ಸಿಂಹ
ಆರೋಗ್ಯ ಹಾಗೂ ದೈಹಿಕ ದಾರ್ಢ್ಯತೆ ಉತ್ತಮವಾಗಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಲಿದ್ದೀರಿ. ಹಲವು ಸಕಾರಾತ್ಮಕ ಬದಲಾವಣೆಗೆ ಸಾಕ್ಷಿಯಾಗಲಿದ್ದೀರಿ. ಬರವಣಿಗೆ, ಕಲೆ, ಸಾಹಿತ್ಯ, ಸೌಂದರ್ಯ, ಉತ್ಪಾದನೆ, ನಿರ್ಮಾಣ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಏಳ್ಗೆ ಇದೆ. ದಾನಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಮಾಸದ ದ್ವಿತೀಯಾರ್ಧದಲ್ಲಿ ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಯಶಸ್ಸು ದೊರೆಯಲಿದೆ. ಆದರೆ ಇದಕ್ಕಾಗಿ ಮನಸಾರೆ ಪ್ರಯತ್ನಿಸಬೇಕು. ಮಕ್ಕಳ ಪ್ರಗತಿಯಿಂದ ಸಂತಸ ಉಂಟಾಗಲಿದೆ.ಶುಭ:8,15,26. ಅಶುಭ: 10,17,27.