ಗುರುವಾರ, 11 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಮದುವೆ ವಿಚಾರ ಪ್ರಸ್ತಾಪಕ್ಕೆ ಬರಲಿದೆ
Published 29 ಏಪ್ರಿಲ್ 2026, 1:02 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬುದ್ಧಿಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳುವುದು ಅಭಿವೃದ್ಧಿಗೆ ಅನುಕೂಲ. ಸಾಧ್ಯವಾದರೆ ಆಪ್ತರ ಕಷ್ಟಗಳ ಕಡೆಗೆ ಗಮನಹರಿಸಿ. ಮನೆಯ ಹೆಣ್ಣು ಮಕ್ಕಳ ಮದುವೆ ವಿಚಾರ ಪ್ರಸ್ತಾಪಕ್ಕೆ ಬರಲಿದೆ.
ವೃಷಭ
ಪದವೀಧರರಿಗೆ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಸ್ಥಳ ಲಭಿಸಲಿದೆ. ಅಧ್ಯಯನಕ್ಕೆ ಗಣ್ಯರ ಪ್ರೋತ್ಸಾಹ ದೊರೆಯಲಿದೆ. ಹಿರಿಯರ ಅನುಭವದ ಸಲಹೆಯನ್ನು ನಿರ್ಲಕ್ಷಿಸುವುದು ಮೂರ್ಖತನದ ಪ್ರದರ್ಶನವಾಗುತ್ತದೆ.
ಮಿಥುನ
ಐ.ಟಿ. ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ. ವರಮಾನ ಹೆಚ್ಚಳದ ಸಂಭವವು ಇರುವುದು. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿ.
ಕರ್ಕಾಟಕ
ಗಾಬರಿಗೊಳ್ಳದೇ ಮೇಲಧಿಕಾರಿಗೆ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸದೆ ನಿಮ್ಮ ಮನದ ಭಾವನೆಯನ್ನು ಸ್ಪಷ್ಟವಾಗಿ ತೆರೆದಿಡಿ. ಹೊಸದನ್ನು ಕಲಿಯುವ ಉತ್ಸಾಹ ಮೂಡಲಿದೆ.
ಸಿಂಹ
ಹೊಟ್ಟೆಯುಬ್ಬರ ಅಥವಾ ಉದರಕ್ಕೆ ಸಂಬಂಧಿಸಿದ ಯಾವುದೇ ತೊಂದರೆಯಾದರೂ ಮನೆಮದ್ದನ್ನು ಬಳಸಿ. ವೃತ್ತಿರಂಗದಲ್ಲಿ ನಕಾರಾತ್ಮಕ ಬೆಳವಣಿಗೆ ಮನಸ್ಸಿಗೆ ಕಳವಳ ಉಂಟುಮಾಡಲಿದೆ.
ಕನ್ಯಾ
ಅಭಿವೃದ್ದಿ ಕೆಲಸಗಳಿಗೆ ಮಹತ್ವ ನೀಡಿ ಅವುಗಳನ್ನು ಕಾರ್ಯಗತಗೊಳಿಸಿರಿ. ಕೆಲಸದಲ್ಲಿ ಬಹಳ ದಿನಗಳಿಂದ ಇದ್ದ ಸಮಸ್ಯೆ ಬಗೆಹರಿಯುವುದು. ಅಗ್ನಿಯಿಂದ ಅಪಾಯವಾಗುವ ಭೀತಿ ಇರುವುದು.
ತುಲಾ
ವ್ಯವಹಾರದಲ್ಲಿ ಎದುರಾಗುವ ಸಮಸ್ಯೆಗೆ ಸೋಮಾರಿತನವೇ ಮೂಲಕಾರಣ. ಎದುರಾಗಿರುವ ಕೌಟುಂಬಿಕ ಸಂದಿಗ್ಧ ಪರಿಸ್ಥಿತಿಯನ್ನು ಮಾರ್ಗದರ್ಶಕರ ಸಲಹೆ ಪಡೆದು ಎದುರಿಸಿ.
ವೃಶ್ಚಿಕ
ಮನೆಯಲ್ಲಿ ನಡೆದ ಅಹಿತಕರ ಘಟನೆಯಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ಹಾನಿಯುಂಟಾಗಲಿದೆ. ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸುವಿರಿ.
ಧನು
ಕಾರ್ಮಿಕರು ಕೊಡುವ ಸಲಹೆಯಿಂದ ಅನುಕೂಲವಾಗುವ ಸನ್ನಿವೇಶ ಒದಗಿ ಬರಲಿದೆ. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶಗಳು ಲಭಿಸಲಿವೆ. ಮನಸ್ಸಿನ ನಾಗಾಲೋಟಕ್ಕೆ ತಕ್ಷಣ ಕಡಿವಾಣ ಹಾಕುವುದು ಉತ್ತಮ.
ಮಕರ
ಚಿನ್ನಾಭರಣದ ಮೇಲಿನ ಅಥವಾ ಭೂ ಮೇಲಿನ ಹೂಡಿಕೆ ಲಾಭವನ್ನು ಉಂಟುಮಾಡುತ್ತದೆ. ಅನಿರೀಕ್ಷಿತವಾಗಿ ಶತ್ರುಗಳ ಬಣ್ಣ ಬಯಲಾಗುವುದು ಸಂತೋಷಕ್ಕೆ ಕಾರಣವಾಗುತ್ತದೆ. ಔಷಧಿ ವ್ಯಾಪಾರಿಗಳಿಗೆ ಲಾಭವಾಗುವುದು.
ಕುಂಭ
ಕೆಲಸದಲ್ಲಿ ಬಹಳ ಅವಸರ ತೋರುವ ಸ್ವಭಾವದಿಂದ ತೊಂದರೆ ಆಗದಂತೆ ಎಚ್ಚರವಹಿಸಿ. ತಾಯಿಯ ಸಲಹೆಯಿಂದಾಗಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಗೊಂದಲಗಳು ನಿವಾರಣೆಯಾಗುತ್ತವೆ.
ಮೀನ
ದೊರೆತಿರುವ ಖ್ಯಾತಿಯನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಿ. ಹೊಸ ಯೋಜನೆಯನ್ನು ಪ್ರಾರಂಭಿಸುವ ಬಗ್ಗೆ ಸರಿಯಾಗಿ ಯೋಚಿಸಿ ತೀರ್ಮಾನಿಸಿ. ಕುಟುಂಬದಲ್ಲಿ ಸೌಖ್ಯವಿದ್ದು ಮನರಂಜನೆ ಪಡೆಯುವಿರಿ.
ADVERTISEMENT
ADVERTISEMENT