರಿಗೆ ನಿಮ್ಮ ಕನಸುಗಳು ನನಸಾಗಲಿದೆ. ಹಕ್ಕಿಯಂತೆ ಹಾರಾಡುವ ಆಸೆ ತಪ್ಪಲ್ಲ, ಆದರೆ ಸಾಧಕಬಾಧಕಗಳನ್ನು ಅರಿತುಕೊಂಡು ಹೆಜ್ಜೆ ಇಟ್ಟರೆ ಕ್ಷೇಮ.
ಧನು
ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ದಿನ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಸ್ವಾದಿಷ್ಟ ಭೋಜನದ ಯೋಗ ಈ ದಿನ ನಿಮಗೆ ಪ್ರಾಪ್ತವಾಗುವುದು. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಿರಿ.
ಮಕರ
ದೇವರ ದಯೆಯಿಂದ ಮತ್ತು ನಿಮಗಿರುವ ಜನಬಲದಿಂದಾಗಿ ಕೆಲಸದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಿರಿ. ಹರಿತವಾದ ವಸ್ತುಗಳಿಂದ ಅನಾಹುತಗಳಾಗುವ ಸಂಭವವಿದೆ ಎಚ್ಚರಿಕೆಯಿಂದ ಇರುವುದು ಉತ್ತಮ.
ಕುಂಭ
ಯಾವುದೇ ಒಪ್ಪಂದಗಳಿಗೆ ಒಪ್ಪಿಕೊಳ್ಳುವ ಮೊದಲು ಕೂಲಂಕಶವಾಗಿ ಯೋಚಿಸಿ ತೀರ್ಮಾನಿಸಿ. ಇನ್ನೊಬ್ಬರನ್ನು ಹೀಯಾಳಿಸುವುದು ಅಥವಾ ಅಪಹಾಸ್ಯ ಮಾಡುವುದು ನಿಮ್ಮ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ.
ಮೀನ
ಮನೆಯ ಹಿರಿಯರೊಬ್ಬರ ಮಧ್ಯಸ್ಥಿಕೆಯಿಂದ ನೆಂಟಸ್ತಿಕೆಯಲ್ಲಿಯೇ ನಿಮಗೆ ಉತ್ತಮವಾದ ಸಂಬಂಧವು ಕೂಡಿ ಬರುವುದು. ಈ ದಿನದ ನಿಮ್ಮ ಕೆಲಸ ಕಾರ್ಯಗಳು ನಿಮ್ಮ ಯೋಚನೆಯ ವಿರುದ್ಧವಾಗಿ ನೆಡೆಯಲಿದೆ.